ಕುಮಾರಿ ಅಮೃತಾ ಅಂಗಡಿ ಗೈಡ್ಸ ವಿಭಾಗದ ರಾಜ್ಯ ಪುರಸ್ಕಾರಕ್ಕೆ ಆಯ್ಕೆ

ಕುಮಾರಿ ಅಮೃತಾ ಅಂಗಡಿ ಗೈಡ್ಸ ವಿಭಾಗದ ರಾಜ್ಯ ಪುರಸ್ಕಾರಕ್ಕೆ ಆಯ್ಕೆ

Jan 18, 2024 - 12:51
 0  71
ಕುಮಾರಿ ಅಮೃತಾ ಅಂಗಡಿ ಗೈಡ್ಸ ವಿಭಾಗದ ರಾಜ್ಯ ಪುರಸ್ಕಾರಕ್ಕೆ ಆಯ್ಕೆ

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯಿಂದ 2022-23 ನೇ ಸಾಲಿನಲ್ಲಿ ಉತ್ತೀರ್ಣರಾಗಿರುವ ಕಬ್ಸ್ ,ಬುಲ್ ಬುಲ್ಸ್ ,ಸ್ಕೌಟ್ಸ್, ಗೈಡ್ಸ್ ರೋವರ್ ಮತ್ತು ರೇಂಜರ್ಸ್ ಗಳಿಗೆ ನೀಡಲಾಗಿರುವ ರಾಜ್ಯ ಪುರಸ್ಕಾರ ಪ್ರಶಸ್ತಿ ಕಾರ್ಯಕ್ರಮವನ್ನು ಇದೇ ಶುಕ್ರವಾರದಂದು ಗಾಜಿನ ಮನೆ ರಾಜಭವನ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದು ಈ ಪ್ರಶಸ್ತಿಗೆ ಆದರ್ಶ ವಿದ್ಯಾಲಯ ಚಿಕ್ಕ ಮುಚ್ಚುಳಗುಡ್ಡ ತಾಲೂಕ ಬದಾಮಿ ಈ ಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ಅಮೃತಾ ಅಂಗಡಿಯವರು ಆಯ್ಕೆಯಾಗಿದ್ದು, ಈ ಪ್ರಶಸ್ತಿಯನ್ನು ಕರ್ನಾಟಕದ ಘನವೇತ್ತ ರಾಜ್ಯಪಾಲರಾದ ಶ್ರೀಮಾನ್ ಥಾವರ ಚಂದ ಗೇಹ್ಲುಟ್ ರವರು ವಿತರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.ಈ ವಿದ್ಯಾರ್ಥಿಯ ಸಾಧನೆಯನ್ನು ಕುರಿತು ಸ್ಕೌಟ್ಸ ಮಾಸ್ಟರ್ ರವರಾದ ಆರ್,ಎಂ, ಕತ್ತಿಕೈ ಗುರುಗಳು ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಎಂದು ಈ ಶಾಲೆಯ ಆಂಗ್ಲ ಭಾಷಾ ಶಿಕ್ಷಕರಾದ ಆರ್,ಬಿ,ಹಂಜಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

like

dislike

love

funny

angry

sad

wow