ಗ್ವಾತಗಿ ಅವರ ಎತ್ತುಗಳು ಪ್ರಥಮ ಬಹುಮಾನ 5ಗ್ರಾಂ ಬಂಗಾರ ಮತ್ತು 5000 ರೂ ನಗದು ಬಹುಮಾನ.

ಗ್ವಾತಗಿ ಅವರ ಎತ್ತುಗಳು ಪ್ರಥಮ ಬಹುಮಾನ 5ಗ್ರಾಂ ಬಂಗಾರ ಮತ್ತು 5000 ರೂ ನಗದು ಬಹುಮಾನ.

ಮುದ್ದೇಬಿಹಾಳ: ತಾಲ್ಲೂಕಿನ ಶಿರೋಳ ಗ್ರಾಮದಲ್ಲಿ ಶ್ರೀ ಗ್ರಾಮದೇವತೆಯ ಜಾತ್ರೆಯ ಅಂಗವಾಗಿ ಸೋಮವಾರದಂದು ನಡೆದ ರಾಜ್ಯ ಮಟ್ಟದ ತರಬಂಡಿ ಸ್ಪರ್ಧೆಯಲ್ಲಿ ನಿಡಗುಂದಿ ತಾಲ್ಲೂಕಿನ ಬ್ಯಾಲ್ಯಾಳ ಗ್ರಾಮದ ಸಂಗನಗೌಡ ಗ್ವಾತಗಿ ಅವರ ಎತ್ತುಗಳು ಪ್ರಥಮ ಬಹುಮಾನವಾಗಿ 5 ಗ್ರಾಂ ಬಂಗಾರ ಮತ್ತು 5ಸಾವೀರ ರೂಪಾಯಿ ನಗದು ಬಹುಮಾನವನ್ನು ಪಡೆದುಕೊಂಡರು. ಎತ್ತಿನ ಮಾಲೀಕರಾದ ಅವ್ವಣ್ಣಗೌಡ ಗ್ವಾತಗಿ ಅವರಿಗೆ ಶಿರೋಳ ಗ್ರಾಮದ ಗ್ರಾಮ ದೇವತೆಯ ಜಾತ್ರಾ ಕಮೀಟಿಯು ಬಹುಮಾನವನ್ನು ನೀಡಿ, ಸನ್ಮಾನಿಸಿ ಗೌರವಿಸಿದರು. ಇದೇ ವೇಳೆಯಲ್ಲಿ ಗ್ವಾತಗಿ ಗೌಡರ ಅಭಿಮಾನಿಗಳು ಎತ್ತಿಗೆ ಗುಲಾಲು ಎರಚಿ ಸಂತೋಷ ವ್ಯಕ್ತಪಡಿಸಿದರು. ದ್ಯಾಮನಗೌಡ ಗ್ವಾತಗಿ, ಮಲ್ಲು ಕೋಳುರ,ಅವ್ವಣ್ಣ ಕೋಳೂರ, ಶಿವಾನಂದ ಗುಂಡಕರಜಗಿ, ರಾಮು ಹೀರೆಕುರುಬರ,ಸದಾನಂದ ಪಾಟೀಲ ಸೇರಿದಂತೆ ಅನೇಕ ಜನ ಅಭಿಮಾನಿಗಳು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು. ವರದಿ ಮುತ್ತು ಎನ್ ಬೀರಗೊಂಡ ಮುದ್ದೇಬಿಹಾಳ.