ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲ್ಲೂಕಿನ ಬೆಟ್ಟದಬೀಡು ಗ್ರಾಮದ ಯುವನಟ ಶ್ರೀ ಚೇತನ್ ದೇವರಾಜ್ ರವರು ಸರಿ ಸುಮಾರು ಏಳೆಂಟು ವರ್ಷಗಳಿಂದ ಕನ್ನಡ ಚಿತ್ರರಂಗದದಲ್ಲಿ ಕಲಾವಿದನಾಗಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತನ್ನದೇ ಆದ ವಿವಿಧ ರೀತಿಯ ಸಾಧನೆಗೈದಿದ್ದಾರೆ. ಹಾಗೂ ತನ್ನೂರಿಗೂ ವನಸಿರಿಯನಾಡಿಗೂ ಹೆಮ್ಮೆಯ ಯುವ ನಾಯಕನಾಗಿ ಹೆಸರುವಾಸಿಯಾಗಿದ್ದಾರೇ ಇವರ ಕಾರ್ಯವೈಖರಿ ನೋಡಿ ಕನ್ನಡ ಫಿಲಂ ಚೇಂಬರ್ ವತಿಯಿಂದ ವರ್ಷದ ಕೊನೆಯ ಮಾಸದ 25ನೇ ತಾರೀಖು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಮುಂದಿನ ಚಟುವಟಿಕೆಗಳಲ್ಲಿ ಯಶಸ್ವಿಯಾಗಿ ಉತ್ತಮ ಸಮಾಜಕ್ಕೆ ಆಸ್ತಿಯಾಗಲಿ ಎಂದೂ ಫಿಲಂ ಚೇಂಬರ್ ಅಧ್ಯಕ್ಷರಾದ ರವೀಂದ್ರ ರವರೂ ಹಾಗೂ ಬಿಗ್ ಬಾಸ್ ಖ್ಯಾತಿಯ ವಕೀಲ್ ಸಾಬ್ ಜಗದೀಶ್ ರವರು ರಂಗಭೂಮಿ ಹಾಗೂ ಸಿನಿಮಾ ನಟ ಗಣೇಶ್ ರಾವ್ ಚೆಫ್ ಚಿದಂಬರ ಚಿತ್ರದ ನಾಯಕಿ ಖುಷಿ ಕೋತಾರಿ ಇನ್ನಿತರ ಅನೇಕ ಗಣ್ಯರು ಮತ್ತು ಯುವನಟ ಚೇತನ್ ದೇವರಾಜ್ ರವರ ಅಭಿಮಾನಿಗಳು ಶುಭಹಾರೈಸಿದ್ದಾರೆ