ಪರಿಸರ ಕಾಳಜಿ ಜೊತೆಗೆ ಜನರಿಗೆ ಪರಿಸರದ ಮಹತ್ವ ಸಾರುವ ಕೆಲಸವಾಗಲಿ:ಬಸವರಾಜ

ಇಂಡಿ:ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಂಜಗಿ ಗ್ರಾಮದ ಯುವಕರ ಕಡೆಯಿಂದ ಸಸಿ ಹಚ್ಚುವ ಕಾರ್ಯಕ್ರಮ
ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ವಿಶ್ವದಾದ್ಯಂತ ಸುಮಾರು 143ದೇಶಗಳು ಆಚರಿಸುತ್ತವೆ.ಪರಿಸರ ಕಾಳಜಿ ಜೊತೆಗೆ ಜನರಿಗೆ ಪರಿಸರದ ಮಹತ್ವ ಸಾರುವ ಹಾಗೂ ಜನರಲ್ಲಿ ಜಾಗೃತಿ ಗೊಳಿಸುವ ಸಲುವಾಗಿ 1972ರಲ್ಲಿ ವಿಶ್ವ ಸಂಸ್ಥೆ ಈ ದಿನವನ್ನು ಘೋಷಿಸಿತ್ತು ಎಂದು ಬಸವರಾಜ ಕಂಟಿಕಾರ ಮಾತನಾಡಿದರು.
ಆದಕಾರಣ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮರಗಳನ್ನು ಹಚ್ಚುವ ಕಾರ್ಯ ಕ್ರಮವನ್ನು ಮುಂದಾಳತ್ವವನ್ನು ವಹಿಸಿಕೊಂಡವರು ಬಸವರಾಜ ನಿಂ ಕಾಂಟಿಕಾರ ಇವರು ಎಲ್ಲಾ ಶಾಲೆಗಳಿಗೆ ಮರಗಳನ್ನು ವ್ಯವಸ್ಥೆ ಮಾಡಿದರು.
ಸತೀಶ ಕಾಂಟಿಕಾರ ಸುನಿಲ ಗುಡ್ಲ ಶಿವಪ್ಪ ಹೂಗಾರ ಅಮೋಘಸಿದ್ದ ಹಿರೇಕುರಬರ ಶಾಂತುಗೌಡ ಪಾಟೀಲ ಇವರೆಲ್ಲ ಸಹಾದಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಗ್ರಾಮದ
ಡಾ.ಬಿ.ಆರ್.ಅಂಬೇಡ್ಕರ ವಸತಿ ಶಾಲೆ ಹಂಜಗಿ,
ಸರಕಾರಿ ಪ್ರೌಢ ಶಾಲೆ ಹಂಜಗಿ, ಸರಕಾರಿ ಮಾದರಿ ಶಾಲೆ ಹಂಜಗಿ,ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಂಜಗಿ, ಹಂಜಗಿ ಗ್ರಾಮದ 8ಶಾಲೆಗಳಿಗೆ ಮರಗಳನ್ನು ಹಚ್ಚಿ ಪರಿಸರ ದಿನದ ಜನ ಜಾಗೃತಿಮಾಡಿದ್ದಾರೆ.