ಪ್ರತಿಷ್ಠೆಯಿಂದಾಗಿ ಕುರುಬರಹಳ್ಳಿ ದೇವಾಲಯಕ್ಕೆ ಬೀಗ..

ಪ್ರತಿಷ್ಠೆಯಿಂದಾಗಿ ಕುರುಬರಹಳ್ಳಿ ದೇವಾಲಯಕ್ಕೆ ಬೀಗ..

ಕೊರಟಗೆರೆ : ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಕುರಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ಭ್ರಹ್ಮ ರಥೋತ್ಸವ, ನೂತನವಾಗಿ ನಿರ್ಮಿಸಿರುವ ಗೋಪುರ ಹಾಗೂ ಸೀತಾರಾಮ ಕಲ್ಯಾಣ ಮತ್ತು ಜಾತ್ರಾ ಮಹೋತ್ಸವವು ಗ್ರಾಮದ ಎರಡು ಗುಂಪುಗಳ ಘರ್ಷಣೆಯಿಂದ ತಾಲ್ಲೂಕು ಆಡಳಿತದ ಅಂಗಳದಲ್ಲಿ ನ್ಯಾಯಬೇಕೆಂದು ದಿನಕ್ಕೊಂದು ತಿರುವು ಪಡೆಯುತ್ತಿದೆ..

ಅದ್ಯಾವುದೋ ಕಾಣದ ಕೈಗಳ ಕೈವಾಡದಿಂದ ಕುರುಬರಹಳ್ಳಿ ಗ್ರಾಮದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗಿದ್ದು. ಕೊರಟಗೆರೆ ತಾಲ್ಲೂಕು ಆಡಳಿತಕ್ಕೆ ಮತ್ತು ಪೊಲೀಸ್ ಇಲಾಖೆಗೆ ಈ ಘಟನೆಯು ತಲೆ ನೋವಿನ ಸಂಗತಿಯಾಗಿದೆ..

ಗ್ರಾಮದ ಒಂದು ಗುಂಪು ಕಳೆದ ಸೋಮವಾರ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಮಾಡದ ಬೆನ್ನಲ್ಲಿ ನೆನ್ನೆಯೂ ಕೂಡ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿದ ಗೌಡರ ಬೆಂಬಲಿಗರು ಗ್ರಾಮದ ಒಂದು ಗುಂಪು ಮಾತ್ರ ತರಾತುರಿಯಲ್ಲಿ ಜಾತ್ರೆ ಮಾಡಲು ಹೊರಟಿದ್ದು ಶಾಂತಿ ಸಭೆ ನಡೆಸಿ  ಅನುಮತಿ ನೀಡಬೇಕು ಆಗ್ರಹಿಸಿದ್ದರು..

ನೆನ್ನೆಯು ಸಹ ಗ್ರಾಮದ ಗೌಡರ ಬೆಂಬಲಿಗರು ಮತ್ತು ಗ್ರಾಮಸ್ಥರು ದಿನಕ್ಕೊಂದು ಗುಂಪಿನಂತೆ ತಹಶೀಲ್ದಾರ್ ಕಚೇರಿ ಬಳಿ ಬಂದು ಜಾತ್ರೆ ಶಾಂತಿಯುತವಾಗಿ ನಡೆಯಬೇಕೆಂದು ಮನವಿ ಸಲ್ಲಿಸುತ್ತಿದ್ದಾರೆ..

ಕಳೆದ ವರ್ಷ ಜಾತ್ರಾ ಮಹೋತ್ಸವದ ಕರಪತ್ರದ ವಿಚಾರಕ್ಕೆ ಗಲಾಟೆಯಾಗಿ ಗೌಡರ ಮೇಲೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು..

ಗ್ರಾಮದ ಎಲ್ಲಾ ಜನಾಂಗದವರು ಹಿರಿಯರು ಸೇರಿ ಶಾಂತಿಯುತವಾಗಿ ಗೌಡರ ಬೆಂಬಲದೊಂದಿಗೆ ಜಾತ್ರೆ ಮಾಡಲು ಕಾನೂನುಬದ್ಧವಾಗಿ ತಾಲ್ಲೂಕು ಆಡಳಿತ ಅನುಮತಿ ನೀಡಬೇಕು. ಗ್ರಾಮದಲ್ಲಿ ಶಾಂತಿ ಸಭೆ ಕರೆದು ಎಲ್ಲರನ್ನೂ ಒಗ್ಗೂಡಿಸಿ ಜಾತ್ರೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ತಹಶಿಲ್ದಾರ್ ಮಂಜುನಾಥ್ ಕೆ ರವರಿಗೆ ಸಲ್ಲಿಸಿದರು..

ಗ್ರಾಮದ ಮುಖಂಡ ಸಿದ್ಧರಾಜು ಮಾತನಾಡಿ ಒಂದು ಗುಂಪಿನ ಸದಸ್ಯರು ಸುಖಾಸುಮ್ಮನೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಹೆಸರನ್ನು ಈ ವಿಚಾರದಲ್ಲಿ ಪ್ರಸ್ತಾಪ ಮಾಡುವುದು ಸರಿಯಲ್ಲ
ಶಾಸಕರಾದ ಡಾ. ಜಿ ಪರಮೇಶ್ವರ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ರವರಿಗೆ ಈ ನಮ್ಮ ಊರಿನ ವಿಚಾರಕ್ಕೆ ಸಂಬಂಧವೇ ಇಲ್ಲ..ವಿಷಯದಲ್ಲಿ ಅವರ ಹೆಸರು ತರುವುದು ತಪ್ಪು ಎಂದು ತಿಳಿಸಿದರು ..

 ಗ್ರಾಮಸ್ಥರ ಮೇಲೆ ಬೇಸರ ವ್ಯಕ್ತಪಡಿಸಿದ ತಹಶೀಲ್ದಾರ್ ಮಂಜುನಾಥ್ ಕೆ..

ಗ್ರಾಮದ ಇಬ್ಬರ ವಯಕ್ತಿಕ  ವಿಚಾರವನ್ನು ಪದೇ ಪದೇ ಎತ್ತಿ ಹಿಡಿಯುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ ತಹಶೀಲ್ದಾರ್.. ಮೂರನೇ ವ್ಯಕ್ತಿಗಳ ಮಾತು ಕೇಳಿ  ಗ್ರಾಮದಲ್ಲಿ ಗಲಾಟೆ ಮಾಡುವುದು ಸರಿಯಲ್ಲ ಗ್ರಾಮದಲ್ಲಿ ಮೂಡಿರುವ ಅಶಾಂತಿಯನ್ನು ಶಾಂತಿಗೊಳಿಸುವಂತೆ
ಗ್ರಾಮಸ್ಥರಿಂದ ತಹಶೀಲ್ದಾರ್ ಮಂಜುನಾಥ್ ರವರಿಗೆ ಮನವಿ..

ಇದೆ ರೀತಿ ಎರಡೂ ಗುಂಪಿನ ನಡುವೆ ವಾಕ್ಸಮರ ಮುಂದುವರೆದಿದೆ ಈ ವಿಚಾರ ಎಲ್ಲಿಗೆ ತಲುಪುತ್ತದೆ ಎಂದು ಸ್ಥಳೀಯ ನಾಗರಿಕರು ಕಳವಳ ವ್ಯಕ್ತಪಡಿಸಿದರು.ಪರ ವಿರೋಧದ ನಡುವಿನ ಜಗಳಕ್ಕೆ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ತೆರೆ ಎಳೆಯಬೇಕಿದೆ..