ನೇತ್ರಾವತಿ ಜ್ಞಾನ ವಿಕಾಸ ಕೇಂದ್ರದ ಅಡಿ ಸ್ವ ಉದ್ಯೋಗ ಪ್ರೇರಣಾ ಶಿಬಿರ ಕಾರ್ಯಕ್ರಮ

ನೇತ್ರಾವತಿ ಜ್ಞಾನ ವಿಕಾಸ ಕೇಂದ್ರದ ಅಡಿ ಸ್ವ ಉದ್ಯೋಗ ಪ್ರೇರಣಾ ಶಿಬಿರ ಕಾರ್ಯಕ್ರಮ

ಬನ್ನೂರು ತಾಲೂಕು ಬಸವನಹಳ್ಳಿ ವಲಯದ ವಡ್ಡರಕೊಪ್ಪಲು ನೇತ್ರಾವತಿ ಜ್ಞಾನವಿಕಾಸ ಕೇಂದ್ರದಲ್ಲಿ ಸ್ವ ಉದ್ಯೋಗ ಪ್ರೇರಣಾ ಶಿಬಿರವನ್ನು ಹಮ್ಮಿಕೊಂಡಿದ್ದು ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಶ್ರೀಮತಿ ಉಮಾವತಿ ಮೇಡಂ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಮಹಿಳೆಯೊಬ್ಬಳು ಆರ್ಥಿಕವಾಗಿ ಸದೃಢ ಆದರೆ ಸಮಾಜದಲ್ಲಿ ಆಕೆಗೆ ಉತ್ತಮವಾದ ಮನ್ನಣೆ, ಗೌರವ ಸಿಗುತ್ತದೆ. ಆದುದರಿಂದ ಪ್ರತಿಯೊಬ್ಬ ಜ್ಞಾನವಿಕಾಸ ಸದಸ್ಯರು ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಪಡೆದುಕೊಂಡ ಮಾಹಿತಿಯನ್ನು ತಿಳಿದುಕೊಂಡು ಏನಾದರೂ ಸಾಧನೆ ಮಾಡಬೇಕು ಸ್ವ ಉದ್ಯೋಗಗಳನ್ನು ಮಾಡಬೇಕು ಎಂದು ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿಯಾದ ರಾಜು ಬಡ್ಡಿಯವರು ಅಲ್ಪ ಬಂಡವಾಳದಿಂದ ಅಧಿಕ ಲಾಭ ಪಡೆಯುವ ಸ್ವಉದ್ಯೋಗವಾದ ಅಣಬೆ ಕೃಷಿ ಬೇಸಾಯದ ಬಗ್ಗೆ ಮಾಹಿತಿ ನೀಡಿದರು. ಹಾಗೂ ತೋಟಗಾರಿಕಾ ಇಲಾಖೆಯ ತಾಂತ್ರಿಕ ಸಹಾಯಕರಾದ ಪ್ರವೀಣ್ ಅವರು ಅಣಬೆ ಕೃಷಿ ಬೇಸಾಯದ ಬಗ್ಗೆ ಪ್ರಾತ್ಯಕ್ಷಿತ ಮಾಡಿ ತೋರಿಸಿದರು.

ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ರಾಧಾಕೃಷ್ಣ ಭಟ್, ತಾಲೂಕಿನ ನೋಡಲ್ ಆಫೀಸರ್ ಆದರ್ಶ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಪ್ರಮೀಳಾ, ಎಸ್ಪಿ ಜ್ಯೋತಿ ಹಾಗೂ ಜ್ಞಾನವಿಕಾಸದ ಸದಸ್ಯರು ಉಪಸ್ಥಿತರಿದ್ದರು.