ಕರುನಾಡು ಸರ್ವಜನ ವೇದಿಕೆಯ ರಾಜ್ಯ ಮಟ್ಟದ  ಸ್ವಾಭಿಮಾನ ಸಮಾವೇಶ ಡಿ.28 ರಂದು ಆಯೋಜನೆ ಮಾಡಲಾಗಿದೆ

ಕರುನಾಡು ಸರ್ವಜನ ವೇದಿಕೆಯ ರಾಜ್ಯ ಮಟ್ಟದ  ಸ್ವಾಭಿಮಾನ ಸಮಾವೇಶ ಡಿ.28 ರಂದು ಆಯೋಜನೆ ಮಾಡಲಾಗಿದೆ

ಚನ್ನರಾಯಪಟ್ಟಣ: ಕರುನಾಡು ಸರ್ವಜನ ವೇದಿಕೆಯ ಮೊದಲನೇ ವರ್ಷದ ರಾಜ್ಯ ಮಟ್ಟದ ಸ್ವಾಭಿಮಾನ ಸಮಾವೇಶ ಹಾಗೂ ರಾಷ್ಟ್ರಕವಿ ಕುವೆಂಪು ಅವರ 120ನೇ ಜಯಂತೋತ್ಸವ ಕಾರ್ಯಕ್ರಮ ಡಿ.28ರಂದು ಪೊಲೀಸ್ ಠಾಣೆ ಎದುರು ಇರುವ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಕರುನಾಡ ಸರ್ವಜನ ವೇದಿಕೆಯ ರಾಜ್ಯ ಘಟಕದ ಗೌರವ ಅಧ್ಯಕ್ಷ ಕೆ.ಎಂ ನಾಗೇಂದ್ರ ಬಾಬು ರವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿಯವರು, ಚಂದ್ರಶೇಖರ್ ಗುರೂಜಿ, ಗುರುಮೂರ್ತಿ ಗುರೂಜಿ, ಚೈತನ್ಯ ಬಸವೇಶ್ವರ ಸ್ವಾಮೀಜಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಾಸಕ ಸಿ ಎನ್ ಬಾಲಕೃಷ್ಣ ರವರಿಗೆ ಆಧುನಿಕ ಭಗೀರಥ ಎಂಬ ಬಿರುದುನ್ನು ನೀಡಿ ಪ್ರಶಸ್ತಿ ಪ್ರಧಾನ ಮಾಡುವರು.ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಶರತ್ ಭ ಗೌಡ ಉಪಾಧ್ಯಕ್ಷ ಶರತ್ ಕುಮಾರ್ ಜಿಲ್ಲಾ ಅಧ್ಯಕ್ಷ ಕಿರಣ್ ರಾಜು, ತಾಲೂಕು ಎ. ಘಟಕದ ಕಾರ್ಯದರ್ಶಿ ಪ್ರಭಾಕರ್, ಅಭಿಲಾಶ್ ಹೇಳಿದಂತೆ ಇತರರು ಹಾಜರಿದ್ದರು.