ಇತ್ತೀಚೆಗೆ ನಡೆದ ಕಾರ್ಯಕ್ರಮ ಅಮೇರಿಕಾದ ಕಾರ್ನೆಗೀಯಲ್ಲಿ ಭಾರತೀಯ ಸೂರ್ಯೋದಯ 

ಇತ್ತೀಚೆಗೆ ನಡೆದ ಕಾರ್ಯಕ್ರಮ ಅಮೇರಿಕಾದ ಕಾರ್ನೆಗೀಯಲ್ಲಿ ಭಾರತೀಯ ಸೂರ್ಯೋದಯ 

2024 ರ ನ್ಯೂಯಾರ್ಕ್‌ನ ಕಾರ್ನೆಗೀ ಹಾಲ್‌ನ ಸ್ಟರ್ನ್ ಆಡಿಟೋರಿಯಂನಲ್ಲಿ ನಡೆದ ಅಖಿಲ ಭಾರತೀಯ ನೃತ್ಯೋತ್ಸವವು 'ತ್ರೀ ಅಕ್ಷ' ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ಹಿರಿಯ ನೃತ್ಯ ಗುರು ವಿಜಿ ರಾವ್ ಅವರ ಧ್ಯೇಯೋದ್ದೇಶಗಳಿಗೆ ಸಾಕ್ಷಿಯಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಅತ್ಯಂತ ಉತ್ಸಾಹದಿಂದ ಸಂರಕ್ಷಿಸುವ ಮತ್ತು ಭಾರತದ ಹೊರಗೆ ಉತ್ತೇಜಿಸುವುದೇ ಸಂಸ್ಥೆಯ ಮಹದಾಕಾಂಕ್ಷೆ.  

ಮೂರನೇ ಆವೃತ್ತಿಯಾದ ಈ ಬಾರಿಯ  ವಾರ್ಷಿಕ ಉತ್ಸವವು ಬಹುಪಾಲು ಅಮೇರಿಕನ್ ಸಂಜಾತ 480 ಯುವ ಮತ್ತು ಹಿರಿಯ ಕಲಾವಿದರ ಪ್ರತಿಭೆಯನ್ನು ಪ್ರದರ್ಶಿಸಿತು. ನೆರೆದಿದ್ದ 2800ಕ್ಕೂ ಹೆಚ್ಚು ಸಾಂಸ್ಕೃತಿಕವಾಗಿ ವೈವಿಧ್ಯಮಯ ಪ್ರೇಕ್ಷಕರ ಮನವನ್ನು ಗೆಲ್ಲುವುದರಲ್ಲಿ ಸಫಲವಾಯಿತು.
ಈ ಚಟುವಟಿಕೆಯ ಗುರಿಯು ಭಾರತದ ಶ್ರೀಮಂತ ಕಲಾಪ್ರಕಾರಗಳ ಬಗ್ಗೆ ಸಮುದಾಯಗಳಿಗೆ ಪರಿಚಯಿಸುವುದು ಮಾತ್ರವಲ್ಲದೆ ಶಿಕ್ಷಣವನ್ನೂ ನೀಡುವುದಾಗಿದೆ.

ಈ ಕಾಯಕ್ರಮವನ್ನು ವೈಶಿಷ್ಟ್ಯಪೂರ್ಣಗೊಳಿಸಿದ ಕಲಾ ಪ್ರಕಾರಗಳು 
1. ಶಾಸ್ತ್ರೀಯ ನೃತ್ಯ-ಭರತನಾಟ್ಯ, ಕಥಕ್, ಕೂಚಿಪುಡಿ, ಮತ್ತು ಒಡಿಸ್ಸಿ 
2. ಜಾನಪದ ನೃತ್ಯ-ಗರ್ಬಾ ಮತ್ತು ರಾಸ್
3. ಸಮುದಾಯ ಸಾಂಪ್ರದಾಯಿಕ ಕಲೆಗಳು-ತಿರುವಾದಿರ
4. ಸಹಯೋಗ ಪ್ರಸ್ತುತಿಗಳು-‘ಆದಿ’(ಕೊನ್ನಕ್ಕೋಲ್, ಚೆಂಡ ಮೇಳಮ್ ಮತ್ತು ಭರತನಾಟ್ಯ),‘ಅಮತರಾಸೋ ಸೂರ್ಯ ವಂದನ’(ತೈಕೋ ಡ್ರಮ್ಸ್ ಮತ್ತು ಭರತನಾಟ್ಯ)
5. ಭಾರತೀಯ ಸಮಕಾಲೀನ ನೃತ್ಯ

ಬೆಂಗಳೂರು ಮೂಲದ ಶಾಸ್ತ್ರೀಯ ಸಂಗೀತಗಾರರಾದ ಪ್ರವೀಣ್ ಡಿ ರಾವ್ ಮತ್ತು ಸಾಯಿ ವಂಶಿ ಅವರು ‘ಆದಿ’ ಸಹಯೋಗ ಪ್ರಸ್ತುತಿಯ ಭಾಗವಾಗಿದ್ದರು.
ಕಾರ್ಯಾಗಾರಗಳು, ಬೇಸಿಗೆ ಶಿಬಿರಗಳು, ಉಪನ್ಯಾಸ ಪ್ರದರ್ಶನಗಳು ಮತ್ತು ಸಹಯೋಗದ ಪ್ರಯತ್ನಗಳ ಮೂಲಕ, 'ತ್ರೀ ಅಕ್ಷ' ಸಂಸ್ಥೆಯು ಪ್ರೇಕ್ಷಕರನ್ನು ಪರಿಚಿತ ಸಂಪ್ರದಾಯಗಳೊಂದಿಗೆ ಮರುಸಂಪರ್ಕಿಸುವುದಲ್ಲದೆ, ಹೊಸ ಅಭಿಮಾನಿಗಳಿಗೆ ಈ ಆಳವಾದ ಕಲಾ ಪ್ರಕಾರಗಳನ್ನು ಪರಿಚಯಿಸುತ್ತಿದೆ ಹಾಗು ಸಮಗ್ರ ಜ್ಞಾನ, ವಿಮರ್ಶಾತ್ಮಕ ಚಿಂತನೆ, ಅಭಿವ್ಯಕ್ತಿ ಕೌಶಲ್ಯಗಳು ಮತ್ತು ಅಮೆರಿಕಾದ ಯುವಕರಲ್ಲಿ ವಿಶ್ವ ಪೌರತ್ವವನ್ನು ಬೆಳೆಸುತ್ತಿದೆ. ಸಾಂಸ್ಕೃತಿಕ ಶಿಕ್ಷಣ ಮತ್ತು ಇತರ ಸಹಯೋಗಗಳಿಗೆ 'ತ್ರೀ ಅಕ್ಷ' ಸಂಸ್ಥೆಯ ಬದ್ಧತೆಯು ಪ್ರಕಾಶಮಾನವಾಗಿ ಹೊಳೆಯುತ್ತಿದೆ, ಇದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಭಾರತೀಯ ಕಲೆಗಳ ಪ್ರಚಾರದಲ್ಲಿ ಮೂಲಾಧಾರವಾಗಿದೆ.