ದಕ್ಷಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮರಿತಿಬ್ಬೇಗೌಡರಪರ ಶಾಸಕ ಸಿ.ಎಸ್.ಪುಟ್ಟೇಗೌಡ ಮತಯಾಚನೆ 

ದಕ್ಷಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮರಿತಿಬ್ಬೇಗೌಡರಪರ ಶಾಸಕ ಸಿ.ಎಸ್.ಪುಟ್ಟೇಗೌಡ ಮತಯಾಚನೆ 

ಚನ್ನರಾಯಪಟ್ಟಣ: ದಕ್ಷಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮರಿತಿಬ್ಬೇಗೌಡರನ್ನು ಈ ಬಾರಿ ಶಿಕ್ಷಕರು ಬೆಂಬಲಿಸುವ0ತೆ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮತಯಾಚನೆ ಮಾಡಿದರು.ಅವರು ಪಟ್ಟಣದ ನವೋದಯ ವಿದ್ಯಾ ಮಂದಿರದಲ್ಲಿ ಶನಿವಾರ ವಿಧಾನಪರಿಷತ್ ಚುನಾವಣೆಯ ದಕ್ಷಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಪರ ಮತಯಾಚನೆ ಮಾಡಿ ಮಾತನಾಡಿ ಸತತ 4 ಬಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಮರಿತಿಬ್ಬೇಗೌಡ ಉಪಸಭಾಪತಿಗಳಾಗಿ ಅನುಭವಿ ರಾಜಕಾರಣಿಯಾಗಿದ್ದಾರೆ.

ಕಾಂಗ್ರೆಸ್ ಸರ್ಕಾರ ಈಬಾರಿ ಸುಭದ್ರವಾಗಿ ಐದು ವರ್ಷ ಪೂರೈಸಲಿದ್ದು ಸರ್ಕಾರಕ್ಕೆ ಪೂರಕವಾಗಿ ಶಿಕ್ಷಕರು ಸ್ಪಂದಿಸಿದ್ದಲ್ಲಿ ಅವರ ನೋವು ನಲಿವಿಗೆ ಜೊತೆಯಾಗಿರುತ್ತೇವೆ. ಸಿದ್ದರಾಮಯ್ಯನವರು ಉತ್ತಮ ಆಡಳಿತ ನೀಡುತ್ತಿದ್ದು ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ ಭರವಸೆಯಂತೆ ನಡೆದುಕೊಂಡಿದ್ದು ಐದು ಗ್ಯಾರಂಟಿಗಳ ಯೋಜನೆಯನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಶ್ರೇಯೋಭಿವೃದ್ಧಿಗೆ ಸದಾ ಸ್ಪಂದಿಸಲು ಸರ್ಕಾರ ಮುಂದಾಗಿದ್ದು ಐದನೇ ಬಾರಿಗೆ ವಿಧಾನಪರಿಷತ್ ಪ್ರವೇಶಿಸಲು ಮರಿತಿಬ್ಬೇಗೌಡರಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಪಿಎಲ್‌ಡಿಬ್ಯಾಂಕ್ ಅಧ್ಯಕ್ಷ ಎಂ.ಶ0ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಎ.ಮಂಜಣ್ಣ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಆರ್.ಮೂರ್ತಿ, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಎಲ್.ಪಿ.ಪ್ರಕಾಶ್‌ಗೌಡ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಡಿ.ಕಿಶೋರ್, ಯೂತ್‌ಕಾಂಗ್ರೆಸ್ ಮಾಜಿ ಅಧ್ಯಕ್ಷ ಯುವರಾಜ್, ಎಂ.ಹೊನ್ನೇನಹಳ್ಳಿ ಜಗದೀಶ್, ನಾಗೇಶ್ ಸೇರಿದಂತೆ ಇತರರು ಹಾಜರಿದ್ದರು