ಗಚ್ಚಿನ ಮಠಕ್ಕೆ ಭೇಟಿ‌ ನೀಡಿ ಆಶೀರ್ವಾದ ಪಡೆದ ಕುಮಾರಿ ಪ್ರಿಯಾಂಕ ಜಾರಕಿಹೊಳಿ  

ಗಚ್ಚಿನ ಮಠಕ್ಕೆ ಭೇಟಿ‌ ನೀಡಿ ಆಶೀರ್ವಾದ ಪಡೆದ ಕುಮಾರಿ ಪ್ರಿಯಾಂಕ ಜಾರಕಿಹೊಳಿ  

ಬೆಳಗಾವಿ:ಜಿಲ್ಲೆ ಅಥಣಿ‌ ನಗರದಲ್ಲಿ ಭರ್ಜರಿ ಪ್ರಚಾರ ಇಂದು ಶ್ರೀ ಸಿದ್ದೇಶ್ವರ ದೇವಸ್ಥಾನ ಹಾಗೂ ಗಚ್ಚಿನ ಮಠಕ್ಕೆ ಭೇಟಿ‌ ನೀಡಿ ಆಶೀರ್ವಾದ ಪಡೆದು ನಗರದಲ್ಲಿನ ಶ್ರೀ ಬಸವೇಶ್ವರ ಹಾಗೂ ಶ್ರೀ ಸಂಗೋಳ್ಳಿ ರಾಯಣ್ಣ ಅವರ ಮೂರ್ತಿಗೆ ನಮನಗಳನ್ನು ಸಲ್ಲಿಸಿದೆ.ಬಳಿಕ ಶಾಸಕರು ಹಾಗೂ ಹಿರಿಯರಾದ ಶ್ರೀ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಜರುಗಿದ ರ್ಯಾಲಿಯಲ್ಲಿ ಭಾಗವಹಿಸಿ ಮತಯಾಚಿಸಿದೆ.ಈ ಸಂದರ್ಭದಲ್ಲಿ ಮುಖಂಡರಾದ ಗಜಾನನ ಮಂಗಸೂಳಿ, ಶ್ರೀ ಚಿದಾನಂದ ಸವದಿ, ರಮೇಶ ಸಿಂಧಗಿ ಸೇರಿ ಪ್ರಮುಖರು ಉಪಸ್ಥಿತರಿದ್ದರು.ರೋಡ್‌ ಶೋ ನಡೆಸುವ ಮುಂಚೆ ಶ್ರೀ ಸಿದ್ದೇಶ್ವರ ದೇವಸ್ಥಾನ, ಗಚ್ಚಿನ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ನಗರದಲ್ಲಿನ ಶ್ರೀ ಬಸವೇಶ್ವರ ಹಾಗೂ ಸಂಗೋಳ್ಳಿ ರಾಯಣ್ಣ ಮೂರ್ತಿಗಳಿಗೂ ಪುಷ್ಪ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ದಿಗ್ವಿಜಯ ಪವಾ‌ರ್ ದೇಸಾಯಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಗಜಾನನ ಮಂಗಸೂಳಿ, ಚಿದಾನಂದ ಸವದಿ, ರಮೇಶ ಸಿಂದಗಿ, ಸದಾಶಿವ ಬೂಟಾಳೆ ಸೇರಿದಂತೆ ನೂರಾರೂ ಕಾಂಗ್ರೆಸ್‌ ಕಾರ್ಯಕರ್ತರು, ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.ಶಾಸಕ ಲಕ್ಷ್ಮಣ ಸವದಿ ಅವರ ನೇತೃತ್ವದಲ್ಲಿ ಜರುಗಿದ ಬೃಹತ್‌ ರ್ಯಾಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕ ಜಾರಕಿಹೊಳಿ ಅವರು ಸಾರ್ವಜನಿಕರಿಗೆ ಕೈ ಮುಗಿದು ಮತಯಾಚಿಸಿದರು.ಅಥಣಿ: ಅಥಣಿ ನಗರದಲ್ಲಿ ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ಭರ್ಜರಿ ರೋಡ್‌ ಶೋ ನಡೆಸಿದರು.ಇಂದು ಅಥಣಿ ಪಟ್ಟಣದಲ್ಲಿ ನಡೆದ ಬೃಹತ್ ರೋಡ್ ಶೋ ನಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿಯವರು ಬಾಗವಹಿಸಿ, ಅಥಣಿ ಮತಕ್ಷೇತ್ರದ ಜನತೆ 80000 ಬಹುಮತಗಳ ಅಂತರವನ್ನು ಅಥಣಿ ಜನ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ವ್ಯಕ್ತ ಪಡಿಸಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಕುಮಾರಿ ಪ್ರಿಯಾಂಕ ಜಾರಕಿಹೊಳಿ ಅವರ ಪರ ಪ್ರಚಾರ ಮಾಡಿ ಮತ ಯಾಚನೆ ಮಾಡಿದರು