ಪಿ.ಎಂ.ಶ್ರೀ ಶಾಲಾ ಮಕ್ಕಳಿಂದ ವಿಶೇಷ ದಾಖಲಾತಿ ಆಂದೋಲನ

ಪಿ.ಎಂ.ಶ್ರೀ ಶಾಲಾ ಮಕ್ಕಳಿಂದ ವಿಶೇಷ ದಾಖಲಾತಿ ಆಂದೋಲನ

ಬಾಗೇಪಲ್ಲಿ: ಪೋಷಕರಲ್ಲಿರುವ ಸರಕಾರಿ ಶಾಲೆಯೆಂಬ ಕೀಳರಿಮೆಯನ್ನು ದೂರ ಮಾಡಬೇಕು. ಇಂತಹ ಮಹತ್ವದ ಯೋಚನೆಯನ್ನು ಮಾಡಿದವರು ಸರಕಾರಿ ಶಾಲೆಯ ಶಿಕ್ಷಕರು. ಅದಕ್ಕಾಗಿ ಅವರೆಲ್ಲರೂ ಸೇರಿ ರೂಪಿಸಿದ್ದು ಶಿಕ್ಷಣ ವ್ಯವಸ್ಥೆಯೇ ಮೆಚ್ಚುವಂತಹ ವಿಶೇಷ ದಾಖಲಾತಿ ಅಭಿಯಾನ ಮಾಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತನುಜಾ ತಿಳಿಸಿದ್ದಾರೆ

ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಜಾರಿಯಾಗಿರುವ ವಿಶೇಷ ದಾಖಲಾತಿ ಆಂದೋಲನ ತಾಲೂಕಿನಾದ್ಯಂತ ಪ್ರಾರಂಭವಾದ ಹಿನ್ನಲೆಯಲ್ಲಿ  ಪಟ್ಟಣದ ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷ ಕರು ತಮ್ಮ ಶಾಲೆಗೆ ಮಕ್ಕಳನ್ನು ದಾಖಲಿಸಿಕೊಳ್ಳುವ ಉದ್ದೇಶದಿಂದ  ಮನೆ ಮನೆಗೆ ತೆರಳಿ ಮನೆ ಬಾಗಿಲಲ್ಲೇ ದಾಖಲು ಮಾಡಿಕೊಳ್ಳು ಜೂನ್1 ರಿಂದ 15 ದಿನಾಂಕದ ವರಿಗೆ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮಕ್ಕೆ ಬಿಇಓ ಎಂ ತನುಜಾ ಚಾಲನೆ ನೀಡಿ ಮಾತನಾಡಿದ ಅವರು ದೇಶದ ಅಭಿವೃದ್ಧಿಗೆ ಶಿಕ್ಷಣ ಮೂಲ ಕಾರಣವಾಗಿದೆ. ಎಲ್ಲಾ ಮಕ್ಕಳು ಶಿಕ್ಷಣವನ್ನು ಪಡೆಯಬೇಕೆಂದು ಸರ್ಕಾರದ ಮೂಲ ಉದ್ದೇಶವು ಕೂಡಾ ಹಾಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಪ್ರತೀವರ್ಷವು ಮಾಡುತ್ತಾ ಬಂದಿದೆ.

ಶಿಕ್ಷಣ ವಂಚಿತ ಮಕ್ಕಳು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರಲು
ಶಿಕ್ಷಕರು ಮಕ್ಕಳು ಮನೆ ಮನೆಗೆ ತೆರಳಿ ಪೋಷಕರನ್ನು ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸಗಳನ್ನು ಮಾಡುತ್ತದೆ.  ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆ ತರಲು ವಿಶೇಷ ದಾಖಲಾತಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಶಿಕ್ಷಣ ಸಮನ್ವಯ ಅಧಿಕಾರಿಗಳಾದ ಆರ್. ವೆಂಕಟರಾಮ್ ಮಾತನಾಡಿ
ಗ್ರಾಮೀಣ ಭಾಗದ ಬಡ ಮಕ್ಕಳು ಶೈಕ್ಷ ಣಿಕವಾಗಿ ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ ಸರಕಾರ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿ, ಉಚಿತವಾಗಿ ಗುಣಮಟ್ಟದ ಶಿಕ್ಷ ಣ ನೀಡುತ್ತಿದ್ದು, ಮಕ್ಕಳು ಸರಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷ ಣ ಪಡೆಯಬೇಕು ಎಂದರು.

ಪಿ.ಎಂ.ಶ್ರೀ ಶಾಲೆಯಲ್ಲಿ ಮುಖ್ಯ ಶಿಕ್ಷಕ
ಆರ್.ಹನುಮಂತ ರೆಡ್ಡಿ
ಮಾತನಾಡಿ
ಶಾಲಾ ಶೈಕ್ಷಣಿಕ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೀಯ ಪಿಎಂಶ್ರೀ(ಪಿಎಂ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ) ಯೋಜನೆಗೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದ್ದು
ಪಿಎಂ ಶ್ರೀ ಶಾಲೆಗಳಲ್ಲಿ
ಅತ್ಯಾಧುನಿಕ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಸಮಗ್ರ ವಿಧಾನಗಳನ್ನು ಒಳಗೊಂಡಿರುತ್ತದೆ. ಅನ್ವೇಷಣೆ ಕೇಂದ್ರಿತ ಕಲಿಕಾ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು. ಈ ಶಾಲೆಗಳಲ್ಲಿ ಆಧುನಿಕ ತಂತ್ರಜ್ಞಾನ, ಸ್ಮಾರ್ಟ್ ತರಗತಿಗಳು,ಉಚಿತ ಕಂಪ್ಯೂಟರ್ ಶಿಕ್ಷಣ, ಡಿಜಿಟಲ್ ಗ್ರಂಥಾಲಯ, ಅತ್ಯಾಧುನಿಕ ಶೌಚಾಲಯ, ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಪ್ರಭಾವತಿ, ಧರ್ಮಪುತ್ರಿ, ಕವಿತ,ಕಲ್ಪನ,ಬೇಬಿಮಂತಾಜ್,ಪದ್ಮಜ,ಬಾರ್ಗವಿ.ರಾಧಿಕಾ, ವೈ.ಎಂ.ಮಂಜುನಾಥ್, ನರಸಿಂಹ ಮೂರ್ತಿ, ರಿಯಾಜ್,ಶ್ರೀಲೇಖ,ಗಣೇಶ್, ಹರ್ಷಿಯಾ,ಮುನಿಲಕ್ಷ್ಮಿ.ರಜನಿ ಹಾಗೂ ಶಾಲಾ ಮಕ್ಕಳು ಹಾಜರಿದ್ದರು..