ಜ್ಞಾನ ವಿಕಾಸ ಕಾರ್ಯಕ್ರಮದಡಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಬನ್ನೂರು ತಾಲೂಕು ಬನ್ನೂರು ವಲಯದ ಬಿ ಬೆಟ್ಟಹಳ್ಳಿ ಕಾರ್ಯ ಕ್ಷೇತ್ರದ ಶ್ರೀರಂಗ ಜ್ಞಾನವಿಕಾಸ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಲಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ರೇಖಾ ರವರು ಮಾಡಿದರು. ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಶ್ರೀಮತಿ ಉಮಾವತಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಬನ್ನೂರು ಸಮುದಾಯ ಆರೋಗ್ಯ ಕೇಂದ್ರದ ನೇತ್ರ ತಜ್ಞರಾದ ಡಾ. ರಂಗಸ್ವಾಮಿ, ಹಿರಿಯದಂತ ವೈದ್ಯಾಧಿಕಾರಿಗಳಾದ ಡಾ. ಶಬಾನ ಹುಸೇನ್, ಏನ್ ಸಿ ಡಿ ಸಿಬ್ಬಂದಿಗಳು, ಆಪ್ತ ಸಮಾಲೋಚಕರಾದ ರಾಜೇಂದ್ರ ಕುಮಾರ್, ಮತ್ತಿತರು ಉಪಸ್ಥಿತರಿದ್ದು ಸದಸ್ಯರ ಬಿಪಿ,ಶುಗರ್, ಹಲ್ಲಿನ ತಪಾಸಣೆ, ಕಣ್ಣಿನ ತಪಾಸಣೆ ಹಾಗೂ ಸಾಮಾನ್ಯ ಕಾಯಿಲೆಗಳ ತಪಾಸಣೆ ನಡೆಸಿ ಔಷಧಿಗಳನ್ನು ವಿತರಿಸಿದರು. 150 ಜನ ಸದಸ್ಯರು ಹಾಗೂ ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದ ಮುರಳಿ, ಜ್ಞಾನವಿಕಾಸ ಸಮನ್ವಯಧಿಕಾರಿ ಪ್ರಮೀಳಾ, ಒಕ್ಕೂಟದ ಅಧ್ಯಕ್ಷರಾದ ಲತಾ, ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷರಾದ ಭಾರತಿ, ಸೇವಾ ಪ್ರತಿನಿಧಿ ಪಲ್ಲವಿ ಉಪಸ್ಥಿತರಿದ್ದರು.