ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬಾಲಸಂಗಮ ಅತ್ಯಗತ್ಯ-ಗ್ರಾಮವಿಕಾಸ ಚಿಕ್ಕಬಳ್ಳಾಪುರ ಜಿಲ್ಲಾ ಸಂಯೋಜಕ ಮುನಿರಾಜು

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬಾಲಸಂಗಮ ಅತ್ಯಗತ್ಯ-ಗ್ರಾಮವಿಕಾಸ ಚಿಕ್ಕಬಳ್ಳಾಪುರ ಜಿಲ್ಲಾ ಸಂಯೋಜಕ ಮುನಿರಾಜು

ಬಾಗೇಪಲ್ಲಿ: ಲೋಕ ಸೇವಾ ಪ್ರತಿಷ್ಠಾನ ಗ್ರಾಮವಿಕಾಸ ಬಾಗೇಪಲ್ಲಿ ತಾಲೂಕು ಕನಗಮಾಕಲಹಳ್ಳಿ ವಿಕಾಸ ಕೇಂದ್ರದ ಕಲಿಕಾ ಕೇಂದ್ರದ ಶಾಲಾ ಮಕ್ಕಳಿಗೆ ಸರ್ಕಾರಿ ಪ್ರೌಢಶಾಲೆಯಲ್ಲಿ ಬಾಲಸಂಗಮ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಗ್ರಾಮವಿಕಾಸ ಚಿಕ್ಕಬಳ್ಳಾಪುರ ಜಿಲ್ಲಾ  ಸಂಯೋಜಕ ಮುನಿರಾಜ ಮಾತನಾಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಈ ಈ ರೀತಿಯ ಬಾಲಸಂಗಮ ಕಾರ್ಯಕ್ರಮಗಳು ತುಂಬಾ ಅವಶ್ಯಕತೆ ಇದೆ ಕಲಿಕಾ ಕೇಂದ್ರದಲ್ಲಿ ಮಕ್ಕಳಿಗೆ ಮೌಲ್ಯ ಆಧಾರಿತ ಶಿಕ್ಷಣ ಮತ್ತು ಸಂಸ್ಕಾರವನ್ನ ನೀಡಲಾಗುತ್ತದೆ. ಕಳೆದ 9 ವರ್ಷಗಳಿಂದ ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ ,ಸ್ವಲಂಬನೆ ಕ್ಷೇತ್ರ, ಪರಿಸರ ಕ್ಷೇತ್ರ ಗಳಲ್ಲಿ ಗ್ರಾಮ ವಿಕಾಸ ಗ್ರಾಮಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ. ಗ್ರಾಮ ವಿಕಾಸದ ಮೂಲ ಉದ್ದೇಶ ಗ್ರಾಮೀಣ ಕಳೆಗಳನ್ನ ಅಭಿವೃದ್ಧಿಸುವುದು ಮಕ್ಕಳಿರುವಂತ ಪ್ರತಿಭೆಗಳನ್ನು ಗುರುತಿಸಿ ಬೆಳಸುವುದು. ಮುಖ್ಯವಾಗಿ ಮೌಲ್ಯದ ಶಿಕ್ಷಣ ಮತ್ತು ಸಂಸ್ಕಾರ ನೀಡುವುದು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಸಂಯೋಜಕರು ಮುನಿರಾಜ ವೈ.ಪಿ ಅಕಾಡೆಮಿ ಅಧ್ಯಕ್ಷ ಯಶವಂತ್. ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೃಷ್ಣಕುಮಾರ್, ಸಹ ಶಿಕ್ಷಕ ಆದಿನಾರಾಯಣಪ್ಪ, ತಾಲೂಕು ಸಂಯೋಜಕರು ರಂಗಪ್ಪ ಪ್ರಾಂತ್ಯ ತೋಳಿ ಸದಸ್ಯ, ರಾಮಚಂದ್ರಪ್ಪ ವಿಕಾಸ ಕೇಂದ್ರ ಸಂಯೋಜಕ, ಅಂಜಿನಪ್ಪ ಕಲಿಕಾ ಕೇಂದ್ರದ ಪ್ರಮುಖರು ಕಲ್ಪನಾ ಭಾರ್ಗವಿ ಇತರರು ಉಪಸ್ಥಿತರಿದ್ದರು...