ಗಿಡ ನೇಡುವುದು ಮುಖ್ಯವಲ್ಲ ಅದನ್ನು ಪೋಷಣೆ ಮಾಡವುದು ಅತೀ ಮುಖ್ಯ-ಶಾಸಕ ಎಸ್.ಎನ್.ಸುಬ್ಬಾರೆಡ್ಡಿ  

ಗಿಡ ನೇಡುವುದು ಮುಖ್ಯವಲ್ಲ ಅದನ್ನು ಪೋಷಣೆ ಮಾಡವುದು ಅತೀ ಮುಖ್ಯ-ಶಾಸಕ ಎಸ್.ಎನ್.ಸುಬ್ಬಾರೆಡ್ಡಿ  

ಬಾಗೇಪಲ್ಲಿ: ಪ್ರತಿಯೊಬ್ಬರು ಕನಿಷ್ಠ ಪಕ್ಷ 5ಸಸಿಗಳನ್ನು ನೇಡುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು ಪರಿಸರ ಇಲ್ಲದಿದ್ದರೆ ಮನುಷ್ಯನು ಬದುಕಲು ಸಾದ್ಯವಿಲ್ಲ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಪ್ರದೇಶಿಕ ಅರಣ್ಯ ಇಲಾಖೆ,ಸಾಮಾಜಿಕ ಅರಣ್ಯ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಟಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ತಮ್ಮ ಮನೆಗಳ ಆವರಣ ಮತ್ತು ಕೃಷಿಕರಾಗಿದ್ದರೆ ತಮ್ಮ ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡಬೇಕು ಮರಗಿಡಗಳು ಚನ್ನಾಗಿದ್ದರೆ.

ಒಳ್ಳೆಯ ಗಾಳಿ,ನೀರು ಸಿಗುತ್ತದೆ.ಇತ್ತೀಚಿನ ದಿನಗಳಲ್ಲಿ ಮರಗಿಡಗಳ ನಾಶದಿಂದ ಮಳೆ ಅಭಾವ ಕಾಣಿಸಿಕೊಂಡು ಕುಡಿಯಲು ನೀರು ಸಿಗುವುದೇ ಕಷ್ಟವಾಗಿದೆ.ಒಂದು ವೇಳೆ ನೀರು ಸಿಕ್ಕರೂ ಪ್ಲೋರೈಡ್ ಅಂಶ ತುಂಬಿರುತ್ತದೆ.ಈ ನೀರು ಕುಡಿದ ಜನರು ನಾನಾ ರೋಗಗಳಿಗೆ ಬಲಿಯಾಗುತ್ತಾರೆ.ಪ್ರತಿ ವನಮಹೋತ್ಸವ ಕಾರ್ಯಕ್ರಮ ದಿನದಂದು ಸಸಿ ನೆಟ್ಟು ಹೋಗುತ್ತಾರೆ ಆದರೆ ಹೋದ ನಂತರ ಸಸಿಗಳನ್ನು ಏನಾಗಿವೆ ಎಂದು ತಿರುಗಿ ನೋಡುವುದಿಲ್ಲ ಕೊನೆಗೆ ಅವು ಬಿಸಿಲಿಗೆ ಒಣಗಿ ಹೋಗುತ್ತವೆ ಯಾರೇ ಆದರೂ ಸಸಿ ನೆಟ್ಟ ಮೇಲೆ ಅವುಗಳಿಗೆ ನೀರು ಹಾಕಿ ಪೋಷಣೆ ಮಾಡಿದರೆ ಮರವಾಗಿ ಬೆಳೆದು ಶುದ್ದ ಗಾಳಿ ನೀಡುತ್ತದೆ.ಮನುಷ್ಯರು ನಾನಾ ಕಾಯಿಲೆಗಳಿಂದ ನರಳುತ್ತಿದ್ದಾರೆ.

ಇದಕ್ಕೇಲ್ಲ ಮೂಲ ಕಾರಣ ಶುದ್ದ ಗಾಳಿ ಸಿಗದೆ ಇರುವುದರಿಂದ ನಾವು ಪರಿಸರ ಸಂರಕ್ಷಣೆ ಮಾಡಿದಾಗ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿ ಇರುತ್ತದೆ.ಹಲವು ದಶಕಗಳ ಹಿಂದೆ ಜನರು ತೆರದೆ ಬಾವಿಗಳಿಂದ ಕುಡಿಯುವ ನೀರನ್ನು ಸಂಗ್ರಹಿಸಿ ಕುಡಿಯುತ್ತಿದ್ದರು ಅಗ ಜನರಿಗೆ ಯಾವುದೇ ರೋಗಗಳು ಬರುತ್ತಿರಲಿಲ್ಲ ಆದರೆ ಈಗ ಕೊಳವೆ ಬಾವಿಗಳ ನೀರಿಗೆ ಮೊರೆ ಹೋಗುತ್ತಿದ್ದೇವೆ 1500 ಅಡಿಗಳ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟವಾಗಿದೆ ಇಂತಹ ಪರಿಸ್ಥಿತಿಯಲ್ಲಿ ಜನರು ಸಸ್ಯ ಸಂರಕ್ಷಣೆ ಮಾಡಿದರೆ  ಚನ್ನಾಗಿ ಮಳೆಯಾಗಿ ಶುದ್ದ ಗಾಳಿ ನೀರು ಸಿಗುತ್ತದೆ ಎಂದರು.
 ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು  ಪ್ರವಾಸಿ ಮಂದಿರದ ಆವರಣದಲ್ಲಿ ಸಸಿಗಳನ್ನು ನೆಟ್ಟು ಪ್ರತಿಜ್ಞಾವಿಧಿ ಬೋಧಿಸಿದರು.

ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪ್ರಶಾಂತ್ ಖಾನಗೌಡ ಪಾಟೀಲ,ತಾಪಂ ಇಒ ರಮೇಶ್,ಬಿಇಒ ತನುಜಾ,ತಾಲೂಕು ವೈದ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ,ವೃತ್ತ ನಿರೀಕ್ಷಕ ಪ್ರಶಾಂತ್ ವರ್ಣಿ,ಸಾಮಾಜಿಕ ಅರಣ್ಯಾಧಿಕಾರಿ ರವಿಶಂಕರೆಡ್ಡಿ,ಉಪ ನೀರಿಕ್ಷಕ ಅಣ್ಣಪ್ಪ,ಸಿಬ್ಬಂದಿ ವೆಂಕಟೇಶ್,ಮಧುಕರ್,ಶ್ರೀನಿವಾಸ,ಸಾಕ್ಷರತಾ ಸಮನ್ವಯ ಅಧಿಕಾರಿ ಎನ್.ಶಿವಪ್ಪ,ತಾಪಂ ಮಾಜಿ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು,ಪುರಸಭೆ ಎ.ಶ್ರೀನಿವಾಸ,ಮಾಜಿ ಸದಸ್ಯ ಮಹಮದ್ ಎಸ್.ನೂರುಲ್ಲಾ,ತಾಲೂಕು ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಆರ್.ಹನುಮಂತರೆಡ್ಡಿ,ಮತ್ತಿತರರು ಇದ್ದರು..