ಜ್ಞಾನಸಾಗರ ಅಂತರಾಷ್ಟ್ರೀಯ ಶಾಲೆಯ ವತಿಯಿಂದ ಪೋಷಕರಿಗಾಗಿ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು

ಜ್ಞಾನಸಾಗರ ಅಂತರಾಷ್ಟ್ರೀಯ ಶಾಲೆಯ ವತಿಯಿಂದ ಪೋಷಕರಿಗಾಗಿ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು

ಚನ್ನರಾಯಪಟ್ಟಣ: ಪಟ್ಟಣದ ಜ್ಞಾನ ಸಾಗರ ವಿದ್ಯಾ ಸಂಸ್ಥೆಯ ಆವರಣದಲ್ಲಿ ಪೋಷಕರ ಕ್ರೀಡಾಕೂಟದಲ್ಲಿ  ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಶ್ರೀಮತಿ ಸುಜಾ ಮೇಡಂ ಎಲ್ಲಾ ಪೋಷಕರನ್ನು ಒಂದೆಡೆ ಸೇರಿಸಿ ಕ್ರೀಡಾಕೂಟವನ್ನು ಏರ್ಪಡಿಸುವ ಮೂಲಕ ಪೋಷಕರ ಮತ್ತು ಶಿಕ್ಷಣ ಸಂಸ್ಥೆ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಸಹಕಾರಿಯಾಗಿದೆ. ಪ್ರತಿಯೊಬ್ಬ ಪೋಷಕರು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಮಕ್ಕಳಿಗೆ ಪ್ರೋತ್ಸಾಹ ಹಾಗೂ ಪ್ರೇರಣೆ ಸಿಗುವಂತೆ ಮಾಡಬೇಕು ಎಂದರು. ಈ ಕ್ರೀಡಾಕೂಟವನ್ನು ಕುರಿತು ಪೋಷಕರಾದ ಶ್ರೀಮತಿ ಭವಾನಿ ಮತ್ತು ಅನು ಮಾತನಾಡಿ ಪೋಷಕರಿಗಾಗಿ ಸೌಹಾರ್ದ ಕ್ರೀಡಾಕೂಟವನ್ನು ಆಯೋಜನೆ ಮಾಡಿರುವ ನಾಗೇಶ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾಕ್ಟರ್ ಕೆ ನಾಗೇಶ್, ಕಾರ್ಯದರ್ಶಿಯಾದ ಡಾಕ್ಟರ್ ಭಾರತಿ ಹಾಗೂ ಪ್ರಾಂಶುಪಾಲರಾದ ಶ್ರೀಮತಿ ಸುಜಾ, ಕೊಡಿನೇಟರ್ ಫಿಲಿಪ್ಸ್ ಸೇರಿದಂತೆ ಆಡಳಿತ ಮಂಡಳಿಯ ಎಲ್ಲಾ ಸದಸ್ಯರಿಗೆ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ನಾಗೇಶ್ ಎಜುಕೇಶನ್ ಸಂಸ್ಥೆಯ ಅಧ್ಯಕ್ಷರಾದ ಡಾಕ್ಟರ್ ನಾಗೇಶ್, ನಾಗೇಶ್ ಎಜುಕೇಶನ್ ಸಂಸ್ಥೆಯ ಕಾರ್ಯದರ್ಶಿಯಾದ ಡಾಕ್ಟರ್ ಶ್ರೀಮತಿ ಭಾರತಿನಾಗೇಶ್, ಪ್ರಾಂಶುಪಾಲರಾದ ಶ್ರೀಮತಿ ಸುಜಾ  ಮೇಡಂ, ಜ್ಞಾನ ಸಾಗರ ಶಾಲೆಯ ಸಂಚಾಲಕರಾದ  ಫಿಲಿಪ್ಸ್, ಮುಖ್ಯ ಅತಿಥಿಗಳಾಗಿ ಪೋಷಕರುಗಳಾದ ಶ್ರೀಮತಿ ಸುನಿತಾ ಮತ್ತು ಪರಶುರಾಮ್  ಹಾಜರಿದ್ದರು.