ಕ್ಯಾಸಂಬಳ್ಳಿ ಆಸ್ಪತ್ರೆಗೆ ತಕ್ಷಣ ಅಂಬುಲೆನ್ಸ್ ಕಲ್ಪಿಸಲು ಆಗ್ರಹ 

ಕ್ಯಾಸಂಬಳ್ಳಿ ಆಸ್ಪತ್ರೆಗೆ ತಕ್ಷಣ ಅಂಬುಲೆನ್ಸ್ ಕಲ್ಪಿಸಲು ಆಗ್ರಹ 

ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹೋರಾಟದ ಎಚ್ಚರಿಕೆ ಕೊಟ್ಟ ಮೋಹನ್ ಕೃಷ್ಣ ಬೇತಮಂಗಲ: ರಾಜ್ಯದ ಪ್ರಥಮ ಮುಖ್ಯ ಮಂತ್ರಿ ಕೆ.ಸಿ.ರೆಡ್ಡಿ ಅವರು ಪ್ರಾರಂಭಿಸಿರುವ ಆಸ್ಪತ್ರೆಗೆ ತಕ್ಷಣ ಅಂಬುಲೆನ್ಸ್ ಕಲ್ಪಿಸಬೇಕೆಂದು ಕ್ಯಾಸಂಬಳ್ಳಿ ಗ್ರಾಮಸ್ಥರು ಆಗ್ರಹಿಸಿದರು.

ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಯಂ ಅಂಬುಲೆನ್ಸ್ ಇಲ್ಲದೆ ತುರ್ತು ಚಿಕಿತ್ಸೆ ದೊರೆಯದೆ ಅನೇಕರು ಮೃತ ಪಟ್ಟಿದ್ದಾರೆ ಎಂದು ಆರೋಪಿಸಿದರು.
ಕ್ಯಾಸಂಬಳ್ಳಿ ಗ್ರಾಮದ ಆಸ್ಪತ್ರೆಗೆ ಅಂಬುಲೆನ್ಸ್ ಕಲ್ಪಿಸಬೇಕೆಂದು ಶಾಸಕರು, ಸಂಸದರು ಸೇರಿದಂತೆ ಸಚಿವರಿಗೆ ಹಾಗೂ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಸುಮಾರು ವರ್ಷಗಳಿಂದ ನಿರಂತರವಾಗಿ ಆರೋಗ್ಯ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಿದ್ದರು, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಾದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಟ್.01 ಕ್ಯಾಸಂಬಳ್ಳಿ ಗ್ರಾಮದ ಆಸ್ಪತ್ರೆಗೆ ಶೀಘ್ರವಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಾಗೂ ಕ್ಷೇತ್ರದ ಶಾಸಕರು ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿದೆ ಹೋದಲ್ಲಿ ಸಾವಿರಾರು ಮಂದಿಯೊಂದಿಗೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ವಿ.ಮೋಹನ್ ಕೃಷ್ಣ. ಸಮಾಜ ಸೇವಕರು ಕೆಜಿಎಫ್ ಕ್ಷೇತ್ರ