ಕಾಡಾನೆ ದಾಳಿಗೆ 15 ಲಕ್ಷ ರೂ ಮರಗಳು ನಾಶ

ಕಾಡಾನೆ ದಾಳಿಗೆ 15 ಲಕ್ಷ ರೂ ಮರಗಳು ನಾಶ

ಹಲಗೂರು: ಸಮೀಪದ ಎಚ್.ಬಸಾಪುರ ಗ್ರಾಮದ ಮಾದೇಗೌಡ ಎಂಬುವರ ಜಮೀನಿಗೆ ತಡರಾತ್ರಿ 5 ಕಾಡಾನೆಗಳು ದಾಳಿ ಮಾಡಿ. 15 ಲಕ್ಷ ರೂ ಬೆಲೆಬಾಳುವ ತೇಗದ ಮರಗಳನ್ನು ಮುರಿದು ಹಾಕಿರುವ ಘಟನೆ ಜರುಗಿದ್ದು. ಜಮೀನಿನ ಮಾಲೀಕರಾದ ಮಾದೇಗೌಡ ರವರ ಪುತ್ರ ಆನಂದ್ ರವರು ಮಾತನಾಡಿ. ನಮ್ಮ ಜಮೀನಿಗೆ ಪದೇ ಪದೇ ಕಾಡಾನೆಗಳು ಬಂದು ಸುಮಾರು 15 ಲಕ್ಷ ರೂ ಬೆಲೆ ಬಾಳುವ ಮರಗಳನ್ನು ಮುರಿದು ಹಾಕಿದ್ದು. ಬಸವನ ಬೆಟ್ಟದ ರಸ್ತೆಯಲ್ಲಿರುವ ಚೆಕ್ ಪೋಸ್ಟ್ ನಲ್ಲಿ ಗೇಟ್ ಇದ್ದು ಗೇಟ್ ಅನ್ನು ಹಾಕುತ್ತಿಲ್ಲ. ಅರಣ್ಯ ಇಲಾಖೆಯವರು ನಿರ್ಲಕ್ಷ್ಯದಿಂದ ಗ್ರಾಮದ ಸುತ್ತಮುತ್ತಲಿನ ಜಮೀನುಗಳಿಗೆ ಆನೆಗಳು ದಾಳಿ ಮಾಡುತ್ತಿದ್ದು ಸರ್ಕಾರ ಇತ್ತ ಗಮನಿಸಿ ಸೂಕ್ತ ಪರಿಹಾರ ಕೊಡುವಂತೆ ಮನವಿ ಮಾಡಿದರು.