ಪೊಲೀಸರಿಗೆ ಹೊಸ ಅಪರಾಧ ಕಾನೂನುಗಳ ತರಬೇತಿ ಕಾರ್ಯಗಾರ

ಪೊಲೀಸರಿಗೆ ಹೊಸ ಅಪರಾಧ ಕಾನೂನುಗಳ ತರಬೇತಿ ಕಾರ್ಯಗಾರ

ಕೆಜಿಎಫ್ ಜಿಲ್ಲಾ ಪೊಲೀಸ್ ಮತ್ತು ಕೆಂಗಲ್ ಹನುಮಂತಯ್ಯ ಕಾನೂನು ಕಾಲೇಜು ಸಹಯೋಗದೊಂದಿಗೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಹೊಸ ಅಪರಾಧಗಳ ಕಾನೂನುಗಳ ಬಗ್ಗೆ ತರಬೇತಿ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. ಕೆಜಿಎಫ್ ಘಟಕದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಡಾ. ತಿಮ್ಮಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಕಾರದಲ್ಲಿ ಮಾನ್ಯ 3ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರು ಶ್ರೀ ಗಣಪತಿ ಗುರುಸಿದ್ಧ ಬಾದಾಮಿ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಗಾರವನ್ನು ಉದ್ಘಾಟಿಸಿ. ಹೊಸ ಅಪರಾಧ ಕಾನೂನುಗಳ ಬಗ್ಗೆ ತರಬೇತಿಯನ್ನು ನೀಡಿರುತ್ತಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು. ರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಹೊಸ  ಅಪರಾಧ ಕಾನೂನುಗಳ ಬಗ್ಗೆ ವಿವರಿಸಿ. ಜುಲೈ 1ರಿಂದ ಹೊಸ ಕಾನೂನುಗಳನ್ನು ಅಳವಡಿಸಿಕೊಳ್ಳಲು ಈ ತರಬೇತಿಯ ಅಗತ್ಯತೆ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಕೆಜಿಎಫ್ ನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಧಾನ ದರ್ಜೆ ನ್ಯಾಯ ದಂಡಾಧಿಕಾರಿಗಳಾದ ಮುಜಾಫರ್ ಏ ಮಂಜರಿ. ಪ್ರಥಮ ಸಿವಿಲ್ ಮತ್ತು ಅಧಿಕ ಜೆ ಎಂ ಎಫ್ ಸಿ ನ್ಯಾಯಾಧೀಶರಾದ ವಿನೋದ್ ಕುಮಾರ್.ಎಂ ಮತ್ತು ಕೆಂಗಲ ಹನುಮಂತಯ್ಯ ಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ ಮ್ಯಾಥ್ಯೂಸ್ ರವರು ಭಾಗವಹಿಸಿ ಹೊಸ ಅಪರಾಧ ಕಾನೂನಿನ ಬಗ್ಗೆ ಅರಿವು ಮೂಡಿಸಿರುತ್ತಾರೆ. ಪೊಲೀಸ್ ಉಪಾದೀಕ್ಷಕರಾದ ಪಾಂಡುರಂಗ. ಸರ್ಕಲ್ ಇನ್ಸ್ಪೆಕ್ಟರ್ ಪುರುಷೋತ್ತಮ್. ನಂಜಪ್ಪ ಪ್ರಶಾಂತ್. ಟಿ.ಟಿ.ಕೃಷ್ಣ. ಲಕ್ಷ್ಮಿನಾರಾಯಣ. ನವೀನ್ ಮತ್ತು ಜಿಲ್ಲೆಯ ಎಲ್ಲಾ ಪಿಎಸ್ಐ ಗಳು ಸಿಬ್ಬಂದಿಗಳು ತರಬೇತಿ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು. 120 ಅಧಿಕಾರಿ ಮತ್ತು ಸಿಬ್ಬಂದಿಯವರು ಅಪರಾಧ ಕಾನೂನುಗಳ ಬಗ್ಗೆ ತರಬೇತಿ ಪಡೆದುಕೊಂಡಿರುತ್ತಾರೆ.