ತಾಲೂಕಿನ ಕಿರಣಗಿ ಗ್ರಾಮದಲ್ಲಿ ಅಣ್ಣಾಸಾಬ. ನಂದಗಾಂವರವರ ಆಕಳು            

ತಾಲೂಕಿನ ಕಿರಣಗಿ ಗ್ರಾಮದಲ್ಲಿ ಅಣ್ಣಾಸಾಬ. ನಂದಗಾಂವರವರ ಆಕಳು            

ಅಥಣಿ ಅಂದಾಜು 30x30 ಅಡಿ ವಿಸ್ತಾರವಾದ 40 ರಿಂದ 45 ಅಡಿ ಆಳದ ಅದರಲ್ಲಿ 10 ಅಡಿ ಆಳದ ತೇರೆದ ನೀರಿರುವ ಭಾವಿ ಆಕಸ್ಮಿಕವಾಗಿ ಕಾಲು ಜಾರಿ ಆಕಳು ಬಿದ್ದಿದ್ದು,ಸದರಿ ಸ್ಥಳೀಯ ನಿವಾಸಿಗಳು ಘಟನೆಯ ವಿಷಯವನ್ನು ಅಥಣಿ ಅಗ್ನಿಶಾಮಕ ಠಾಣೆ ದೂರವಾಣಿ ಕರೆ ಮಾಡಿ ತಿಳಿಸಿದರು, ಕರೆ ಬಂದ ತಕ್ಷಣ ಜಲವಾಹನದೊಂದಿಗೆ ಅಗ್ನಿಶಾಮಕ ತಂಡ ಸ್ಥಳಕ್ಕೆ ದೌಡಾಯಿಸಿ ಕಾರ್ಯ ಪ್ರವೃತ್ತರಾಗಿ ಸುಮಾರು 40 ರಿಂದ 45 ಅಡಿ ಆಳದ ಅದರಲ್ಲಿ 10 ಅಡಿ ಬಾವಿಯಲ್ಲಿ ಹೋಸ ಹಗ್ಗಗಳ ಸಹಾಯದಿಂದ ಕೆಳಗಿಳಿದು ಸುಮಾರು 01:50 ಒಂದು ಘಂಟೆ ಐವತ್ತು ನಿಮಿಷಗಳ ಕಾಲ ಶ್ರಮವಹಿಸಿ ಸಿಬ್ಬಂದಿಯವರುಗಳು ಪ್ರಾಣ ರಕ್ಷಣೆಗಾಗಿ ಕೂಗುತ್ತಿದ್ದ ಆಕಳನ್ನು ಜೀವಂತವಾಗಿ ಅಗ್ನಿಶಾಮಕ ಇಲಾಖೆಯ ತಂಡ ರಕ್ಷಣೆ ಮಾಡಿರುತ್ತಾರೆ. ಈ ಸಮಯ ಪ್ರಜ್ಞೆ ಕಾರ್ಯವನ್ನು ವೀಕ್ಷಿಸಿದ ಕಿರಣಗಿ ಗ್ರಾಮದ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ತಂಡದ ಕಾರ್ಯದಕ್ಷತೆಯನ್ನು ಮೆಚ್ಚಿ ಶ್ಲಾಘಿಸಿ ಹಾಗೂ ಹಸ್ತಲಾಗವ ಮಾಡಿ ಆಕಳ ಪ್ರಾಣ ರಕ್ಷಣೆ ಮಾಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು. ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಎ.ಡಿ.ಮುಲ್ಲಾ ರವರ ನೇತ್ರತ್ವದಲ್ಲಿ, ಅನಿಲ ಬಡಚಿರವರ,ಮಲ್ಲನಗೌಡ ನಾಯ್ಕ, ಮಹಾದೇವ ಚೌಗಲಾ ಕಲ್ಮೇಶ್ ಚಿಮ್ಮಡ, ಸಂತೋಷ್ ಚೌಗಲಾ, ಭಾಗವಹಿಸಿದ್ದರು