ಕಸಾಪ ಅಧ್ಯಕ್ಷರಿಗೆ ತಾಲ್ಲೂಕಿನ ಪತ್ರಕರ್ತರಿಂದ ಸನ್ಮಾನ

ಕಸಾಪ ಅಧ್ಯಕ್ಷರಿಗೆ ತಾಲ್ಲೂಕಿನ ಪತ್ರಕರ್ತರಿಂದ ಸನ್ಮಾನ

ಪೋಲೀಸ್ ಇಲಾಖೆಯಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿ ಹವಾಲ್ದಾರ್ ಹುದ್ದೆಗೆ ಪಧೋನ್ನತಿ ಹೊಂದಿದ ಸಂಗನಗೌಡ ಬಿರಾದಾರ ಮತ್ತು ಚಿದಂಬರೇಶ ಕುಲಕರ್ಣಿ ಅವರಿಗೆ ನೂತನ ಕಸಾಪ ಅದ್ಯಕ್ಷರಿಂದ ಸನ್ಮಾನ.

ಮುದ್ದೇಬಿಹಾಳ:-ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ಕಾಮರಾಜ ಬಿರಾದಾರ ಅವರಿಗೆ ಮುದ್ದೇಬಿಹಾಳ ತಾಲ್ಲೂಕಿನ ಪತ್ರಕರ್ತರಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಮುಂಜಾನೆ  10 ಗಂಟೆಗೆ ಶಾಲು ಹೊದಿಸಿ ಸನ್ಮಾನಿಸಿಲಾಯಿತು. ಸನ್ಮಾನಿತ ಅಧ್ಯಕ್ಷರಾದ ಕಾಮರಾಜ ಬಿರಾದಾರ ಅವರು ಮಾತನಾಡಿ ನನಗೆ ಸಣ್ಣ ವಯಸ್ಸಿನಲ್ಲಿ ಇಷ್ಟು ದೊಡ್ಡ ಹುದ್ದೆ ಸಿಗುತ್ತೆ ಅಂತ ಅಂದುಕೊಂಡಿರಲಿಲ್ಲ.ಸಿಕ್ಕಿದೆ ಅದು ಭಗವಂತನ ಇಚ್ಛೆ. ಆದರೆ ಅದನ್ನು ನಾನಿ ನಿಭಾಯಿಸಿಕೊಂಡು ಹೋಗುವುದು ಬಹಳ ಕಷ್ಟ.ಅದನ್ನು ಮೀರಿ ನಾನು ನನಗೆ ವಹಿಸಿದ ಕೆಲಸವನ್ನು ಶ್ರದ್ಧಾ ಭಕ್ತಿಯಿಂದ ಪೂರೈಸುತ್ತೆನೆ.ಅದಕ್ಕೆ ಮಾಧ್ಯಮದವರು ನೀವು ನನಗೆ  ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಕೇಳಿದಾಗ ಹಿರಿಯ ಪತ್ರಕರ್ತರಾದ ಡಿ ಬಿ ವಡವಡಗಿ, ಪುಂಡಲೀಕ ಮುರಾಳ,ಶಂಕರ ಹೆಬ್ಬಾಳ, ನಾರಾಯಣ ಮಾಯಾಚಾರಿ,ಅನಿಲ ತೆಲಂಗಿ ಸೇರಿದಂತೆ ಇನ್ನಿತರರು ಕನ್ನಡ ಭಾಷೆಯಲ್ಲಿ ಮತ್ತು ಸಾಹಿತ್ಯದಲ್ಲಿ ಆದ ಬದಲಾವಣೆ ಮತ್ತು ಆಗುವ ಪರಿಣಾಮಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೇಳಿದರು.ಹಿರಿಯರಾದ ವಾಯ್ ಎಚ್ ವಿಜಯಕರ್, ಮೈಬೂಬ ಗೊಳಸಂಗಿ, ಹುಸೇನ್ ಮುಲ್ಲಾ ಕಾಳಗಿ, ಸದು ಮಠ, ಸಂಗಣ್ಣ ಮೇಲಿನಮನಿ, ಬಸಲೀಂಗಪ್ಪ ರಕ್ಕಸಗಿ ಸೇರಿದಂತೆ ಇನ್ನಿತರರು  ಇದ್ದರು.ನಂತರ ಪೋಲಿಸ್ ಇಲಾಖೆಯಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿ ಹವಾಲ್ದಾರ್ ಹುದ್ದೆಗೆ,  ಪಧೋನ್ನತಿ ಹೊಂದಿನ ಸಂಗನಗೌಡ ಬಿರಾದಾರ ಮತ್ತು ಚಿದಂಬರೇಶ ಬೀಮರಾವ್ ಕುಲಕರ್ಣಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಅಧ್ಯಕ್ಷರಾದ ಕಾಮರಾಜ ಬಿರಾದಾರ ಸೇರಿದಂತೆ ಪತ್ರಕರ್ತರು ಸನ್ಮಾನಿಸಿ ಗೌರವಿಸಿದರು.