ಎಸ್ ಬಿ ಐ ವಿರುದ್ದ ರೈತರಿಂದ ಪ್ರತಿಭಟನೆ  

ಎಸ್ ಬಿ ಐ ವಿರುದ್ದ ರೈತರಿಂದ ಪ್ರತಿಭಟನೆ  
ಸಂತೇಮರಹಳ್ಳಿ : ಇಲ್ಲಿನ ಎಸ್ ಬಿ ಐ ಬ್ಯಾಂಕ್ ಸಿಬ್ಬಂದಿ ಕನ್ನಡ ವಿರೋಧಿ ಹಾಗೂ ಗ್ರಾಹಕರ ನಿರ್ಲಕ್ಷ ದೋರಣೆಯ ವಿರುದ್ಧ ನೂರಾರು ರೈತರು ಜಮಾಯಿಸಿ ಬ್ಯಾಂಕ್ ಎದರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. 
 ಪ್ರತಿಭಟನೆ ವೇಳೆ ಬ್ಯಾಂಕ್ ಬಳಿ ನೂರಾರು ರೈತರು ಜಮಾಯಿಸಿ ಪ್ರತಿಭಟನೆ ನಡೆಸಿದರು. 
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರೈತ ಸಂಘದ ಅಧ್ಯಕ್ಷ ಸಿದ್ದರಾಜು ಮಾತನಾಡಿ ಸಂತೇಮರಹಳ್ಳಿ ಎಸ್ ಬಿ ಐ ಶಾಖೆಯಲ್ಲಿರುವ ಸಿಬ್ಬಂದಿಗಳಿಗೆ ಕನ್ನಡ ಭಾಷೆ ಕೊರತೆಯಿಂದ ಗ್ರಾಹಕರಿಗೆ ಬ್ಯಾಂಕ್ ಜೊತೆ ವ್ಯವಹಾರ ಮಾಡಲು ತೊಂದರೆಯಾಗುತ್ತದೆ. 
ರೈತರು ಬ್ಯಾಂಕಿಗೆ ಬಂದಾಗ ಅಲ್ಲಿನ ಸಿಬ್ಬಂದಿಗಳು ಸರಿಯಾದ ರೀತಿಯಲ್ಲಿ ಸ್ಪಂದನೆ ಮಾಡದೇ ಇರವುದು ಹಾಗೂ ಮಾಹಿತಿ ಕೇಳಿದರೆ ಪ್ರಾದೇಶಿಕ ಕಚೇರಿಗೆ ಹೋಗಿ ಹೇಳುವುದು ಇವರ ಕೆಲಸವಾಗಿದೆ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.
ನಂತರ ಮಹೇಶ್ (ದೊಡ್ಡಣ್ಣ ) ಬೇರೆ ಬ್ಯಾಂಕ್ ನ ಚೆಕ್ ಹಣ ಎಸ್ ಬಿ ಐ ಖಾತೆಗೆ ವರ್ಗವಣೆಯಾಗಬೇಕಾದರೆ 15 ದಿನ ಕಾಲಾವಕಾಶ ತಗೆದುಕೊಳ್ಳುವುದರಿಂದ ತುಂಬಾ ತೊಂದರೆ ಆಗುತ್ತದೆ ಹಾಗೂ ಒನ್ ಸೆಟ್ಲ್ ಮೆಂಟ್ ನಲ್ಲಿ ಸಾಲ ಪಾವತಿ ಮಾಡಿದರು ಮರು ಸಾಲ ನೀಡುತ್ತಿಲ್ಲ ಕಾರಣ ಗೊತ್ತಿಲ್ಲ ಹಾಗೂ ಗ್ರಾಹಕರಿಗೆ ಅನುಕೂಲವಾಗುವಂತೆ ಮಾಹಿತಿ ಕೇಂದ್ರ ತೆರೆಯಬೇಕು.
 ಗ್ರಾಹಕರಿಗೆ ಅನುಕೂಲವಾಗುವಂತೆ ನಾಮ ಫಲಕ ಹಾಕಬೇಕು ಮತ್ತು ಸಂತೇಮರಹಳ್ಳಿಗೆ ಗ್ರಾಹಕರ ಹಿತ ದೃಷ್ಟಿಯಿಂದ ಮತ್ತೊಂದು ರಾಷ್ಟ್ರೀಯ ಬ್ಯಾಂಕ್ ಕೊರತೆ ಎದ್ದು ಕಾಣುತ್ತಿದೆ ಎಂದರು. 
ಈ ಬಳಿಕ ಎಸ್ ಬಿ ಐ ರೀಜಿನಲ್ ಬ್ಯಾಂಕ್ ಮೆನೇಜರ್ ಮಾತನಾಡಿ ಮುಂಬರುವ ದಿನಗಳಲ್ಲಿ ಗ್ರಾಹಕರು ಮತ್ತು ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸದರು. 
ಈ ಸಂದರ್ಭದಲ್ಲಿ ರೈತ ಮುಖಂಡರಾದ ಡಿ ಪಿ ಪ್ರಕಾಶ್, ದೇಶವಳ್ಳಿ ರಾಜು, ಮಹೇಶ್ ಕುಮಾರ್, ಮಂಜು ಹೆಗ್ಗವಾಡೀಪುರ, ನಂಜುಂಡಶೆಟ್ಟಿ, ಸತೀಶ್, ಎಂ ಶಂಕರಪ್ಪ, ಸುಗಂಧರಾಜ್, ಮಹೇಶ್ ಸಂತೇಮರಹಳ್ಳಿ, ನಂದೀಶ್, ಮಹದೇವಪ್ಪ ಮತ್ತಿತರರು ಇದ್ದರು.