ಭಜನ,ಪ್ರವಚನ,ಸಂಕೀರ್ತನ

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ರಾಜಾಜಿನಗರದ ಬಾಲಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಜೂನ್ 4 ರಿಂದ 7ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ:ಭಜನಾ ಕಾರ್ಯಕ್ರಮ: (ಪ್ರತಿದಿನ ಸಂಜೆ 6 ರಿಂದ 7), ಜೂನ್ 4 :ಶ್ರೀ ವಾಸವಿ ಮಹಿಳಾ ಮಂಡಲಿ, ಜೂನ್ 5 :ಆರ್ಯವೈಶ್ಯ ಮಹಿಳಾ ಮಂಡಲಿ, ಜೂನ್ 6:ಆರ್ಯಪುತ್ರಿ ಮಹಿಳಾ ಮಂಡಲಿ.ಪ್ರವಚನ ಕಾರ್ಯಕ್ರಮ :(ಪ್ರತಿದಿನ ಸಂಜೆ 7 ರಿಂದ 8). ಪ್ರವಚನಕಾರರು:ಮ||ಶಾ|| ಸಂ|| ಶ್ರೀ ರಾಮವಿಠಲಾಚಾರ್. ವಿಷಯ: "ಶ್ರೀಮದ್ಭಾಗವತ" ಜೂನ್ 7, ಶುಕ್ರವಾರ : (ಸಂಜೆ 6-30 ರಿಂದ 8-00) "ಹರಿನಾಮ ಸಂಕೀರ್ತನೆ": ಗಾಯನ : ಕು|| ಸಿ.ಆರ್.ವೈಷ್ಣವಿ, ಪಿಟೀಲು : ಶ್ರೀ ಅಭಯ್ ಸಂಪಿಗೆತಯ ಮೃದಂಗ : ಶ್ರೀ ಜಿ.ಲೋಕಪ್ರಿಯ. ಕಾರ್ಯಕ್ರಮ ನಡೆಯುವ ಸ್ಥಳ :ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನ, 10ನೇ ಮುಖ್ಯರಸ್ತೆ, ಡಿ ಬ್ಲಾಕ್, 2ನೇ ಹಂತ, ರಾಜಾಜಿನಗರ, ಬೆಂಗಳೂರು-560010 ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ.ಸಂಚಾಲಕರಾದ ಡಾ|| ಪಿ.ಭುಜಂಗರಾವ್ ಅವರು ವಿನಂತಿಸಿದ್ದಾರೆ.