ಗಿಡಗಳನ್ನು ನೆಟ್ಟು ವರ್ಷವಿಡಿ ಬೆಳಸಿ ಪೋಷಿಸಿ

ಗಿಡಗಳನ್ನು ನೆಟ್ಟು ವರ್ಷವಿಡಿ ಬೆಳಸಿ ಪೋಷಿಸಿ

ಕೊರಟಗೆರೆ- ವಿಶ್ವಪರಿಸರ ದಿನಾಚರಣೆಯ ದಿನದಂದು ಗಿಡಗಳನ್ನು ನೆಟ್ಟು ವರ್ಷವಿಡಿ ಬೆಳಸಿ ಪೋಷಿಸಿ ಭೂಮಿಯ ಪ್ರಕೃತತೆಯನ್ನು ಕಾಪಾಡಬೇಕು ಎಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದರು.
ಅವರು ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ತಾಲ್ಲೂಕು ಆಡಳಿತ, ಅರಣ್ಯ ಇಲಾಖೆ, ಸಾಮಾಜಿಕ ವಲಯ ಅರಣ್ಯ, ಹಾಗೂ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಅವರಿಂದ ನಡೆದ ವಿಶ್ವಪರಿಸರ ದಿನಾಚರಣೆ ಅಂಗವಾಗಿ ತಾಲ್ಲೂಕು ಕಛೇರಿ ಅವರಣ ಸೇರಿದಂತೆ ವಿವಿಧ ಶಾಲಾ ಕಾಲೇಜು ಅವರಣಗಳಲ್ಲಿ ಗಿಡಗಳನ್ನು ನೆಟ್ಟು ಮಾತನಾಡಿ ನಮ್ಮನೆಲ್ಲಾ ಕಾಪಾಡುತ್ತಿರುವ ಪೋಷಿಸುತ್ತಿರುವ ಭೂಮಿಯ ಮೇಲಿನ ಪರಸರವರನ್ನು ರಕ್ಷಿಸುವುದು ನಮ್ಮೇಲ್ಲರ ಆದ್ಯ ಕರ್ತವ್ಯ, ಪರಿಸರ ರಕ್ಷಣೆ ಸಂವಿಧಾನದಲ್ಲೂ ಸಹ ಬರೆದಿರುವ ಅಂಶವಾಗಿದೆ, ಮಳೆಬಾರದೆ ವಲಸೆ ಹೋಗುವ ಸಂದರ್ಭವನ್ನು ಪರಿಸರವನ್ನು ಕಾಪಾಡದೆ ನಾವೇ ತಂದುಕೊAಡಿದ್ದೇವೆ, ಪರಿಸರ ಮನುಷ್ಯನಿಗೆ ಹೇಗೆ ಅತ್ಯವಶ್ಯಕತೆಯೋ ಪ್ರಾಣಿ ಹಾಗೂ ಇತರ ಜೀವ ಸಂಕುಲಗಳಿಗೂ ಬೇಕಾಗಿದೆ ಆದರೆ ಅದರ ಉಳಿವು ಅಳಿವು ಮನುಷ್ಯನ ಮೇಲಿದೆ ಎಂದರು.
ತಾಲ್ಲೂಕು ವಲಯ ಅರಣ್ಯಾಧಿಕಾರಿ ರವಿ ರವರು ಮಾತನಾಡಿ 1973 ರಿಂದ ವಿಶ್ವಸಂಸ್ಥೆ ಸೂಚನೆಯಂತೆ ವಿಶ್ವಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ, ಭೂಮಿಯಲ್ಲಿ ಮನುಷ್ಯನ ದುರಾಸೆಯಿಂದ ಅರಣ್ಯ ನಾಶವಾಗುತ್ತಿದೆ. ಈ ಅರಣ್ಯ ನಾಶದಿಂದ ಪ್ರಕೃತಿಯಲ್ಲಿ ಹವಾಮಾನ ವೈಪರಿತ್ಯವಾಗುತ್ತಿದ್ದು ವಾತಾರಣದಲ್ಲಿ ಬಹಳ ವ್ಯತ್ಯಾಸದಿಂದ ಅತಿಯಾದ ಬಿಸಿಲು, ತಾಪಮಾನ, ಮಳೆಯ ಅತಿವೃಷ್ಟಿ, ಅನಾವೃಷ್ಟಿ, ಅತಿಯಾದ ಶೀತದಿಂದ ಮನುಷ್ಯ ಹಾಗೂ ಪ್ರಾಣಿಗಳು ತತ್ತರಿಸುತ್ತಿವೆ, ಇದರಿಂದ ಪ್ರತಿಯೊಬ್ಬ ನಾಗರೀಕನಿಗೂ ಅರಿವು ಮೂಡಿಸಲು ಪರಿಸರ ದಿನವನ್ನು ಆಚರಿಸಲಾಗುತ್ತಿz,ೆ ಪ್ರಸ್ತುತ ನಮ್ಮ ದೇಶದಲ್ಲಿ ಶೇ 20%, ರಾಜ್ಯದಲ್ಲಿ ಶೇ21% ನಮ್ಮ ತಾಲ್ಲೂಕಿನಲ್ಲಿ ಶೇ 12% ರಷ್ಟು ಅರಣ್ಯ ಇದ್ದು ನಮ್ಮ ಜೀವವೈವಿದ್ಯತೆಗೆ ಅರಣ್ಯ ಶೇ 33% ರಷ್ಟು ಬೇಕಿದ್ದು ಅದನ್ನು ನಾವುಗಳು ಬೆಳಸಲು ಶ್ರಮಿಸಬೇಕಿದೆ ಎಂದರು.
