ಬಂಡೂರು ಗ್ರಾ.ಪಂ ಮುಂದೆ ಪಿಡಿಒ ವಿರುದ್ದ ಕೃಷಿ ಕೂಲಿಕಾರ ಸಂಘದಿಂದ ಪ್ರತಿಭಟನೆ
ಮಳವಳ್ಳಿ:ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ, ಕೂಲಿ ಮತ್ತು ನಾಮಫಲಕ ಹಣ ನೀಡುವಲ್ಲಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧೋರಣೆಯನ್ನು ಖಂಡಿಸಿ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಹಾಗೂ ಕೂಲಿಕಾರು ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಶಿವಮಲ್ಲು ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪಿಡಿಒ ವಿರುದ್ದ ಘೋಷಣೆ ಕೂಗಿದರು.ಇದೇ ವೇಳೆ ಸಿಪಿಐ(ಎಂ) ಜಿಲ್ಲಾ ಮುಖಂಡ ಕೃಷ್ಣೇಗೌಡ ಮಾತನಾಡಿ, ಕೂಲಿಕಾರರನ್ನು ಎದುರು ಹಾಕಿಕೊಂಡರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಪಿಡಿಒ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ಕೂಲಿಕಾರರಿಂದ ನಿಮಗೆ ಸಂಬಳ ಬರುತ್ತಿದೆ. ಅನ್ನುವುದನ್ನು ಮರೆಯಬಾರದುಎಂದರು. ಕೂಡಲೇ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಬೇಕು ಕೂಲಿ ಮತ್ತು ನಾಮಫಲಕದ ಹಣ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದೀರಿ, ಇದಲ್ಲದೆ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಜೊತೆಗೆ ಗ್ರಾಮಗಳ ನೈರ್ಮಲ್ಯ ಹಾಗೂ ಕೆಟ್ಟು ನಿಂತಿರುವ ಶುದ್ದ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿಗೊಳಿಸಲು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ತಳಗವಾದಿ ವಲಯ ಸಮಿತಿ ಅಧ್ಯಕ್ಷ ರಾಮಯ್ಯ, ಸಿಪಿಐ(ಎಂ) ಪಕ್ಷದ ಜಿಲ್ಲಾಮುಖಂಡ ಕೃಷ್ಣೇಗೌಡ, ಮಂಜುಳಾ, ಬಸವರಾಜು, ಶಿವಕುಮಾರ ಸೇರಿದಂತೆ ಹಲವರು ಇದ್ದರು.