ಭಜನ - ಪ್ರವಚನ - ಸಂಕೀರ್ತನ

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಜಯನಗರ 5ನೇ ಬಡಾವಣೆ ಇವುಗಳ ಸಂಯುಕ್ತಾಶ್ರಯದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ ಹಾಗೂ ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ಅವರ ನೇತೃತ್ವದಲ್ಲಿ ಫೆಬ್ರವರಿ 4 ರಿಂದ 7ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :
ಫೆಬ್ರವರಿ 4, ಮಂಗಳವಾರ : ಸಂಜೆ 5-30ಕ್ಕೆ ಬನಶಂಕರಿಯ ದೇವಗಿರಿ ಲಕ್ಷ್ಮೀಕಾಂತ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7-00ಕ್ಕೆ ಶ್ರೀ ಮಾದನೂರು ಪವಮಾನಾಚಾರ್ಯರಿಂದ "ಶ್ರೀ ಮಧ್ವಾಚಾರ್ಯರ ಮಹಿಮೆ" ಧಾರ್ಮಿಕ ಪ್ರವಚನ.ಫೆಬ್ರವರಿ 5, ಬುಧವಾರ : ಸಂಜೆ 5-30ಕ್ಕೆ ರಾಜರಾಜೇಶ್ವರಿನಗರ ಅಲಕನಂದ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7-00ಕ್ಕೆ ಶ್ರೀ ಮಾದನೂರು ಪವಮಾನಾಚಾರ್ಯರಿಂದ "ಶ್ರೀ ಮಧ್ವಾಚಾರ್ಯರ ಮಹಿಮೆ" ಧಾರ್ಮಿಕ ಪ್ರವಚನ.ಫೆಬ್ರವರಿ 6, ಗುರುವಾರ ಸಂಜೆ 5-30ಕ್ಕೆ "ಹರಿನಾಮ ಸಂಕೀರ್ತನೆ". ಗಾಯನ : ಶ್ರೀಮತಿ ಸುಷ್ಮಾ ಶ್ರೇಯಸ್, ಕೀ-ಬೋರ್ಡ್ : ಶ್ರೀ ಟಿ.ಎಸ್. ರಮೇಶ್, ತಬಲಾ : ಶ್ರೀ ಶ್ರೀನಿವಾಸ ಕಾಖಂಡಕಿ.ಫೆಬ್ರವರಿ 7, ಶುಕ್ರವಾರ : ಸಂಜೆ 5-30ಕ್ಕೆ ಜೆ.ಪಿ.ನಗರದ ಅಕ್ಷಯ ವಿಪ್ರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7-00ಕ್ಕೆ ಶ್ರೀ ಮಾದನೂರು ಪವಮಾನಾಚಾರ್ಯರಿಂದ "ಶ್ರೀ ಮಧ್ವಾಚಾರ್ಯರ ಮಹಿಮೆ" ಧಾರ್ಮಿಕ ಪ್ರವಚನ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ನಂದಕಿಶೋರ್ ಆಚಾರ್ ತಿಳಿಸಿದ್ದಾರೆ. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು-41.