ಬಣ್ಣದ ಪ್ರತಿ ಡಬ್ಬಿ 

ಬಣ್ಣದ ಪ್ರತಿ ಡಬ್ಬಿ 

ಬಣ್ಣದ ಪ್ರತಿ ಡಬ್ಬಿ 

 ಡಬ್ಬಿ ಡಬ್ಬಿ ಬಣ್ಣದ ಡಬ್ಬಿ 
 ನೋಡ ಬನ್ನಿ ಬಣ್ಣದ ಪ್ರತಿ ಡಬ್ಬಿ
 ಆಡಲು ಚಂದ ನೋಡಲು ಅಂದ 
 ಕೈಯಲಿ ಹಿಡಿದು ನೋಡೋಕೆ ಚಂದ  ......

ಹಲವು ಬಣ್ಣವು ಇಲ್ಲಿಹುದು 
 ಎಣಿಸಿ ನೋಡುವುದು 
 ಅದುವೇ ನಮ್ಮದದು 
ದಿನದ  ಹವ್ಯಾಸವಾಗಿಹುದು....

 ಎಲ್ಲರ ಮನವ ಸೆಳೆಯುವುದು 
 ಆಡುವ ಮನಸ್ಸ ಮಾಡುವುದು 
 ಕುಣಿಯುತ ನಲಿಯುತ ಆಡುವುದು 
 ನಮ್ಮೆಲ್ಲರ ದಿನದ ಕೆಲಸವದು.....

 ಎಲ್ಲರ ಡಬ್ಬಿ ತಾ ಅಲ್ಲಿ 
 ಎಣಿಸುವ ನಾವು ಬಾಯಲ್ಲಿ 
 ಚಂದದ ಡಬ್ಬಿ, ಬಣ್ಣದ ಡಬ್ಬಿ 
 ನಮ್ಮಯ ಬಣ್ಣದ ಪ್ರತಿ ಡಬ್ಬಿ..... 

ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್.. 
ಸಾಮಾಜಿಕ ಚಿಂತಕಿ. ಶಿಕ್ಷಕಿ. ಹಾಸನ.