ಗ್ರಾಮೀಣ ಪ್ರದೇಶದಲ್ಲಿ ಡಾ. ಸ್ವಾತಿ ಶಿಷ್ಯರಿಂದ ನೃತ್ಯ ಪ್ರದರ್ಶನ

ಚನ್ನರಾಯಪಟ್ಟಣ: ತಾಲೂಕು ನುಗ್ಗೆಹಳ್ಳಿ ಗ್ರಾಮದಲ್ಲಿ ನಡೆದ ನೂತನ ಪುರವರ್ಗ ಹಿರೇಮಠ ಚಾರಿಟೇಬಲ್ ಟ್ರಸ್ಟ್ ಉದ್ಘಾಟನೆ ಸಮಾರಂಭದಲ್ಲಿ ಚನ್ನರಾಯಪಟ್ಟಣದ ಗಿನ್ನಿಸ್ ದಾಖಲೆಯ ಶ್ರೀ ನಾಟ್ಯಬೈರವಿ ಸಂಗೀತ ಮತ್ತು ನೃತ್ಯ ಶಾಲೆಯ ಡಾ.ಸ್ವಾತಿ ಪಿ.ಭಾರದ್ವಾಜ್ ಶಿಷ್ಯರಿಂದ ಗ್ರಾಮೀಣ ಪ್ರದೇಶದ ಜನರನ್ನು ಆಕರ್ಷಿಸುವ ಮೂಲಕ ಭರತನಾಟ್ಯ ಪ್ರದರ್ಶನ ನೀಡಿದ ಪುಟ್ಟ ಪುಟ್ಟ ಮಕ್ಕಳು ನೆರೆದಿದ್ದ ನೂರಾರು ಮುಗ್ಧ ಮನಸ್ಸಿನ ಗ್ರಾಮೀಣ ಪ್ರದೇಶದ ಜನರನ್ನು ಆಕರ್ಷಿಸುವ ಮೂಲಕ ಯಶಸ್ವಿಯಾದ ಕಲಾವಿದರು ಇದೇ ಸಂದರ್ಭದಲ್ಲಿ ಡಾ.ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಜಿಲ್ಲೆ, ರಾಜ್ಯ, ರಾಷ್ಟ್ರ, ಮತ್ತು ಅಂತರಾಷ್ಟ್ರೀಯ, ಮಟ್ಟದಲ್ಲಿ ಹೆಸರು ಮಾಡಿರುವ ಡಾ.ಸ್ವಾತಿ ಪಿ.ಭಾರದ್ವಾಜ್ ರವರು ತಮ್ಮ ಶಿಷ್ಯರನ್ನು ಗ್ರಾಮೀಣ ಪ್ರದೇಶದ ಕಾರ್ಯಕ್ರಮಗಳಿಗೆ ಕಳುಹಿಸಿ ಕೊಡುವ ಮೂಲಕ ತನ್ನಂತೆ ಇತರ ಕಲಾವಿದರು ಬೆಳೆಯಬೇಕೆಂಬ ಮನೋಭಾವದಿಂದ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಎಂದರು ಹಾಗೂ ಶ್ರವಣಬೆಳಗೊಳ ಕ್ಷೇತ್ರದ ಜನಪ್ರಿಯ ಶಾಸಕರಾದ ಸಿ.ಎನ್.ಬಾಲಕೃಷ್ಣರವರು ಭರತನಾಟ್ಯ ಕಲಾವಿದರಾದ ಪ್ರೇಕ್ಷ, ಶ್ರೀರಕ್ಷ, ಆಕೃತಿ ಹಾಗು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ಹಿತಾನ್ಯಾ ಸೇರಿದಂತೆ ಎಲ್ಲಾ ಕಲಾವಿದರಿಗೆ ಅಭಿನಂದಿಸಿದರು ಇದೇ ಸಂದರ್ಭದಲ್ಲಿ ಸ್ವಾಮೀಜಿಯವರು ಕಲಾವಿದರಿಗೆ ನೃತ್ಯ ಕಲಿಕೆಗಾಗಿ ಪ್ರೋತ್ಸಾಹ ಧನ ನೀಡಿ ಆಶೀರ್ವದಿಸಿ ಗೌರವಿಸಿದರು