ಜ್ಞಾನವಿಕಾಸ ಕಾರ್ಯಕ್ರಮದಡಿ ಬೀದಿ ನಾಟಕ ಕಾರ್ಯಕ್ರಮ.

ಜ್ಞಾನವಿಕಾಸ ಕಾರ್ಯಕ್ರಮದಡಿ ಬೀದಿ ನಾಟಕ ಕಾರ್ಯಕ್ರಮ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಭಾರತಿನಗರ ಇವರ ಸಹಯೋಗದಲ್ಲಿ ಅಟ್ಟುವನಹಳ್ಳಿ ಗ್ರಾಮದ ವೆOಕಟೇಶ್ವರ ದೇವಸ್ಥಾನ ಆವರಣದಲ್ಲಿ ಮಾತೃ ಶ್ರೀ ಜ್ಞಾನವಿಕಾಸ ಕೇOದ್ರದಲ್ಲಿ ಬೀದಿನಾಟಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ಭಾರತೀನಗರ ತಾಲೂಕಿನ ಯೋಜನಾಧಿಕಾರಿಯರು ಶ್ರೀಮತಿ ಸುವರ್ಣ ಭಟ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು.

ನಂತರ ಮಾತನಾಡಿದ ಅವರು ಜ್ಞಾನವಿಕಾಸ ಕಾರ್ಯಕ್ರಮವು ಪ್ರತಿ ಹೆಣ್ಣು ಮಕ್ಕಳಿಗೂ ಮಹಿಳೆಯರ ವಿಷಯಕ್ಕೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಜ್ಞಾನ ವಿಕಾಸದ ಮೂಲಕ  ಹಲವಾರು ಮಾಹಿತಿ ಪಡೆದು ನೀವೆಲ್ಲರು ಕುಟುಂಬ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
 
ಈ ಕಾರ್ಯಕ್ರಮವು ಶ್ರೀಮತಿ ಹೇಮಾವತಿ ಅಮ್ಮನವರ ಪ್ರೀತಿಯ ಕಾರ್ಯಕ್ರಮವಾಗಿದ್ದು ಪ್ರತಿಯೊಬ್ಬರು ಇದರ ಉಪಯೋಗಗಳನ್ನು ಪಡೆದುಕೂಳ್ಳಬೇಕು ಎಂದು ತಿಳಿಸಿದರು.ನಂತರ ಸೌಹಾರ್ದ ಸಂಸ್ಕೃತಿಕ ಕಲಾ ತಂಡದಿOದ ಸ್ವಚ್ಛತೆ ಶುಚಿತ್ವ ಯುಟ್ಯೂಬ್ ಬಳಕೆ ನೀರುಬಳಕೆ ಹಸಿಕಸ ಒಣಕಸ ಪರಿಸರ ಸಂರಕ್ಷಣೆ ವಾಹನ ಚಲಾಯಿಸುವಾಗ ಹೆಲ್ಮೆಟ್ ಬಳಕೆಯ ಬಗ್ಗೆ ಸಾಕ್ರಾಮಿಕ ಕಾಯಿಲೆಯ ಬಗ್ಗೆ ಕುಡಿತದಿOದ ಆಗುವ ಸಮಸ್ಯೆಗಳ ಬಗ್ಗೆ ಬೀದಿನಾಟಕ ಪ್ರದರ್ಶನ ಮಾಡುವ ಮೂಲಕ ಜಾಗೃತಿ ಮೂಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಕೇOದ್ರದ ಅಧ್ಯಕ್ಷರು ಜಯಲಕ್ಷ್ಮಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಅಶ್ವಿನಿ,ಮೇಲ್ವೀಚಾರಕರಾದ ಸುಮಾ, ನಾಟಕ ಮಂಡಳಿಯ ಶೇಖರ್ ಹಾಗೂ ಅವರ ತಂಡದವರು ಸೇವಾಪ್ರತಿನಿಧಿಗಳು ಕೇOದ್ರದ ಸದಸ್ಯರು, ಊರಿನ ಮುಖಂಡರು ಭಾಗವಹಿಸಿದರು.