ಉಚಿತ ಆರೋಗ್ಯ ಶಿಬಿರ ಸದುಪಯೋಗ ಪಡೆದುಕೊಳ್ಳಿ:ಸಬ್ ಇನ್ಸ್ಪೆಕ್ಟರ್ ಅನಿತಾ.

ಉಚಿತ ಆರೋಗ್ಯ ಶಿಬಿರ ಸದುಪಯೋಗ ಪಡೆದುಕೊಳ್ಳಿ:ಸಬ್ ಇನ್ಸ್ಪೆಕ್ಟರ್ ಅನಿತಾ.

ಕೆಆರ್ ಪುರ: ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕೆಆರ್ ಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿತಾ ಅವರು ತಿಳಿಸಿದರು. ಕೆಆರ್ ಪುರದ ಶ್ರೀ ಲಕ್ಷ್ಮೀ ಮದರ್ ಅಂಡ್ ಚಿಲ್ಡ್ರನ್ ಹಾಸ್ಪಿಟಲ್ ನಲ್ಲಿ ಮಹಿಳೆಯರು ಹಾಗೂ ಮಕ್ಕಳಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರವನ್ನು‌ ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ಯುಗದಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿದ್ದು,ಸದೃಢ ಆರೋಗ್ಯ ಪಡೆಯುವ ನಿಟ್ಟಿನಲ್ಲಿ  ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು. ಮಗುವಿಗೆ ಜನ್ಮ‌ನೀಡಿದ ತಕ್ಷಣ ತಾಯ್ತನ ಆರಂಭವಾಗುತ್ತದೆ, ತಾಯಿ ಜನ್ಮ ಶ್ರೇಷ್ಟ ಜನ್ಮ ಎಂದು ಹೇಳಿದರು. ವೈದ್ಯರು ಉತ್ತಮ ಮಕ್ಕಳನ್ನು‌ ಹೆರಿಗೆ ಮಾಡಿ ಕಳುಹಿಸುತ್ತಾರೆ ನಾವು ಮಕ್ಕಳು ದಾರಿ ತಪ್ಪದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.ಹಿರಿಯ ವೈದ್ಯರಾದ ಸಂದ್ಯಾರಾಣಿ ಮಾತನಾಡಿ, ಹೆಣ್ಣು ಮಕ್ಕಳ ಆರೋಗ್ಯವೃದ್ದಿಸುವ ದೃಷ್ಟಿಯಿಂದ ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡಿದ್ದು ಕೆಆರ್ ಪುರ ಕ್ಷೇತ್ರದ ಫಲಾನುಭವಿಗಳು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು. ಶ್ರೀ ಲಕ್ಷ್ಮೀ ಗ್ರೂಪ್ ಸಂಸ್ಥಾಪಕರಾದ ಡಿ.ಜಯಮಾಲಾ, ಸಿಇಒ ರಾಘವೇಂದ್ರ, ವೈದ್ಯರಾದ ಸಂದ್ಯಾರಾಣಿ,
ಡಾ.ಮಹೇಂದ್ರ, ಡಾ.ಮಂಜುನಾಥ್, ಸಿಬ್ಬಂದಿ ವರ್ಗ  ಉಪಸ್ಥಿತರಿದ್ದರು.