ಕಾಮದ ಕಣ್ಣು ಸ್ವಾಭಿಮಾನದ ಹೆಣ್ಣು ಕಿರುಚಿತ್ರದ ಚಾಲನೆ

ಕಾಮದ ಕಣ್ಣು ಸ್ವಾಭಿಮಾನದ ಹೆಣ್ಣು ಕಿರುಚಿತ್ರದ ಚಾಲನೆ

ಪಟ್ಟಣದ ಮಾಧ್ಯಮ ಸ್ಟುಡಿಯೋ ಕಛೇರಿಯ ಜಿ.ಪಿ.ರಾಜು ರವರು "ರಾಜ್ ಪವರ್ ಕ್ರಿಯೇಷನ್ಸ್ ಹಾಗೂ RP9 ನ್ಯೂಸ್" ಬ್ಯಾನರ್ ಅಡಿಯಲ್ಲಿ "ಕಾಮದ ಕಣ್ಣು, ಸ್ವಾಭಿಮಾನದ ಹೆಣ್ಣು" ಶಿರ್ಷಿಕೆಯ ಕಿರುಚಿತ್ರ ನಿರ್ಮಾಣಕ್ಕೆ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿಯ ಆವರಣದಲ್ಲಿರುವ ಪರಮ ಪೂಜ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಪುತ್ಥಳಿಗೆ ಡಾ.ಜೆ.ಎನ್.ರಾಮಕೃಷ್ಣೇಗೌಡರ  ಆರ್ಶಿವಾದದೊಂದಿಗೆ , ಸಮಾಜ ಸೇವಕರಾದ ಕೆಬಿಸಿ ಮಂಜುನಾಥ್ ರವರ ಸಹಕಾರದೊಂದಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಕಿರುಚಿತ್ರದ ಮುಹೂರ್ತಕ್ಕೆ ಚಾಲನೆ ಮಾಡಲಾಯಿತು,_

_ನಂತರ ಮಾತನಾಡಿದ ಡಾ.ಜೆ.ಎನ್.ರಾಮಕೃಷ್ಣೇಗೌಡರು ಕೆ.ಆರ್.ಪೇಟೆ ಪಟ್ಟಣದಲ್ಲಿ ಮಾಧ್ಯಮ ಸ್ಟುಡಿಯೋ ಕಛೇರಿಯಲ್ಲಿರುವ ಸ್ನೇಹಿತರು ಹಲವಾರು ಸಣ್ಣ-ಪುಟ್ಟ ಕಾರ್ಯಕ್ರಮ ಮಾಡುತ್ತಿದ್ದು ಎಲ್ಲರ ಸಹಕಾರದಿಂದ ರಾಜು.ಜಿ.ಪಿ ರವರು ತಾಲ್ಲೋಕಿನ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ "ಕಾಮದ ಕಣ್ಣು ಸ್ವಾಭಿಮಾನದ ಹೆಣ್ಣು" ಎಂಬ ಕಿರುಚಿತ್ರ ನಿರ್ಮಾಣಕ್ಕೆ ಪರಮ ಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಆರ್ಶಿವಾದದೊಂದಿಗೆ ಶುಭ ಗಳಿಗೆಯಲ್ಲಿ ಚಾಲನೆ ಮಾಡಿದ್ದು ಯಾವುದೇ ವಿಘ್ನಗಳು ಬಾರದೇ ಚಿತ್ರಿಕರಣ ಸುಗಮವಾಗಿ ಸಾಗಲೆಂದು ಹಾರೈಸಿದರು,_

_ಈ ಸಂದರ್ಭದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣೇಗೌಡರು,ಸಮಾಜ ಸೇವಕರಾದ ಕೆಬಿಸಿ ಮಂಜುನಾಥ್, ರೈತಸಂಘದ ಮರುವನಹಳ್ಳಿ ಶಂಕರ್, ಸೈಯದ್ ಖಲೀಲ್,ಮಾಧ್ಯಮ ಸ್ಟುಡಿಯೋ ಕಛೇರಿಯ ರಾಜು.ಜಿ.ಪಿ, ಹೊಸಹೊಳಲು ಶ್ರೀನಿವಾಸ್, ಸಾಯಿಕುಮಾರ್,ಮಾಕವಳ್ಳಿ ರಂಗನಾಥ್, ಲೋಕೇಶ್.ವಿ, ಬಿಜಿಎಸ್ ಶಿಕ್ಷಣ ಸಂಸ್ಥೆಯ ಶಿಕ್ಷಕಿ ವೃಂದದವರು ನೆರೆದಿದ್ದರು,_