ಬಂಡಿದಾರಿ ಒತ್ತುವರಿ ತೆರುವು ಗೊಳಿಸದೇ ಇದ್ದಲ್ಲಿ ಟ್ರ್ಯಾಕ್ಟರ್ ಮೂಲಕ ರ್ಯಾಲಿ ಮಾಡುತ್ತೇವೆ: ಕೆ.ನಾರಾಯಣ್ ಗೌಡ 

ಬಂಡಿದಾರಿ ಒತ್ತುವರಿ ತೆರುವು ಗೊಳಿಸದೇ ಇದ್ದಲ್ಲಿ ಟ್ರ್ಯಾಕ್ಟರ್ ಮೂಲಕ ರ್ಯಾಲಿ ಮಾಡುತ್ತೇವೆ: ಕೆ.ನಾರಾಯಣ್ ಗೌಡ 

ಬೇತಮಂಗಲ: 1 ವರ್ಷದಿಂದ ಕೊಟ್ಟ ಮಾತನ್ನು ಉಳಿಸಿಕೊಳ್ಳದ ತಾಲ್ಲೂಕಾಡಳಿತ  ರಸ್ತೆ ತೆರೆವು ಮಾಡಿಕೊಡಿ ಇಲ್ಲವೇ ಕಾನೂನು ಕೈಗೆ ಎತ್ತಿ ಕೊಳ್ಳಲು ಪರಿಹಾರ ಕೊಡಿನಷ್ಟವಾಗಿರುವ ಬೆಳೆ ಪರಿಹಾರ ಅಧಿಕಾರಿಗಳ ಸಂಬಳದಲ್ಲಿ ಕಡಿತ ಮಾಡಿಕೊಡಿ ಇಲ್ಲವಾದರೆ ಕಡೆಯದಾಗಿ ರೈತರಿಗೆ ಅಧಿಕಾರಿಗಳು ವಿಷ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ರೈತ ಸಂಘ ಹಾಗೂ ನೊಂದ ರೈತರಿಂದ ಒತ್ತುವರಿ ರಸ್ತೆ ಮುಂದೆ ಹೋರಾಟ ಮಾಡಿ ತಾಲ್ಲೂಕಾಡಳಿತಕ್ಕೆ ಮನವಿ ನೀಡಿ ಒತ್ತಾಯಿಸಲಾಯಿತು.


ಜುಲೈ 15ನೇ ತಾರೀಖಿನೊಳಗೆ ಬಂಡಿ ದಾರಿ ಸಮಸ್ಯೆ ಬಗೆಹರಿಸದೇ ಇದ್ದರೆ ನೂರಾರು ಟ್ರಾಕ್ಟರ್ ಗಳ ಸಮೇತ ಬೇತಮಂಗಲ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಯಿಂದ ಒತ್ತುವರಿ ಬಂಡಿ ದಾರಿವರೆಗೆ ರ್ಯಾಲಿ ಮಾಡಿ ಕಾನೂನು ಕೈಗೆತ್ತಿಕೊಂಡು ರೈತರೇ ಕಾಂಪೌಂಡ್ ತೆರವುಗೊಳಿಸುವ ಎಚ್ಚರಿಕೆಯನ್ನು ತಾಲೂಕು ಆಡಳಿತಕ್ಕೆ ನೊಂದ ರೈತರು ನೀಡಿದರು.


ಒಂದು ವಾರದೊಳಗೆ ಸರ್ವರೆಡ್ಡಿಹಳ್ಳಿ ಸ.ನಂ. 46 ರಲ್ಲಿ ಒತ್ತುವರಿಯಾಗಿರುವ 8 ಅಡಿ ಬಂಡಿ ದಾರಿಯನ್ನು ಕಾನೂನಿನ ಪ್ರಕಾರ  ತೆರವುಗೊಳಿಸುತ್ತೇವೆಂದು ಕೊಟ್ಟ ಮಾತನ್ನು ಉಳಿಸಿಕೊಳ್ಳದ ತಾಲ್ಲೂಕಾಡಳಿತದ ರೈತ ವಿರೋದಿ ದೋರಣೆಯನ್ನು ಖಂಡಿಸುತ್ತೇವೆ.

