ಕೆಜಿಎಫ್ ನಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆ
![ಕೆಜಿಎಫ್ ನಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆ](https://suddikirana.com/uploads/images/202501/image_870x_67822122df84b.jpg)
ಕೆಜಿಎಫ್: ನಗರದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಹಾಗೂ ನಗರ ಹೊಂದಿಕೊಂಡಿರುವ ಯಾರನಾಗನಹಳ್ಳಿ ಗ್ರಾಮದಲ್ಲಿ ನೆಲಗೊಂಡಿರೋ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆಗಳನ್ನು ಹಮ್ಮಿಕೊಂಡಿದ್ದು, ಭಕ್ತರು ಬೆಳಗ್ಗೆ 4:00 ಯಿಂದ ಸರತಿ ಸಾಲಿನಲ್ಲಿ ನಿಂತು. ವೈಕುಂಠ ದ್ವಾರದಲ್ಲಿ ಸ್ವಾಮಿ ದರ್ಶನ ಪಡೆದರು ದೇವಸ್ಥಾನದ ಸಮಿತಿಯಿಂದ ಭಕ್ತಾದಿಗಳಿಗೆ ಎಲ್ಲಾ ತರಹದ ಸೌಲಭ್ಯಗಳನ್ನು ಕಲ್ಪಿಸಿತ್ತು. ದೇವರ ಮೂಲ ವಿಗ್ರಹಕ್ಕೆ ಅತಿ ಹೆಚ್ಚಿನ ಹೂಗಳಿಂದ ಅಲಂಕಾರಗಳನ್ನು ಮಾಡಲಾಗಿತ್ತು ದೇವಾಲಯ ರಾಜಗೋಪುರಕ್ಕೆ ದೀಪದ ಅಲಂಕಾರಗಳನ್ನು ಮಾಡಲಾಗಿತ್ತು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಗಿತ್ತು ಭಕ್ತರ ಹಿತಾವೃಷ್ಟಿಯಿಂದ ಹೆಚ್ಚುವರಿಯಾಗಿ ಪೊಲೀಸ್ ರನ್ನು ನಿಯೋಜಿಸಲಾಗಿತ್ತು.