ಆನೇಕಲ್ ತಾಲೂಕು ರಾಗಿಹಳ್ಳಿ ಪಂಚಾಯತಿ ವ್ಯಾಪ್ತಿಯ ಮಯೂರಿ ವನಶ್ರೀ ಶಕ್ತಿ ಸಂಘಕ್ಕೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಲತಾ ಕುಮಾರಿ ಐಎಎಸ್ ರವರು ಕೃಷಿ ಜಮೀನಿನಲ್ಲಿ ಆರ್ಗನಿಕ್ ತರಕಾರಿಗಳನ್ನು ಬೆಳೆಯುವುದರ ಮೂಲಕ ತಮ್ಮ ಜೀವನವನ್ನು ನಡೆಸುತ್ತಿರುವ ಕಾಡಂಚಿನ ಗ್ರಾಮದ ಮಹಿಳೆಯರ ಸಹಾಯಕ್ಕೆ ನಿಂತು ಯಾವುದೇ ರಸಗೊಬ್ಬರಗಳಿಲ್ಲದೆ ರಾಗಿ ಜೋಳ ಗೋಧಿ ಬೆಳೆಗಳನ್ನು ನಿರ್ಮಿಸಿ ತಿಂಡಿ ತಿನಿಸುಗಳನ್ನ ತಯಾರಿಸುತ್ತಿರುವ ಮಹಿಳೆಯರ ಸಹಕಾರಕ್ಕೆ ನಿಂತು ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂಬ ಭರವಸೆಯನ್ನ ನೀಡಿದ್ದಾರೆ .
ಕಡಂಚಿದ ಗ್ರಾಮದ ಮಹಿಳೆಯರು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದ್ದು ಇದಲ್ಲದೆ ಯಾವುದೇ ರಾಸಾಯನಿಕಾಗಲಿಲ್ಲದೇ ಬೆಳೆಗಳನ್ನ ಬೆಳೆದು ತಿನಿಸುಗಳನ್ನ ಮಾಡಿ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ ಮಹಿಳೆಯರಿಗೆ ಸ್ವಹಾಲಂಬಿ ಜೀವನವನ್ನು ನಡೆಸಲು ಮಾದರಿಯಾಗಿದ್ದಾರೆ ಎಂದು ಶ್ರೀಮತಿ ಲತಾ ಕುಮಾರಿ ಐಎಎಸ್ ರವರು ತಿಳಿಸಿದರು
ರಾಗಿ ಗೋಧಿ ಜೋಳ ಬೆಳೆಗಳಿಂದ ಸಾಕಷ್ಟು ತಿಂಡಿ ತಿನಿಸುಗಳನ್ನ ನಾವು ತಯಾರಿ ಮಾಡುತ್ತಿದ್ದುಯಾವುದೇ ಅಧಿಕಾರಿಗಳು ಇಲ್ಲಿಯವರೆಗೆ ನಮ್ಮ ಬೆನ್ನೆಲುಬಗೆ ನಿಂತಿರಲಿಲ್ಲ ಆದರೆ ಜಿಲ್ಲಾ ಪಂಚಾಯಿತಿ ಅವರು ನಮ್ಮ ಸಹಾಯಕ್ಕೆ ನಿಲ್ಲುತ್ತೇವೆ ಎಂದು ಭರವಸೆ ನೀಡಿದ್ದಾರೆ ಆದ್ದರಿಂದ ನಮಗೆ ತುಂಬಾ ಖುಷಿಯಾಗಿದೆ ಎಂದು ವನಶ್ರೀ ಶ್ರೀ ಶಕ್ತಿ ಸಂಘದ ಮಹಿಳೆ ಗೀತಾ ರವರು ತಿಳಿಸಿದ್ದಾರೆ
ಇನ್ನು ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಆಡಳಿತ ಮಂಡಳಿ ರಾಗಿಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸೇರಿದಂತೆ ಅಧಿಕಾರಿ ವರ್ಗ ಸ್ವಸಹಾಯ ಸಂಘದ ಮಹಿಳೆಯರಿಗೆ ಸಹಕಾರ ನೀಡುತ್ತೇವೆ ಎಂದು ತಿಳಿಸಿದ್ದಾರೆ