ರಸ್ತೆ  ಮಾಡಲು ನೂರೊಂದು ಕಾನೂನು ಇದ್ದರೂ ಒತ್ತುವರಿದಾರರ ಜೊತೆ ಅಧಿಕಾರಿಗಳು ಶಾಮೀಲಾದಂತೆ ಕಾಣುತ್ತಿದೆ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆ  ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ದಂಡಾಧಿಕಾರಿಗಳು ಕಂದಾಯ ಸರ್ವೆ ಪೊಲೀಸ್ ಇಲಾಖೆ, ಒತ್ತುವರಿ ಜಾಗಕ್ಕೆ ಬೇಟಿ ನಿಡಿ ಸಮಸ್ಯೆಯನ್ನು ಬಗೆ ಹರಿಸುತ್ತೇವೆಂದು ಭರವಸೆ ನೀಡಿ, ವರ್ಷ ಕಳೆದರೂ ಇದುವರೆವಿಗೂ ಕನಿಷ್ಠ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ವಿಫಲವಾಗಿರುವ ತಾಲ್ಲೂಕು  ಆಡಳಿತದ ರೈತ ವಿರೋಧಿ ದೋರಣೆಯ ಜೊತೆಗೆ ಸರ್ಕಾರದ ಬಂಡಿ ದಾರಿ ತೆರವು ಆದೇಶವನ್ನು ಉಲ್ಲಂಘನೆ ಮಾಡಿ ಒತ್ತುವರಿದಾರರ ಜೊತೆ ಶಾಮೀಲಾಗಿರುವ ಅಧಿಕಾರಿಗಳಿಗೆ ಬಿಸಿ
ಮುಟ್ಟಿಸುವ ಮುಖಾಂತರ ರೈತರ ತಾಳ್ಮೆಯನ್ನು ಕೆಣಕುತ್ತಿರುವ ಅಧಿಕಾರಿಗಳಿಗೆ ರೈತರ ತಾಕತ್ತು ತೋರಿಸುವ ಜೊತೆಗೆ ಬಂಡಿ ದಾರಿಯನ್ನು ರೈತರೇ ತೆರವುಗೊಳಿಸುವ ನಿರ್ದಾರವನ್ನು ಕೈಗೊಳ್ಳುತ್ತೆವೆ ಆಗ ಆಗುವ ಕಾನೂನು ಅವ್ಯವಸ್ಥೆಗೆ ತಾಲ್ಲೂಕಾಡಳಿತವೇ ಕಾರಣವಲ್ಲವೇ ಎಂದು ಪ್ರಶ್ನೆ ಮಾಡಿದರು.


ಅಧಿಕಾರಿಗಳು ಸಹ ರೈತರ ಸಮಸ್ಯೆಗಳಿಗೆ ಸ್ಪಂಧಿಸಬೇಕಾದ ಜವಾಬ್ದಾರಿಯು ಇದೆ. 10 ವರ್ಷಗಳಿಂದ ಹತ್ತಾರು ರೈತರು ಸ.ನಂ. 46 ರ ಮಾಲೀಕರು ಒತ್ತುವರಿ ಮಾಡಿಕೊಂಡು, 8 ಅಡಿ ಬಂಡಿ ರಸ್ತೆ ಇಲ್ಲದೆ, ಕಷ್ಟಾಪಟ್ಟು ಬೆಳೆದಂತಹ ಬೆಳೆ ಮರದಲ್ಲಿಯೇ ಉದುರುವ ಜೊತೆಗೆ ಹಸು ಕರುಗಳನ್ನು ಹೊರಗಡೆ ತರುವಂತಿಲ್ಲ. ಜಮೀನಿಗೆ ಹೋಗುವಂತಿಲ್ಲ. ನಮ್ಮ ಪರಿಸ್ಥಿತಿ ಕೇಳುವ ಅಧಿಕಾರಿಗಳು ಇದ್ದು ಇಲ್ಲದಂತಾಗಿದ್ದಾರೆ ಎಂದು ಆರೋಪ ಮಾಡಿದರು.ನೊಂದ ರೈತ ಕುಮಾರ್, ಕೃಷ್ನಾರೆಡ್ಡಿ ಮಾತನಾಡಿ ಮಾವಿಗೆ ಉತ್ತಮ ಬೆಲೆ ಇದ್ದರೂ ರಸ್ತೆ ಇಲ್ಲದ ಕಾರಣ ತೋಟದಲ್ಲಿಯೇ ಉದುರಿ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದ್ದರು ರೈತರ ಕಣ್ಣೀರು ಅಧಿಕಾರಿಗಳಿಗೆ ತಮಾಷೆಯ ವಿಚಾರವಾಗಿದೆ ಎಂದು ಅಸಮಾದಾನ ವ್ಯಕ್ತಪಡಿಸಿದರು.


