ದೇಶದಲ್ಲಿ ಜೀತ ಪದ್ಧತಿ ಸಂಪೂರ್ಣ ನಿರ್ಮೂಲನೆ ಮಾಡಬೇಕು- ನ್ಯಾ.ಮುಜಾಪರ್.ಎ.ಮಂಜರಿ

ದೇಶದಲ್ಲಿ ಜೀತ ಪದ್ಧತಿ ಸಂಪೂರ್ಣ ನಿರ್ಮೂಲನೆ ಮಾಡಬೇಕು- ನ್ಯಾ.ಮುಜಾಪರ್.ಎ.ಮಂಜರಿ

Feb 9, 2024 - 16:02
 0  2
ದೇಶದಲ್ಲಿ ಜೀತ ಪದ್ಧತಿ ಸಂಪೂರ್ಣ ನಿರ್ಮೂಲನೆ ಮಾಡಬೇಕು- ನ್ಯಾ.ಮುಜಾಪರ್.ಎ.ಮಂಜರಿ

ಕೆಜಿಎಫ್: ನಮ್ಮ ದೇಶದಲ್ಲಿ ಜೀತ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದು ತಾಲೂಕು ಕಾನೂನು ಸೇವಗಳ ಸಮಿತಿ ಕೆಜಿಎಫ್ ಹಾಗೂ ವಕೀಲರ ಸಂಘ ಕೆಜಎಫ್. ತಾಲೂಕು ಪಂಚಾಯಿತಿ ಕೆಜಿಎಫ್ ರವರ ಜಂಟಿ ಸಹಯೋಗದಲ್ಲಿ ಕೆಜಿಎಫ್ ನ ತಾಲೂಕು ಪಂಚಾಯತಿ ಕಚೇರಿ ಜೀತ ಪದ್ಧತಿ ನಿರ್ಮೂಲನ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಹಿರಿಯ ಶ್ರೇಣಿ ನ್ಯಾಯಾಧೀಶರು ಮುಜಾಪರ್ ಎ ಮಂಜರಿ. ದೇಶದಲ್ಲಿ ಶಾಶ್ವತವಾಗಿ ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದರು. ಇದಕ್ಕೆ ಕೇಂದ್ರ ಸರ್ಕಾರ 1976ರಲ್ಲಿ ಜೀತ ಕಾರ್ಮಿಕರ ಪದ್ಧತಿ ನಿರ್ಮಾಲನ ನಿರ್ಮೂಲನೆ ಕಾಯ್ದೆ ಬಂದಿದ್ದು, ಇಲ್ಲಿಯವರೆಗೂ ಅಂಕಿ ಅಂಶಗಳ  ಸರ್ವೆ ಪ್ರಕಾರ , 2023 ರವರಿಗೆ 3 ಲಕ್ಷ 13, ಸಾವಿರ  ಪ್ರಕರಣಗಳು ಕಂಡು ಬಂದಿದೆ ಇದರಲ್ಲಿ 2,95,000 ಜನರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಇದನ್ನು ನೋಡಿದರೆ ನಮ್ಮ ದೇಶದಲ್ಲಿ ಇನ್ನೂ ಜೀತ ಪದ್ಧತಿ ಜೀವಂತವಾಗಿದೆ ಎಂದು ಗೋಚರಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 2030 ರ ತನಕ  ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ಭಾಗವಾಗಿ ಈ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಇಲ್ಲಿ ನೆರೆದಿರ ತಕ್ಕಂತ ಅಂಗನವಾಡಿ ಕಾರ್ಯಕರ್ತರು ನಾಗರಿಕರು. ತಮ್ಮ ಹಳ್ಳಿ ಗಳ ವ್ಯಾಪ್ತಿಗಳಲ್ಲಿ ಕಲ್ಲುಗಳ ಕ್ವಾರಿ. ಇಟ್ಟಿಗೆ ಕಾರ್ಖಾನೆ. ಕೋಳಿ ಫಾರಂ. ಕೆಲವು ಸ್ಥಳದಲ್ಲಿ ಹೊರ ರಾಜ್ಯದವರನ್ನು ಕರೆದುಕೊಂಡು ಬಂದು ಕನಿಷ್ಠ ವೇತನ ನೀಡದೆ ಮೂಲಸೌಕರ್ಯಗಳನ್ನು ಕಲ್ಪಿಸದೆ ಆರೋಗ್ಯ ಸೇವೆ ನೀಡದೆ.ಸೆಡ್ಡುಗಳಲ್ಲಿ ವಾಸ ಮಾಡುವ ಪ್ರಕರಣಗಳು ಕಂಡು ಬಂದರೆ ತಕ್ಷಣ ನ್ಯಾಯಾಲಯ ಅಥವಾ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಜೀತ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮಂಜುನಾಥ.ಆರ್ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್ ಹರ್ತಿ. ತಾಲೂಕು ವಕೀಲರ ಸಂಘದ ಅಧ್ಯಕ್ಷರು ಎಸ್.ಎನ್.ರಾಜಗೋಪಾಲ. ಉಪಾಧ್ಯಕ್ಷರು ಮಣಿವಣ್ಣನ್. ಸರ್ಕಾರಿ ವಕೀಲರು.ದಿನೇಶ್. ಸಂಪನ್ಮೂಲ ವ್ಯಕ್ತಿ .ನಾಗರಾಜ್ .ಎಸ್.ಟಿ. ಶಿಶು ಯೋಜನಾ ಅಭಿವೃದ್ಧಿ ಅಧಿಕಾರಿ ರಾಜೇಶ್. ಅಂಗನವಾಡಿ ಕಾರ್ಯಕರ್ತರು ಸಾರ್ವಜನಿಕರು ಭಾಗವಹಿಸಿದ್ದರು.

What's Your Reaction?

like

dislike

love

funny

angry

sad

wow