ಸಾಮಾಜಿಕ ವಲಯ ಅರಣ್ಯಧಿಕಾರಿ ಶಿಲ್ಪ ಮಾತನಾಡಿ ಈ ವರ್ಷ ತಾಲ್ಲೂಕಿನಲ್ಲಿ  ನಮ್ಮ ಇಲಾಖೆಯಿಂದ 50 ಸಾವಿರ ಗಿಡಗಳನ್ನು ಬೆಳಸುವ ಗುರಿ ಹೊಂದಿದ್ದು ಇದರಲ್ಲಿ 25000 ಗಿಡಗಳನ್ನು ರೈತರಿಗೆ ಉಳಿದ 25000 ಗಿಡಗಳನ್ನು ನಮ್ಮ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಣಧಿಕಾರಿಗಳ ಆದೇಶದಂತೆ ಪ್ರತಿ ಪಂಚಾಯಿತಿಗೆ 500 ಗಿಡಗಳನ್ನು ನೀಡಲಾಗುವುದು ಅವುಗಳನ್ನು ಪಂಚಾಯಿತಿಯವರು ಪಂಚಾಯತಿ ಆವರಣ, ಅದರ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಬೆಳಸಬೇಕು ಎಂದರು.
ತಾಲ್ಲೂಕು ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಅದ್ಯಕ್ಷ ಕೆ.ಆರ್.ಓಬಳರಾಜು ಮಾತನಾಡಿ ವಿಶ್ವಪರಿಸರ ದಿನವಾದ ಇಂದು ನಮ್ಮ ಸಂಸ್ಥೆಯಿAದ ಮಕ್ಕಳೊಂದಿಗೆ ಅರಿವು ಜಾತವನ್ನು ಮೂಡಿಸಲಾಗಿದೆ ಇದರೊಂದಿಗೆ ಗಿಡನೆಡುವ ಕೆಲಸವನ್ನು ಮಾಡಲಾಗುತ್ತಿದೆ ಪರಿಸರ ರಕ್ಷಣೆ ಮತ್ತು ಗಿಡಗಳನ್ನು ನೆಟ್ಟು ಬೆಳಸುವ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತಿ ಇ.ಓ.ಅಪೂರ್ವ, ಸಿಡಿಪಿಓ ಅಂಬಿಕಾ, ಸಮಾಜಕಲ್ಯಾಣಿಧಿಕಾರಿ ಯಮುನಾ, ಕೃಷಿ ಸಹಾಯಕ ನಿರ್ದೇಶಕ ರುದ್ರಪ್ಪ, ಅಧಿಕಾರಿಗಳಾದ ದಿಲೀಪ್ ಕುಮಾರ್, ಗುರುಮೂರ್ತಿ, ಮಧುಸೂದನ್, ಸ್ಕೌಟ್ ಅಂಡ್ ಗೈಡ್ಸ್ ನ ಪ್ರಸನ್ನಕುಮಾರ್, ಉಷಾ ರಾಧಮ್ಮ ಸೇರಿದಂತೆ ಇತರರು ಹಾಜರಿದ್ದರು.
ಚಿತ್ರ- ಕೊರಟಗೆರೆ ತಾಲ್ಲೂಕು ಕಚೇರಿ ಅವರಣದಲ್ಲಿ ವಿಶ್ವಪರಿಸರ ದಿನದ ಅಂಗವಾಗಿ ತಹಶೀಲ್ದಾರ್ ಮಂಜುನಾಥ್ ಗಿಡ ನೆಡುತ್ತಿರುವುದು.