ಫೆಬ್ರವರಿ 1,2025. ಕೈಗಾರಿಕೋದ್ಯಮಿ ಹಾಗೂ ಸಮಾಜ ಸೇವೆ ಮಾಡುತ್ತಾ ಬಂದಿರುವ ಎಂ.ಹೆಚ್. ದಾಲ್ಮಿಯಾ ರವರು ಅತಿ ಕಡಿಮೆ ದೃಷ್ಟಿಯುಳ್ಳ ಮೂವತ್ತೈದು ಮಂದಿಗೆ ಎಸ್ ಹೆಚ್ ಜಿ ಟೆಕ್ನಾಲಜಿ ಸಹಯೋಗದೊಂದಿಗೆ ನಾರಾಯಣ ನೇತ್ರಾಲಯದಲ್ಲಿ ಔರಾ ವಿಷನ್ ವಿಶೇಷ ಕನ್ನಡಕಗಳನ್ನು ಕೊಡುಗೆಯಾಗಿ ನೀಡಿದರು.ಈ ಕನ್ನಡಕಗಳು ವಿಶೇಷ ತಂತ್ರಜ್ಞಾನದಿಂದ ಕೂಡಿದ್ದು ಅಂಧತ್ವ ಹೊಂದಿರುವವರ ಬಾಳಿಗೆ ಬೆಳಕಾಗಲಿದೆ.ನಾರಾಯಣ ನೇತ್ರಾಲಯ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ದಾಲ್ಮಿಯಾರವರು ಮಾತನಾಡುತ್ತಾ "ಕೊಡುಗೆ ನೀಡುವುದು ಎಂದರೆ ಕೇವಲ ಏನನ್ನೋ ನೀಡುವುದಷ್ಟೇ ಅಲ್ಲ ಅದು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವುದಾಗಿದೆ". ಎಂದರು.ಈ ಕಾರ್ಯಕ್ರಮದಲ್ಲಿ ದಾಲ್ಮಿಯಾ ದಂಪತಿಗಳು, ನಾರಾಯಣ ನೇತ್ರಾಲಯದ ಸಿಇಓ ಕ್ಯಾಪ್ಟನ್ ಎಸ್ ಕೆ ಮಿತ್ತಲ್, ಎಸ್ ಹೆಚ್ ಜಿ ಟೆಕ್ನಾಲಜೀಸ್ನ ಸಿಇಓ ಸೀತಾರಾಂ ಮುತ್ತಂಗಿ, ಮಕ್ಕಳ ನೇತ್ರತಜ್ಞರಾದ ಡಾ. ಭಾನುಮತಿ ಹಾಗೂ ಡಾ. ಸುಮಿತಾ ಮುತು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಇಸ್ಕಾನ್ ದೇವಾಲಯದ ಶ್ರೀ ರಘುಕುಲ ನಂದನ ದಾಸ್ ಪ್ರಭುಗಳು ಆಶೀರ್ವಚನ ನೀಡಿದರು.