ನಾಡೋಜ ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ.

ನಾಡೋಜ ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ.

ಕಲಬುರಗಿಯ ಮಹಿಪಾಲರೆಡ್ಡಿ ಮುನ್ನೂರೆ ಸೆರಿದಂತೆ ಹತ್ತು ಜನ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ 

ಜುಲೈ 7ರಂದು ಬೆಂಗಳೂರಿನಲ್ಲಿ ಪತ್ರಿಕಾ ದಿನಾಚರಣೆ 


ಬೆಂಗಳೂರು, ಜು.4-ಜಗತ್ತಿನ ಪ್ರಚಲಿತ ವಿದ್ಯಮಾನಗಳ ಮಾಹಿತಿ ನೀಡುವ ಪತ್ರಕರ್ತರು ಹಗಲುರಾತ್ರಿ ಎನ್ನದೇ ಕಷ್ಟವಾದರೂ ಇಷ್ಟಪಟ್ಟು ವರದಿ ಮಾಡುವ ಮಾಧ್ಯಮ ಮಿತ್ರರಿಗೆ,ಪತ್ರಕರ್ತ ಸಹೋದರರಿಗೆ ಅವರ ಪ್ರತಿಭಾವಂತಿಕೆಗೆ ಸಾಧನೆಗಾಗಿ ಅವರನ್ನ ಗುರುತಿಸಿ ಗೌರವಿಸುವ ಸಲುವಾಗಿ
ಪತ್ರಿಕಾ  ದಿನಾಚರಣೆಯ ಅಂಗವಾಗಿ ನಾಡೋಜ  ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
2005ರಿಂದ 2023 ರ ವರೆಗೆ ನಿರಂತರವಾಗಿ ಪ್ರತಿವರ್ಷ ಪತ್ರಕರ್ತರ ವೇದಿಕೆ ಬೆಂಗಳೂರು ಜುಲೈ 1ರಂದೇ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಮಾಧ್ಯಮ ಮಿತ್ರರಿಗೆ ಮಾಧ್ಯಮ ಪ್ರಶಸ್ತಿಯನ್ನು ನಿರಂತರವಾಗಿ ಪ್ರಧಾನ ಮಾಡುತ್ತಾ ಬಂದಿದೆ.ಈ ಬಾರಿ ಜುಲೈ 7 ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಬೆಳಗ್ಗೆ 10:30ಕ್ಕೆ ಪತ್ರಿಕಾ ದಿನಾಚರಣೆಯನ್ನು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಹಾಗೂ ನಿವೃತ್ತ ಕರ್ನಾಟಕ ಲೋಕಾಯುಕ್ತರಾದ ಶ್ರೀ ಸಂತೋಷ್ ಹೆಗಡೆಯವರು ಉದ್ಘಾಟಿಸಲಿದ್ದಾರೆ.ಸಾಧನೆ ಮಾಡಿದ ಪತ್ರಕರ್ತರಿಗೆ ಶ್ರೀ ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ರಾಜ್ಯಾಧ್ಯಕ್ಷರಾದ ಶ್ರೀ ಮನು ಬಳಿಗಾರ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶಿವಾನಂದ ತಗಡೂರು ರವರು ಜಂಟಿಯಾಗಿ ನೀಡಲಿದ್ದಾರೆ.

