ಒಡನಾಡಿ

ಒಡನಾಡಿ

ಒಳಗೆ ನೋವಿದ್ದರೂ ತೋರಲಾಗದೆ
ಕೊರಗುವೆಯೇತಕೆ ಬೆನ್ನ ಹಿಂದೆ !
ಅದಕಿಲ್ಲಿ ವೈದ್ಯರ ಅಗತ್ಯವಿಲ್ಲ
ಚುಚ್ಚುಮದ್ದಿಗೆ ಬಗ್ಗುವುದಿಲ್ಲ...!!

ಶರೀರದ ಕಾಯಿಲೆಯಾಗಿದ್ದರೆ
ಹೆದರುವ ಅಗತ್ಯವಿರಲಿಲ್ಲ..!
ಆದರೆ ಅದರಾಚೆಗೂ ಏನೋ ಇದೆ
ತಿಳಿಸಿ ಮುಂದೆ ಸಾಗಬಹುದು !!

ಬಡಿತ ಕಮ್ಮಿಯಾಗಿ ಸುಮ್ಮನಿದ್ದರೆ
ಮರುಭೂಮಿಯಂತಾಗಬಹುದು !
ಆದರೆ ಪುಟ್ಟ ಹೃದಯಕ್ಕೆ ಅವಶ್ಯಕತೆಯಿಲ್ಲ
ಬೇರೆ ನಾಳದ ಸರಿ ಬೆಸ ಗೊತ್ತು ಒಡನಾಡಿಗೆ !!

ಧನ್ಯವಾದ ಹೇಳಬಹುದು
ನೀ ಅತ್ತು ಒಮ್ಮೆ ನಕ್ಕಾಗ
ಅದುವೆ ಆನಂದ ಬಾಷ್ಫವೆಂದು
ಮಿಡಿತ ಸುಮ್ಮನಿಲ್ಲ ಅದಕೂ ಗೊತ್ತಿದೆ !!

ಕಣ್ಣಿಗೀಗ ತುಂಬಾ ವಿಶ್ರಾಂತಿ ಸಿಕ್ಕಿದೆ ಎಂದು ಭಾವಿಸಿದೆ ಬೇಡುವ ಕಂಗಳು !
ಧರೆಯ ಸೇರಿದ ಹನಿ ಒಡೆದು
ಬಿಕ್ಕಳಿಕೆಯ ರೂಪ ತಾಳಿದೆ !!

ಒಡನಾಡಿಯ ನಾಡಿ ಮಿಡಿತ
ಅರ್ಥವಾಗಿರಬೇಕು ಪ್ರೀತಿಗೆ !
ಬಣ್ಣ ಬಣ್ಣದ ಕನಸಿಗೆ ಒಮ್ಮೆಲೆ
ರೆಕ್ಕೆ ಬಂದೀಗ ಬಾನಗಲ ಹಾರಿದೆ !!

✒️✒️✒️✒️✒️✒️✒️✒️✒️

ಟಿ.ನಿರಂಜನಮೂರ್ತಿ
ಅರಸೀಕೆರೆ
ಹಾಸನ ಜಿಲ್ಲೆ