ಗ್ರಾಮ ಪಂಚಾಯಿತಿಯಲ್ಲಿ ಮೋಟಾರ್ ಕಳುವು ಕೆ ಆರ್ ಎಸ್ ಪಕ್ಷದಿಂದ ದೂರು

ಗ್ರಾಮ ಪಂಚಾಯಿತಿಯಲ್ಲಿ ಮೋಟಾರ್ ಕಳುವು ಕೆ ಆರ್ ಎಸ್ ಪಕ್ಷದಿಂದ ದೂರು

ಸಿಂಧನೂರು: ತಾಲೂಕಿನ ವಿರುಪಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲದಗುಡ್ಡ ಗ್ರಾಮದ ಕುಡಿಯುವ ನೀರಿನ ಕೊಳವೆಬಾವಿಗೆ ಅಳಡಿಸಲು ಖರೀದಿಸಿದ್ದ 5 ಹೆಚ್ ಪಿ ಮೋಟಾರ್ ಕಳುವಾಗಿದ್ದು ಅದನ್ನ ಹುಡುಕಿ ಕೊಡುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಪಿಡಿಓ ಹುಚ್ಚಪ್ಪ ಅವರಿಗೆ ಸೋಮವಾರ ದೂರು ಸಲ್ಲಿಸಲಾಯಿತು.

ವಿರುಪಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲದ ಗುಡ್ಡ ಗ್ರಾಮದ ಜನರಿಗೆ ಕುಡಿಯುವ ನೀರು ಪೂರೈಸಲು ಕಳೆದ ವರ್ಷ ಗ್ರಾಮ ಪಂಚಾಯಿತಿಯಿಂದ 20,000 ವೆಚ್ಚದಲ್ಲಿ ಮೋಟರ್ ಖರೀದಿಸಲಾಗಿತ್ತು ವಿದ್ಯುತ್ ಕೊರತೆಯ ಕಾರಣಕ್ಕಾಗಿ ಅಳವಡಿಸಲು ಸಾಧ್ಯವಾಗಲಿಲ್ಲ ಅದನ್ನು ಎಲ್ಲರ ಒಪ್ಪಿಗೆ ಮೇರೆಗೆ ಅದೇ ಗ್ರಾಮದ ಪಂಚಾಯಿತಿ ಸದಸ್ಯನ ಮನೆಯಲ್ಲಿ ಇರಿಸಲಾಗಿತ್ತು ಈಗ ಐದು ಎಚ್.ಪಿ.ಮೋಟಾರ್ ಗೆ ಜೋಡಿಸಲು ವಿದ್ಯುತ್ ಸೌಕರ್ಯ ಕಲ್ಪಿಸಲಾಗಿದೆ ಆದರೆ ಪಂಚಾಯತಿ ಸದಸ್ಯರ ಮನೆಯಲ್ಲಿ ಇರಿಸಲಾಗಿದ್ದ ಮೋಟಾರ್ ಕಳುವಾಗಿದೆ ಎಂದು ಹೇಳುತ್ತಿದ್ದಾರೆ ಜನರು ಕುಡಿಯುವ ನೀರಿನ ಕೊರತೆ ಅನುಭವಿಸುತ್ತಿದ್ದಾರೆ ಕೂಡಲೇ ಅಧಿಕಾರಿಗಳು ಕಳವಾದ ಮೋಟಾರ್ ಹುಡುಕಿಸಿ ಮೋಟರ್ ಕಳ್ಳತನ ಮಾಡಿದ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕೆಂದು ಕೆಆರ್‌ಎಸ್ ಪಕ್ಷದಿಂದ ಒತ್ತಾಯಿಸಿದರು.

ಮನವಿ ಪತ್ರ ಸಲ್ಲಿಕೆ ಸಂದರ್ಭದಲ್ಲಿ ಕೆಆರ್‌ಎಸ್ ಪಕ್ಷದ ಯುವ ಮುಖಂಡರಾದ ನಿರುಪಾದಿ ಕೆ ಗೋಮರ್ಸಿ ತಾಲೂಕ ಕಾರ್ಯದರ್ಶಿ ಶರಣಪ್ಪ ಬೇರಿಗೆ ,ಬಸವರಾಜ್ ಮಲ್ಲದಗುಡ್ಡ ಸೇರಿದಂತೆ ಇನ್ನು ಹಲವಾರು ಜನ ಸೇರಿದ್ದರು.