ನೀರಿನ ಉಳಿವಿಗಾಗಿ ವಾಕಥಾನ್, ಶಾಸಕ ಬೈರತಿ ಬಸವರಾಜ್ ಚಾಲನೆ.

ಕೆ.ಆರ್.ಪುರ, ನಗರದಲ್ಲಿ ನೀರಿನ ಬವಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನೀರಿನ ಉಳಿವು ಹಾಗೂ ಮಿತ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಶಾಂತಕೃಷ್ಣಮೂರ್ತಿ ಫೌಂಡೇಶನ್ ವತಿಯಿಂದ ಕ್ಷೇತ್ರದ ರಾಮಮೂರ್ತಿನಗರದಲ್ಲಿ ಏರ್ಪಡಿಸಿದ್ದ ವಾಕಥಾನ್ ಗೆ ಶಾಸಕ ಬಿ.ಎ.ಬಸವರಾಜ ಅವರು ಚಾಲನೆ ನೀಡಿದರು.
ಬಿ.ಎ.ಬಸವರಾಜ ಅವರು ಮಾತನಾಡಿ ನೀರಿನ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ವಾಕಥಾನ್ ಆಯೋಜನೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ವ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಐದು ಕಿಲೋಮೀಟರ್ ವಾಕಥಾನ್ ಏರ್ಪಡಿಸಲಾಗಿದೆ ನೀರಿನ ಮರುಬಳಕೆಗೆ ನಿವಾಸಿಗಳು ಕೈಜೋಡಿಸಿ ಎಂದು ಮನವಿ ಮಾಡಿದರು.
ಮುಂದಿನ ತಿಂಗಳಲ್ಲಿ ಮತ್ತೊಮ್ಮೆ ಇದೇ ರೀತಿಯಲ್ಲಿ ಕುಡಿಯುವ ನೀರಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಿ ಜಲ ಮಂಡಳಿ ಅಧ್ಯಕ್ಷರನ್ನ ಹಾಗೂ ಬಿಬಿಎಂಪಿ ಆಯುಕ್ತರನ್ನ ಕ್ಷೇತ್ರಕ್ಕೆ ಕರೆಸಿ ಅವರಿಂದ ಇನ್ನಷ್ಟು ಹೆಚ್ಚು ಮಾಹಿತಿ ಪಡೆಯುವ ಕೆಲಸವನ್ನ ಮಾಡೋಣ ಎಂದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಒಂದು ವರ್ಷ ಕಳೆಯುತ್ತಾ ಬಂದರೂ ಯಾವುದೇ ಅಭಿವೃದ್ಧಿ ಕೆಲಸಗಳು ಕೈಗೊಳ್ಳುತ್ತಿಲ್ಲ,ಜನರಿಗೆ ಮೂಲಭೂತ ಸೌಕರ್ಯಗಳನ್ನೂ ನೀಡುತ್ತಿಲ್ಲ,ಮಳೆಗಾಲ ಸಮೀಪಿಸುತ್ತಿದ್ದರು ರಸ್ತೆ, ಚರಂಡಿ,ರಾಜಕಾಲುವೆಗಳನ್ನ ಸರಿಪಡಿಸುತ್ತಿಲ್ಲ ಎಂದು
ಫೌಂಡೇಶನ್ ಅಧ್ಯಕ್ಷೆ ಶಾಂತ ಕೃಷ್ಣಮೂರ್ತಿ ಅವರು ಮಾತನಾಡಿ ಜೀವಜಲಕ್ಕಾಗಿ ಎಸ್ ಕೆ ಎಫ್ ಫೌಂಡೇಶನ್ ವತಿಯಿಂದ ವಾಕಥಾನ್ ಆಯೋಜನೆ ಮಾಡಲಾಗಿದ್ದು,ಸಾರ್ವಜನಿಕರ ಉತ್ಸಾಹ ಸಂತಸ ತಂದಿದೆ ಎಂದು ಹೇಳಿದರು.
ಮಳೆ ನೀರು ಕೊಯ್ಲು ,ಇಂಗುಗುಂಡಿಗಳ ಹೆಚ್ಚಳ ಸೇರಿದಂತೆ ಅಂತರ್ಜಲ ವೃದ್ಧಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಈ ವಾಕಥಾನ್ ನಲ್ಲಿ ಅರಿವು ಮೂಡಿಸಲಾಯಿತು ಎಂದು ತಿಳಿಸಿದರು.
ವಾಕಥಾನ್ ನಲ್ಲಿ ಸೂಮಾರು ಐದು ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡು ರಾಮಮೂರ್ತಿನಗರ,ಕಲ್ಕೆರೆ,ಎನ್ ಆರ್ ಐ ಬಡಾವಣೆ, ಕನಕನಗರ ಸೇರಿದಂತೆ ಐದಾರು ಕಿ.ಮೀಟರ್ ದೂರ ಜಾಥ ಮಾಡಿ ನಿರಿನ ಮಿತಬಳಕೆ ಬಗ್ಗೆ ಮನವರಿಗೆ ಮಾಡಿಕೊಟ್ಟರು ಎಂದರು.
ಈ ಸಂದರ್ಭದಲ್ಲಿ ಜಲ ತಜ್ಞರು ಪ್ರೋ.ನವನೀತ್,ಡಾ.ದೇವರಾಜ್ ,ಡಾ.ವಸಂತಿ ಫೌಂಡೇಶನ್ ಸಂಸ್ಥಾಪಕ ಸದಸ್ಯ ಕೃಷ್ಣಮೂರ್ತಿ,ಬಿಬಿಎಂಪಿ ಇಂಜಿನಿಯರ್ ಗಳಾದ ವಿನಯ್,ರಮೇಶ್,ಸಂಜಯ್,
ಮುಖಂಡರಾದ ಆನಂದ್,ಪೃಥ್ವಿ, ಸುಬ್ರಹ್ಮಣಿ,ಮೈಕಲ್,ಸತೀಶ್,ಹಿರೇಗೌಡ ಇದ್ದರು.