ಬೆಳೆಗಳ ಲಾಭದಾಯಕ ದೃಷ್ಟಿಯಿಂದ ವಿಷಕಾರಿಯಾಗಿಸಬೇಡಿ-ಜಂಟಿ ಕೃಷಿ ನಿರ್ದೇಶಕಿ ಜಾವೀದ್ ನಸೀಮಾ ಖಾನಂ ಸಲಹೆ

ಬೆಳೆಗಳ ಲಾಭದಾಯಕ ದೃಷ್ಟಿಯಿಂದ ವಿಷಕಾರಿಯಾಗಿಸಬೇಡಿ-ಜಂಟಿ ಕೃಷಿ ನಿರ್ದೇಶಕಿ ಜಾವೀದ್ ನಸೀಮಾ ಖಾನಂ ಸಲಹೆ

ಬಾಗೇಪಲ್ಲಿ: ಇತ್ತೀಚೆಗೆ ರೈತರು ಹೆಚ್ಚು ಲಾಭಗಳಿಸುವ ನಿಟ್ಟಿನಲ್ಲಿ ಕೃಷಿ ಬೆಳೆಗಳಿಗೆ ಹೆಚ್ಚು ರಾಸಾಯನಿಕ ಔಷಧಗಳ ಬಳಕೆಯಿಂದ ಬೆಳೆಗಳನ್ನು ವಿಷಮಯ ಮಾಡಬೇಡಿ ಎಂದು ಜಂಟಿ ಕೃಷಿ ನಿರ್ದೇಶಕ ಜಾವಿದ್ ನಸೀಮಾ ಖಾನಂ ರವರು ಸಲಹೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಸಸ್ಯ ಸಂರಕ್ಷಣಾ ಔಷದಗಳ ಶಿಫಾರಸ್ಸು ಮತ್ತು ಸುರಕ್ಷಿತ ಪೀಡೆನಾಶಗಳ ಬಳಕೆಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇತ್ತೀಚೆಗೆ ರೈತರು ಟೊಮ್ಯಾಟೋದಂತಹ ತರಕಾರಿ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳಿಗೆ ಹೆಚ್ಚು ಲಾಭಾಂಶವನ್ನೇ ಗುರಿಯಾಗಿಟ್ಟುಕೊಂಡು ಅತಿ ವಿಷಕಾರಿಕ ಕ್ರಿಮಿನಾಶಕ ಮತ್ತು ಪೀಡೆನಾಶಕಗಳ ಬಳಸುತ್ತಿದ್ದಾರೆ.

ಇದರಿಂದಾಗಿ ಭೂಮಿ ಸೇರಿದಂತೆ ಆ ಬೆಳೆಯ ಸಂಪೂರ್ಣ ವಿಷಮಯವಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟು ಮಾಡುತ್ತದೆ. ಹಾಗಾಗಿ ಅಂತಹ ಅಪಾಯಕಾರಿ ವಿಷಕಾರಿಕ ಕ್ರಿಮಿ ಮತ್ತು ಕೀಟನಾಶಕಗಳನ್ನು ಹೆಚ್ಚಾಗಿ ಬಳಸದೆ ಸಾವಯವ ರೀತಿಯಲ್ಲಿ ಬೆಳೆಗಳ ಸಂರಕ್ಷಣೆಗೆ ರೈತರು ಮುಂದಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿ ವಿಜ್ಞಾನಿಗಳಾದ ಮಂಜುನಾಥರೆಡ್ಡಿ, ಅಶ್ವತ್ಥನಾರಾಯಣರೆಡ್ಡಿ, ಉಪ ಸಹಾಯಕ ಕೃಷಿ ನಿರ್ದೇಶಕಿ ಮಂಜುಳ, ಸಹಾಯಕ ಕೃಷಿ ನಿರ್ದೇಶಕಿ ಲಕ್ಷ್ಮೀ, ಜಾಗೃತದಳದ ನಿರ್ದೇಶಕ ಪ್ರಮೋದ್, ಕೃಷಿ ಅಧಿಕಾರಿಗಳಾದ ಶ್ರೀನಿವಾಸ್, ಶಂಕರಯ್ಯ, ಗಂಗಾಧರರೆಡ್ಡಿ, ಸಹಾಯಕ ತೋಟಗಾರಿಕಾ ನಿರ್ದೇಶಕ ಶಿವಶಂಕರ್ ಸೇರಿದಂತೆ ಇತರರು ಇದ್ದರು...