ಆಲೂರು ಆಂಜನೇಯನ ಅದ್ದೂರಿ ಜಾತ್ರಾ
ಮುದ್ದೇಬಿಹಾಳ:-ತಾಲೂಕಿನ ಆಲೂರ ಗ್ರಾಮದ ಆಂಜನೇಯ ಜಾತ್ರಾ ಮಹೋತ್ಸವವು ಎಪ್ರಿಲ್ 23ರಿಂದ ಎಪ್ರಿಲ್ 30ರ ವರೆಗೆ ಅದ್ದೂರಿಯಾಗಿ ನಡೆಯುವುದು. ಎಪ್ರಿಲ್ 23 ಮಂಗಳವಾರದಂದು ಬೆಳ್ಳಿಗ್ಗೆ 9 ಗಂಟೆಗೆ ಸಕಲ ವಾದ್ಯ ವೈಭವಗಳೋಂದಿಗೆ ಶ್ರೀ ಆಂಜನೇಯ ಪಲ್ಲಕ್ಕಿ ಹಾಗೂ ಕಳಸವು ಗಂಗಸ್ಥಳಕ್ಕೆ ಹೋಗಿ ಬರುವುದು ಸಾಯಂಕಾಲ 5 ಗಂಟೆಗೆ ಊರಿನ ಪ್ರಮುಖ ಬೀದಿಯಲ್ಲಿ ಪಲ್ಲಕ್ಕಿ ಉತ್ಸವ ನಂತರ ಕಳಶ ಶಿಖರಕ್ಕೆ ಏರುವುದು. ಎಪ್ರಿಲ್ 26 ಶುಕ್ರವಾರದಂದು ಗ್ರಾಮಸ್ಥರಿಂದ ಗ್ರಾಮದೇವತೆಗೆ ಉಡಿತುಂಬುವ ಕಾರ್ಯ. ರಾತ್ರಿ 10 ಗಂಟೆಗೆ ಕಡೋಣಿ,ಹಾಗೂ ಜೋಗುಂಡಬಾವಿ ಗ್ರಾಮದ ಸುಪ್ರಸಿದ್ದ ಭಜನಾ ತಂಡದಿಂದ ಶಿವ ಭಜನೆ ನಡೆಯುವುದು.27 ಶನಿವಾರದಂದು ಮುಂಜಾನೆ 9 ಗಂಟೆಗೆ ಆಂಜನೇಯ ಮೂರ್ತಿಗೆ ಮಹಾರುದ್ರಾಭಿಷೇಕ ಸಾಯಂಕಾಲ 4 ಗಂಟೆಗೆ ಊರಿನ ಮುಖಂಡರಿಂದ ಕಳಸ ಬರಮಾಡಿಕೊಳ್ಳುವುದು. 5-30ಕ್ಕೆ ಪಲ್ಲಕ್ಕಿ ಉತ್ಸವದ ನಂತರ ಕೊಂಡ ತುಳುಕುವುದು. 28 ರವಿವಾರದಂದು ಸಾಯಂಕಾಲ 5 ಗಂಟೆಗೆ ಆಲೂರು ಮತ್ತು ಕೇಸಾಪೂರ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಹಾಲುಕೊಂಡ ತುಳುಕುಸುವುದು.ರಾತ್ರಿ 10 ಗಂಟೆಗೆ ರೊಕ್ಕ ಇದ್ದವನಿಗೆ ಸೊಕ್ಕ ಬಾಳ ಎಂಬ ಸಮಾಜಿಕ ನಾಟಕ ಜರುಗುವುದು.29 ಸೋಮವಾರದಂದು ಮುಂಜಾನೆ 8 ಗಂಟೆಗೆ ಕಡುಬಿನ ಕಾಳಗ. ನಂತರ ಕ್ರಿಕೆಟ್ ಪಂದ್ಯಾವಳಿ(ಮಿನಿ ಪೋರ್) ಪ್ರಥಮ 10001, ದ್ವೀತಿಯ 7001,ತೃತೀಯ5001 ರೂಪಾಯಿ ಬಹುಮಾನ ಇರುವುದು.30 ಮಂಗಳವಾರದಂದು ಮುಂಜಾನೆ 11ಗಂಟೆಗೆ ಗಟ್ಟಿ ಮೈದಾನದಲ್ಲಿ ತರಬಂಡಿ ಸ್ಪರ್ಧೆ ಇರುವುದು.ಒಂದನೇ ಬಹುಮಾನ 50001,ಎರಡನೇ 40001,ಮೂರನೇ30001,ನಾಲ್ಕನೇ 25001,ಐದನೇ 20001,ಆರನೇ15001,ಏಳನೇ10001,ಎಂಟನೇ 7501ಬಹುಮಾನ ಇರುವುದು. ಈ ಕಾರ್ಯಕ್ರಮಕ್ಕೆ ಸೂಚನೆಗಳು ಅನ್ವಯಿಸುವುದು.ಹೆಚ್ಚಿನ ಮಾಹಿತಿಗಾಗಿ 7259297566,9731210585 ಕರೆ ಮಾಡಬಹುದು ಎಂದು ಕಮೀಟಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.