ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ .....ಮಹದೇವ್ ನಾಯಕ್....

ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ .....ಮಹದೇವ್ ನಾಯಕ್....

ಕೆಜಿಎಫ್  :ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಕೆ ಜಿ ಎಫ್ ತಾಲೂಕಿನ ಬೇತಮಂಗಲ ಹೋಬಳಿಯ ನತ್ತ ಗ್ರಾಮದಲ್ಲಿ ಪ್ರಗತಿ ಬಂದು ಸ್ವಸಹಾಯ ಸಂಘಗಳ ಸದಸ್ಯರುಗಳಿಗೆ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸಲು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಗಿಡಗಳನ್ನು ಗ್ರಾಮಸ್ಥರಿಗೆ ವಿತರಿಸಿ ಮಾತನಾಡಿದ ಮಹದೇವ ನಾಯಕ್ ಯೋಜನಾಧಿಕಾರಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಪರಿಸರದಲ್ಲಿ ಪ್ರತಿಯೊಬ್ಬರು ಕನಿಷ್ಠ ಒಂದು ಗಿಡವನ್ನು ನೆಟ್ಟು ಅದನ್ನು ಕಾಪಾಡಿಕೊಂಡು ಬಂದರೆ ಉತ್ತಮ ಪರಿಸರ ಸೃಷ್ಟಿಯಾಗುವುದರ ಬದಲಿಗೆ ನಮ್ಮ ಪೀಳಿಗೆಗೆ ಉತ್ತಮ ಪರಿಸರ ಸೃಷ್ಟಿಯಾಗುವುದು ಜೊತೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು 10 ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಕೆಲಸವನ್ನು ನಿರ್ವಹಿಸುತ್ತಿದ್ದು ಸಾಲ ಕೊಡುವುದು ಒಂದೇ ಅಲ್ಲದೆ ಪರಿಸರ ಸಂರಕ್ಷಣೆಗೆ ಹೆಚ್ಚು ಆದ್ಯತೆಯನ್ನು ನೀಡುತ್ತಾ ಗ್ರಾಮೀಣ ಭಾಗದಲ್ಲಿ  ಶಾಲಾ ,ದೇವಸ್ಥಾನಗಳ ಆವರಣದಲ್ಲಿ ಸಸ್ಯಗಳನ್ನು ನೆಡುವುದು ಹಾಗೂ ಸುಜ್ಞಾನ ನಿಧಿ ಶಿಶು ವೇತನ ನೀಡುವುದು , ದೇವಸ್ಥಾನಗಳ ಹೊಸ ಕಟ್ಟಡ ನಿರ್ಮಾಣ ಕೆ ಆರ್ಥಿಕ  ಸಹಾಯಧನ ನೀಡುವುದು , ನಿರ್ಗತಿಕರಿಗೆ ಮಾಸಿಕ ವಾಗಿ ಮಾಶಾಸನ, ನೀಡುವುದು ನಮ್ಮೂರ ನಮ್ಮ ಕೆರೆ ಕಾರ್ಯಕ್ರಮದಡಿ ಕೆರೆಗಳ ಪುನಶ್ಚೇತನ ಕಾಮಗಾರಿ ಯಲ್ಲಿ   ಹೂಳು ತೆಗೆಯುವ ಕೆಲಸ ಗಳಬಗ್ಗೆ ತಿಳಿಸಿದರು .  ಗ್ರಾಮದೇವತೆ ಗಂಗಮ್ಮ ದೇವಿ ದೇವಸ್ಥಾನ ಆವರಣದಲ್ಲಿ ಸುಮಾರು 50 ಗಿಡಗಳನ್ನು ಸ್ವಸಹಾಯ ಸಂಘ ಸದಸ್ಯರು ಗ್ರಾಮಸ್ಥರು ಸೇರಿಕೊಂಡು ಗಿಡಗಳನ್ನು  ನೆಟ್ಟು ಬೆಳೆಸಲು ಸಂಘದ ಜವಾಬ್ದಾರಿ ವಹಿಸಿಕೊಂಡರು . ಕಾರ್ಯಕ್ರಮದ ಉಪಸ್ಥಿತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರೂಪಾ ಮೇಡಂ ಕೃಷಿ ಮೇಲ್ವಿಚಾರಕ ಮನೋಹರ್ ಡಿ ಎನ್ ವಲಯ ಮೇಲ್ವಿಚಾರಕ ರವೀಂದ್ರ ಜಿ ಎನ್ ಸೇವ ಪ್ರತಿನಿಧಿ  ಪ್ರಭಾವತಿ ಸಂಘದ ಸದಸ್ಯರು ಇದ್ದರು