ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆಗೆ ಒತ್ತಾಯಯಿಸಿ ಸಿ.ಪಿ.ಐ.ಎಂ ಪ್ರತಿಭಟನೆ 

ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆಗೆ ಒತ್ತಾಯಯಿಸಿ ಸಿ.ಪಿ.ಐ.ಎಂ ಪ್ರತಿಭಟನೆ 

ಬಾಗೇಪಲ್ಲಿ: ನೀಟ್ ಹಗರದ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಲಕ್ಷಾಂತರ ಮಂದಿ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸಿಗೆ ದ್ರೋಹ ಮಾಡಿದೆ.ಇದು ಶಿಕ್ಷಣ ಕ್ಷೇತ್ರದ ಅತಿದೊಡ್ಡ ಹಗರಣವಾಗಿದ್ದು,ಇದರ ನೇರ ಹೊಣೆಯು ಕೇಂದ್ರ ಶಿಕ್ಷಣ ಸಚಿವರದ್ದು ಕೂಡಲೇ ರಾಜಿನಾಮ ನೀಡಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನಿ ವೆಂಕಟಪ್ಪ ಒತ್ತಾಯಿಸಿದ್ದಾರೆ.

ನೀಟ್ ಪರೀಕ್ಷಾ ಪದ್ಧತಿ ವಾಪಸ್ಸಿಗೆ ಒತ್ತಾಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಎಂ ಪಕ್ಷದ ತಾಲೂಕು ಘಟಕದ ವತಿಯಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸೊ ಮೂಲಕ ತಾಲ್ಲೂಕು ಕಚೇರಿ ಬಳಿ ಜಮಯಿಸಿದ ಅವರು ಕೇಂದ್ರ ಸರ್ಕಾರದ ಆಡಳಿತ ವಿರುದ್ಧ ತಿರುಗಿಬಿದ್ದ ಅವರು ಶಿಕ್ಷಣ ಕ್ಷೇತ್ರದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರೇಡ್ ಟು ತಹಸೀಲ್ದಾರ್ ಶುಭ್ರಮಣ್ಯo 
ಅವರಿಗೆ ಮನವಿ ನೀಡಿ ಮಾತನಾಡಿದ ಅವರು ಶಿಕ್ಷಣ ಕ್ಷೇತ್ರದಲ್ಲಿ ಹಿಂದೆಂದೂ ನಡೆಯದ ಅತಿ ದೊಡ್ಡ ಹಗರಣವನ್ನು ಕೇಂದ್ರ ಬಿಜೆಪಿ ಸರಕಾರ ಮಾಡಿದೆ. ನೀಟ್ ಹೆಸರಲ್ಲಿ ವೈಧ್ಯರಾಗಲು ಕನಸು ಕಂಡ ಪ್ರತಿಭಾವಂತ ಗ್ರಾಮೀಣ ಹಾಗೂ ಶ್ರಮ ಪಟ್ಟು ಓದುವವರಿಗೆ ಅವಕಾಶಗಳಿಂದ ವಂಚಿತರಾಗುವಂತೆ ಹಗರಣ ಮಾಡಲಾಗಿದೆ.

ಹಾಗಾಗಿ ಇಂತಹ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವ ನೀಟ್ ಪರೀಕ್ಷಾ ಪದ್ಧತಿ ವಾಪಸ್ಸಾಗಬೇಕು. ನೀಟ್ ಹಗರಣದ ಹೊಣೆಗಾರಿಕೆಯನ್ನು ಕೇಂದ್ರ ಶಿಕ್ಷಣ ಸಚಿವರು ಕೂಡಲೇ ರಾಜಿನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಈ ಸಂಧರ್ಭದಲ್ಲಿ ಮುಖಂಡರಾದ ರಘರಾಮಿರೆಡ್ಡಿ.ಚನ್ನರಾಯಪ್ಪ.ನರಸಿಂಹಾರೆಡ್ಡಿ.ಜಿ.ಮುಸ್ಥಾಪ.ಜಿ.ಕೃಷ್ಣಪ್ಪ. ಮುನಿಯಪ್ಪ.ಡಿ.ಸಿ.ಶ್ರೀನಿವಾಸ.ಕೆ. ನಾಗರಾಜು.ಚಲಪತಿ.ಸೊಮುಶೇಖರೆಡ್ಡಿ ಬೈಪರೆಡ್ಡಿ.ಸಾವಿತ್ರಮ್ಮ.ರಾಮಲಿಂಗಪ್ಪ.ಶ್ರೀನಿವಾಸ.ವೆಂಕಟರವಣ.ಚಿನ್ನಾಗಪ್ಪ.ಅಂಜಿನಪ್ಪ.ರಾಮಾಂಜಿ.ಸೇರಿದಂತೆ ಇತರರು ಇದ್ದರು.