ರೈತರು ಬರಗಾಲದಲ್ಲಿ ಲಕ್ಷಾಂತರ ರೂಪಾಯಿ ಖಾಸಗಿ ಸಾಲ ಮಾಡಿ ಬೆಳೆದ ಬೆಳೆ ಮಾರುಕಟ್ಟೆಗೆ ಸಾಗಾಣಿಕೆ ಮಾಡಲು ರಸ್ತೆ ಇಲ್ಲದೆ ಕಣ್ಣು ಮುಂದೆಯೇ ಬೆಳೆ ನಷ್ಟವಾದರೆ ರೈತ ಪರ ನಿಲ್ಲಬೇಕಾದ ಅಧಿಕಾರಿಗಳು ಒತ್ತುವರಿದಾರರ ಪರವಾಗಿ ನಿಲ್ಲುವುದು ಯಾವ ನ್ಯಾಯ ಎಂದು ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದರು. ಕೃಷಿ ಭೂಮಿಗೆ ರಸ್ತೆ ಇಲ್ಲದೆ ನೂರಾರು ರೈತ ಕುಟುಂಬಗಳು ಬದುಕಿಗಾಗಿ ಕೂಲಿ ಮಾಡಲು ತನ್ನ ಭೂಮಿ ಮತ್ತು ಊರನ್ನು ಬಿಟ್ಟು ಬೆಂಗಳೂರಿಗೆ ಕಾರ್ಖಾನೆಗಳ ಬಳಿ ಕಾವಲು ಕಾಯುವ ಕೆಲಸಕ್ಕೆ ಹೋಗುವ ಪರಿಸ್ಥಿತಿ ಇದ್ದರೂ, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೇಕೆ ಎಂದು ಕಿಡಿ ಕಾರಿದರು. 


ಒಂದು ವಾರದೊಳಗೆ ಕಾನೂನಿನ ಪ್ರಕಾರ ರೈತರ ಉತ್ಪನ್ನಗಳು ಮತ್ತು ಕೃಷಿ ಭೂಮಿಗೆ ಸಮಸ್ಯೆಯಾಗದಂತೆ ಅವಶ್ಯಕತೆ ಇರುವ ಕಡೆ ರಸ್ತೆಯನ್ನು ಅಭಿವೃದ್ದಿ ಪಡಿಸಬೇಕು. ಆದರೆ  ಸರ್ವರೆಡ್ಡಿಹಳ್ಳಿ ಬಂಡಿದಾರಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಇಚ್ಚಾಶಕ್ತಿ ಕೊರತೆ ಇದ್ದು, ಕೊಟ್ಟ ಮಾತನ್ನು ಉಳಿಸಿಕೊಳ್ಳದ ತಾಲ್ಲೂಕಾಡಳಿತದ ರೈತ ವಿರೋದಿ ದೋರಣೆ ಏಕೆ ? ರಸ್ತೆ ಕೊಡಿ ಇಲ್ಲವೇ ಕಾನೂನು ಕೈಗೆ ಎತ್ತಿ ಕೊಳ್ಳಲು ಪರಿಹಾರ ಕೊಡಿ ನಷ್ಟವಾಗಿರುವ ಬೆಳೆ ಪರಿಹಾರ ಅಧಿಕಾರಿಗಳ ಸಂಬಳದಲ್ಲಿ ಕಡಿತ ಮಾಡಿಕೊಡಿ ಇಲ್ಲವಾದರೆ ಕಡೆಯದಾಗಿ ರೈತರಿಗೆ ಅಧಿಕಾರಿಗಳು ವಿಷ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ  ಎಂದು ಮನವಿ ನೀಡಿ ಒತ್ತಾಯಿಸಿದರು.


ಮನವಿ ಸ್ವೀಕರಿಸಿ ಮಾತನಾಡಿದ ಕಂದಾಯ ಅಧಿಕಾರಿಗಳು ರಸ್ತೆ ಸಮಸ್ಯೆಯನ್ನು ಗಂಬೀರವಾಗಿ ಪರಿಗಣಿಸುತ್ತೇವೆ. ಒಂದು ವಾರ ಕಾಲವಕಾಶ ಕೊಡಿ ಸಮಸ್ಯೆ ಬಗೆಹರಿಸದೆ ಇದ್ದರೆ ರಸ್ತೆ ನೀವೇ ತೆರೆವುಗೊಳಿಸಿಕೊಳ್ಳಿ ಕಂದಾಯ ಅಧಿಕಾರಿಗಳು ನಿಮಗೆ ಸಂಪೂರ್ಣ ಬೆಂಬಲ ನೀಡುತ್ತೇವೆಂದು ಭರವಸೆ ನೀಡಿದರು.


ಹೋರಾಟದಲ್ಲಿ ಮರಗಲ್ ಶ್ರೀನಿವಾಸ್ ರಾಮಸಾಗರ ವೇಣು, ಸುರೇಶ್‍ಬಾಬು, ಸುಪ್ರಿಂ ಚಲ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಯಾರಂಘಟ್ಟ ಗಿರೀಶ್, ಮಂಗಸಂದ್ರ ತಿಮ್ಮಣ್ಣ,ಪ್ರಭಾಕರ್,ಕೇಶವ, ನವೀನ್ ರಾಮಚಂದ್ರರೆಡ್ಡಿ, ಹೇಮಾರೆಡ್ಡಿ, ಸುರೇಶ್, ಯಲ್ಲಣ್ಣ, ಹರೀಶ್, ಹನುಮಯ್ಯ, ಆನಂದ್‍ರೆಡ್ಡಿ  ಮುಂತಾದ ರೈತರು ಭಾಗವಹಿಸಿದರು.