ಶ್ರೀ ಕೆ.ಎಲ್.ಕುಂದರಗಿ ಅವರು ಬರೆದ 'ಸ್ವತಂತ್ರ ಸೇನಾನಿ ವೀರ ಸಾವರ್ಕರ್' ಎಂಬ ನಾಟಕದ ಪುಸ್ತಕವನ್ನು ಬಂಜಾರ ಅಕಾಡೆಮಿ ಅಧ್ಯಕ್ಷ  
ಡಾ.ಎ.ಆರ್.ಗೋವಿಂದಸ್ವಾಮಿ ಲೋಕಾರ್ಪಣೆ ಮಾಡಲಿದ್ದಾರೆ. ಐ ಪತ್ರಿಕೆಗಳನ್ನ ಬಳಸಿಕೊಂಡು. ಲಾಂಗೆಸ್ಟ್ ಲ್ಯಾಮಿನೇಷನ್ ಅನ್ನು ಈ ಸಂಗಮೇಶ್ ಬಾದವಾಡಗಿಯವರು ಬಿಡುಗಡೆಗೊಳಿಸುವರು. ಹಿರಿಯ ಪತ್ರಕರ್ತ ರಾಘವೇಂದ್ರ ಗಂಗಾವತಿ, ಎ.ಜಿ.ಮಲ್ಲಿಕಾರ್ಜುನ್ ಮಠ ವಿಜಯಪುರ ರವರು
ಯಾದಗಿರಿಯ ಮೇಘನಾಥ್ ಅಬ್ರಹಾಂ ಬೆಳ್ಳಿ ಅವರ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ.ವಿ.ಎಸ್ ಕೃಷ್ಣ ಅವರು ವಹಿಸುವರು. ಶ್ರೀಲಲಿತ ಕಲಾ ನಿಕೇತನ ಬೆಂಗಳೂರು. ಗೆಜ್ಜೆನಾದ ನೃತ್ಯ ಮಂದಿರ ಬೆಂಗಳೂರು ರುಕ್ಮಿಣಿ ಸುರುವೆ ಬೆಂಗಳೂರು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವವು.

ಮಾಧ್ಯಮ ಪ್ರಶಸ್ತಿ ಪುರಸ್ಕೃತರು:ಶ್ರೀ ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿಗೆ ಆಯ್ಕೆಯಾದ ಹಾಸನದ ಜನಮಿತ್ರ ಪತ್ರಿಕೆಯ ಸಂಪಾಧಕ ಶ್ರೀ ಎಂ ಬಿ ಮದನ ಗೌಡ. ಕೊಪ್ಪಳದ ಹಿರಿಯ ಪತ್ರಕರ್ತ ಶ್ರೀ ವಿ.ಆರ್ ತಾಳಿಕೋಟಿ, ಕಲಬುರ್ಗಿಯ ಹಿರಿಯ ಪತ್ರಕರ್ತ ಶ್ರೀ ಮಹಿಪಾಲ ರೆಡ್ಡಿ ಮುನ್ನೂರ್., 
ಬಿಜಾಪುರ ಜಿಲ್ಲೆಯ ವಿಜಯ ಕರ್ನಾಟಕ ಪತ್ರಿಕೆಯ ಮುಖ್ಯಸ್ಥ ಸಂಗಮೇಶ್ ಚೂರಿ.ಬಳ್ಳಾರಿಯ ಗಣಿ ನಾಡ ಪತ್ರಿಕೆಯ ಸಂಪಾದಕ ವಲಿ ಭಾಷಾ ಯಾದಗಿರಿಯ ಸಂಯುಕ್ತ ಕರ್ನಾಟಕ ಪತ್ರಿಕೆಯಶ್ರೀ ಬಿ.ಎಸ್.ಹಿರೇಮಠ್. ಪಬ್ಲಿಕ್ ಟಿವಿ ಯ ಸೇತುರಾಮ ಅರವಿಂದ್.ರಾಮನಗರ ಜಿಲ್ಲೆಯ ವಿಜಯ ಕರ್ನಾಟಕ ಪತ್ರಿಕೆಯ  ಶ್ರೀ ರವಿಕಿರಣ್ ಮಂಡ್ಯ ಜಿಲ್ಲೆಯ ರಾಜು ಮಳವಳ್ಳಿ ಸಂಯುಕ್ತ ಕರ್ನಾಟಕ ಪತ್ರಿಕೆ. ಚಾಮರಾಜನಗರ ಜಿಲ್ಲೆಯ ಕಾವೇರಿ ಎಕ್ಸ್ ಪ್ರೆಸ್ ಪತ್ರಿಕೆಯ ಸಂಪಾದಕರಾದ ಶ್ರೀ ಮಾಹದೇವ ಅವರು ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಪತ್ರಕರ್ತರ ವೇದಿಕೆಯ ರಾಜ್ಯಾಧ್ಯಕ್ಷ ಮಹೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