ಸಂತೇಮರಹಳ್ಳಿ: ಸಮೀಪದ ಕೆಂಪನಪುರ ಗ್ರಾಮ ಪಂಚಾಯ್ತಿಗೆ ಒಳಪಡುವ ಕಣ್ಣೆಗಾಲ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ನೂತನವಾಗಿ ನಿರ್ಮಾಣವಾದ ಅಂಗನವಾಡಿ ಕಟ್ಟಡ ಉದ್ಘಾಟನೆಯನ್ನು ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣ ಮೂರ್ತಿ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಈ ಭಾಗದಲ್ಲಿ ಹಲವು ಗ್ರಾಮಗಳಿಗೆ 2 ಕೋಟಿ ವೆಚ್ಚದಲ್ಲಿ ಭೂಮಿ ಪೂಜೆ ನೆರವೇರಿಸುವುದರ ಜೊತೆಗೆ ಕಣ್ಣೆಗಾಲ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಕೇಂದ್ರ ಹಾಗೂ ನೂತನ ಅಂಗನವಾಡಿ ಕಟ್ಟಕ್ಕೆ ಚಾಲನೆ ಸಲ್ಲಿಸಲಾಯಿತು. ಈಗಾಗಲೇ ಕೆಂಪನಪುರ ಗ್ರಾಮದಿಂದ 209 ಮುಖ್ಯ ರಸ್ತೆ ತನಕ 3 ಕೋಟಿ ವೆಚ್ಚದಲ್ಲಿ ಡಾಂಬರು ರಸ್ತೆಯನ್ನು ಅತೀ ಶೀಘ್ರದಲ್ಲಿ ಗುದ್ದಲಿ ಪೂಜೆಗೆ ಚಾಲನೆ ನೀಡಲಾಗುವುದು ಎಂದರು. ಅಂಗನವಾಡಿ ನೂತನ ಕಟ್ಟಡಕ್ಕೆ ಚಾಲನೆ ನೀಡಿ ಗ್ರಾಮಗಳಲ್ಲಿ ಅಂಗನವಾಡಿ ದುರುಪಯೋಗ ಆಗಬಾರದು ಸದುಪಯೋಗವಾಗ ಬೇಕು ಎಂದರು .ನಂತರ ಗ್ರಾ ಪಂ ಅಧ್ಯಕ್ಷ ಆರ್ ಮಾದೇಶ್ ಮಾತನಾಡಿ ನಮ್ಮ ನಮ್ಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಸಾಕಷ್ಟು ಅನುದಾನ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಿ ನಮ್ಮ ಪಂಚಾಯ್ತಿ ಅಭಿವೃದ್ಧಿಗೆ ಪೂರಕವಾಗಿ ನಿಲ್ಲಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾ ಪಂ ಉಪಾಧ್ಯಕ್ಷೆ ಶೀಲಾನಾಗಣ್ಣ, ಸದಸ್ಯರಾದ ರಾಮನಾಯ್ಕ, ತಾಯಮ್ಮ, ಸೋಮಣ್ಣ, ಮಹದೇವಸ್ವಾಮಿ , ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಶಿವಶಂಕರ, ಪಿ ಡಿ ಓ ರಾಮೇಗೌಡ, ಮುಖಂಡರಾದ ಗುರುಸಿದ್ದಪ್ಪ,, ಮಲ್ಲಣ್ಣ, ಕೆ ಸಿ ನಾಗಣ್ಣ, ಪುಟ್ಟಬುಡ್ಡಿ ರೇವಣ್ಣ ಸೊಮ್ಮಣ್ಣ, ಸಿಡಿಪಿಓ ಜಯಶೀಲಾ, ಚಾಮುಲ್ ನಿರ್ದೇಶಕ ರೇವಣ್ಣ,ನಿರ್ಮಿತಿ ಕೇಂದ್ರದ ಇಂಜಿನಿಯರ್ ನಂದೀಶ್ ಮತ್ತಿತರರು ಇದ್ದರು.