ಗಾಂಧಿನಗರ ಶ್ರೀಗುರುಸಿದ್ದೇಶ್ವರ ಕನ್ನಡ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಸಮಾರಂಭ

ಸಿಂಧನೂರ ತಾಲೂಕಿನ ಗಾಂಧಿನಗರದ ಶ್ರೀ ಗುರುಸಿದ್ದೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ 2024-2025 ನೇ ಸಾಲಿನ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಪರಮ ಪೂಜ್ಯ ಶ್ರೀ ಸಿದ್ಧರಾಮೇಶ್ವರ ಶರಣರು ಸಿದ್ಧಾಶ್ರಮ ವೆಂಕಟಗಿರಿ ಕ್ಯಾಂಪ್ ರವುಡಕುಂದ ಅವರು ವಹಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದೇ ಸಂಧರ್ಭದಲ್ಲಿ ಶಾಲೆಗೆ 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಕೀರ್ತಿ ತಂದು ಕೊಟ್ಟ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂಧರ್ಭದಲ್ಲಿ ಗಾಂಧಿನಗರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಅಂಬಮ್ಮ,ಡಾ.ಹುಸೇನಪ್ಪ ಅಮರಾಪುರ,ಮರಿಸ್ವಾಮಿ (ಶಾಲೆಯ ಮುಖ್ಯಗುರಗಳು),ನಂದಿನಿ ಶ್ರೀನಿವಾಸ,ಕಿರಣ ಕುಮಾರ,ಶ್ರೀಮತಿ ಕೃಷ್ಣಮ್ಮ,ಶರಣಪ್ಪ ಯರದಹಾಳ,ರಾಜಸಾಬ್,ಶಶಿಧರ ಹೀರೇಮಠ,ಸದಸ್ಯರಾದ ಟಿ. ಯಲ್ಲಪ್ಪ,ಟಿ.ಹನುಮೇಶ, ವಿರೂಪಾಕ್ಷಪ್ಪ,ಮಧುವೀರ ಚಕ್ರಾಧರ,ನಾರಾಯಣ ನಲ್ಲ, ಮಹಮ್ಮದ್ ರಫಿ,ಮಹದೇವಪ್ಪ ಟೈಲರ್,ಶಿವರಾಜ ಹೂಗಾರ ಕೆ. ಹೊಸಹಳ್ಳಿ ಹಾಗೂ ಶಾಲೆಯ ಶಿಕ್ಷಕರು,ವಿದ್ಯಾರ್ಥಿಗಳು, ಪಾಲಕರು ಪೋಷಕರು ಇದ್ದರು.