'ಕರ್ನಾಟಕ ಸಂಗೀತ ಪಿತಾಮಹ' ಶ್ರೀ ಪುರಂದರದಾಸರ ಆರಾಧನೆಯ ಪ್ರಯುಕ್ತ 'ಗಾನಕಲಾ ಕಸ್ತೂರಿ' ಸಾಂಸ್ಕೃತಿಕ ಕಾರ್ಯಕ್ರಮ

'ಕರ್ನಾಟಕ ಸಂಗೀತ ಪಿತಾಮಹ' ಶ್ರೀ ಪುರಂದರದಾಸರ ಆರಾಧನೆಯ ಪ್ರಯುಕ್ತ 'ಗಾನಕಲಾ ಕಸ್ತೂರಿ' ಸಾಂಸ್ಕೃತಿಕ ಕಾರ್ಯಕ್ರಮ

ಬೆಂಗಳೂರು: 'ಕರ್ನಾಟಕ ಸಂಗೀತ ಪಿತಾಮಹ' ಶ್ರೀ ಪುರಂದರದಾಸರ ಆರಾಧನೆಯ ಪ್ರಯುಕ್ತ ಜ. 29 ರಂದು ಶ್ರೀ ಶ್ರೀನಿವಾಸ ಉತ್ಸವ ಬಳಗದವರು ಬಸವನಗುಡಿಯ ಉತ್ತರಾದಿ ಮಠದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  'ಗಾನಕಲಾ ಕಸ್ತೂರಿ' ಪ್ರಶಸ್ತಿ ಪುರಸ್ಕೃತ ವಿದ್ವಾನ್ ಶ್ರೀ ಚಿಂತಲಪಲ್ಲಿ ವಿ ಶ್ರೀನಿವಾಸ್ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ವಿದ್ವಾನ್ ಶ್ರೀ ಅಚ್ಚುತರಾವ್, ಮೃದಂಗ‌ ವಾದನದಲ್ಲಿ ವಿದ್ವಾನ್ ಶ್ರೀ ಬಾಲಸುಬ್ರಹ್ಮಣ್ಯ ಮತ್ತು ತಬಲಾ ವಾದನದಲ್ಲಿ ವಿದ್ವಾನ್ ಶ್ರೀ ಎಸ್. ಶ್ರೀನಿವಾಸ ಅನಂತರಾಮಯ್ಯ ಸಾಥ್ ನೀಡಿದರು.