ಜ್ಞಾನವಿಕಾಸ ಕಾರ್ಯಕ್ರಮದಡಿ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ

ಜ್ಞಾನವಿಕಾಸ ಕಾರ್ಯಕ್ರಮದಡಿ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ

ಜ್ಞಾನವಿಕಾಸ ಕಾರ್ಯಕ್ರಮದಡಿ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ

ಬನ್ನೂರು ತಾಲೂಕಿನ ಬಸವನಹಳ್ಳಿ ವಲಯದ ಬೀಡನಹಳ್ಳಿ ಕಾರ್ಯ ಕ್ಷೇತ್ರದ ನಿಸರ್ಗ ಜ್ಞಾನ ವಿಕಾಸದ ಸದಸ್ಯರಿಗೆ ಹಾಗೂ ಸ್ವಸಹಾಯ ಸಂಘದ ಸದಸ್ಯರಿಗೆ ಮಾನವ ಸಂಪನ್ಮೂಲ ತರಬೇತಿ ಸಂಸ್ಥೆ ಮೈಸೂರಿನ ಸಹಯೋಗದೊಂದಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯಲ್ಲಿ ಐದು ದಿನಗಳ ಕಾಲ  ಹಮ್ಮಿಕೊಂಡಿದ್ದ ಟೆಡ್ಡಿ ಬೇರ್ ತಯಾರಿಕೆಯ ತರಬೇತಿಯ ಸಮಾರೋಪ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಶ್ರೀಮತಿ ಉಮಾವತಿ ರವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಪರಮಪೂಜ್ಯರು ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಬೇರೆ ಬೇರೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಸ್ವಉದ್ಯೋಗಕ್ಕೆ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ. ಅದರಂತೆ ಸದಸ್ಯರ ಆಸಕ್ತಿಗನುಸಾರವಾಗಿ ಬೇರೆ ಬೇರೆ ತರಬೇತಿಗಳನ್ನು ಹಮ್ಮಿಕೊಳ್ಳುತ್ತಿದ್ದು ಸದಸ್ಯರು ತರಬೇತಿ ಪಡೆದುಕೊಂಡು ಅಲ್ಲಿಗೆ ಬಿಡದೆ ಸಿಕ್ಕಂತಹ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶುಭ ಹಾರೈಸಿದರು. ಮಾನವ ಸಂಪನ್ಮೂಲ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ದಿನೇಶ್  ರವರು ಐದು ದಿನಗಳ ಕಾಲ ಪಡೆದುಕೊಂಡ ತರಬೇತಿಯನ್ನು ಮುಂದಿನ ದಿನಗಳಲ್ಲಿ   ಸ್ವಉದ್ಯೋಗವಾಗಿ ಮಾಡಿಕೊಂಡಲ್ಲಿ ತಮ್ಮ ಜೀವನದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಪ್ರತಿಯೊಬ್ಬರು ಇದನ್ನು ಅನುಷ್ಠಾನ ಮಾಡಿಕೊಳ್ಳ ಬೇಕು ಎಂದು ಸದಸ್ಯರಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸದಸ್ಯರ ಅನಿಸಿಕೆಗಳನ್ನು ಕೇಳಿ ಅವರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾನವ ಸಂಪನ್ಮೂಲ ತರಬೇತಿ ಸಂಸ್ಥೆಯ ಉಪನ್ಯಾಸಕರಾದ ಶ್ರೀ ಹರೀಶ್, ಶ್ವೇತ , ಟೆಡ್ಡಿ ಬೇರ್ ತಯಾರಿಕೆ ಶಿಕ್ಷಕಿ ಶ್ರೀಮತಿ ಯಶೋಧ, ಗ್ರಾಮ ಪಂಚಾಯತ್ ಸದಸ್ಯರಾದ ಮಮತಾ, ವಲಯದ ಮೇಲ್ವಿಚಾರಕಿ ಶಶಿಕಲಾ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಪ್ರಮೀಳಾ, ಸೇವಾಪ್ರತಿನಿಧಿ ಜ್ಯೋತಿ ಹಾಗೂ ಸಂಘದ ಸದಸ್ಯರು, ಇನ್ನೂ ಹಲವಾರು ಉಪಸ್ಥಿತರಿದ್ದರು.