ರಾಜ ಕಾಲುವೆ ಒತ್ತುವರಿ ತೆರವಿಗೆ ಒತ್ತಾಯ ಮಾಡಿದ ಸ್ಥಳೀಯ ನಿವಾಸಿ ದೇವರಾಜ್

ರಾಜ ಕಾಲುವೆ ಒತ್ತುವರಿ ತೆರವಿಗೆ ಒತ್ತಾಯ ಮಾಡಿದ ಸ್ಥಳೀಯ ನಿವಾಸಿ ದೇವರಾಜ್

ಚನ್ನರಾಯಪಟ್ಟಣ: ಪಟ್ಟಣದ ವಾರ್ಡ್ ನಂ.10ರ ಬಿ ಎಂ ರಸ್ತೆಗೆ ಹೊಂದಿಕೊಂಡಿರುವ ಪುಟ್ಟಬೋರಮ್ಮ ಕಲ್ಯಾಣ ಮಂಟಪದ ಬಳಿ ರಾಜಕಾಲುವೆ ಹಾಗೂ ಸರ್ಕಾರಿ ಜಾಗ ಒತ್ತುವರಿಯಾಗಿದ್ದು, ಮಳೆಯ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಕೂಡಲೇ  ಸಂಬಂಧಿಸಿದವರು ಗಮನಹರಿಸಿ ಕ್ರಮವಹಿಸಬೇಕು ಎಂದು ಸ್ಥಳೀಯ ನಿವಾಸಿ ದೇವರಾಜ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. ಚನ್ನರಾಯಪಟ್ಟಣ ಪುರಸಭೆ ವಾರ್ಡ್ ನಂ 10ರ ನಾಗಸಮುದ್ರ ವ್ಯಾಪ್ತಿಯ ಸರ್ವೇ ನಂ.32,33 ಹಾಗೂ 34ರಲ್ಲಿ ಹಾದು ಹೋಗಿರುವ ರಾಜಕಾಲುವೆ ಒತ್ತುವರಿಯಾಗಿದ್ದು, ಈ ಬಗ್ಗೆ 2015ರಿಂದಲೂ ನಾನು ಏಕಾಂಗಿ ಹೋರಾಟ ನಡೆಸುತ್ತಿದ್ದು, ಭೂಮಾಪನ ಇಲಾಖೆಗೆ ಹಲವಾರು ಬಾರಿ ಸಲ್ಲಿಸಿದರು ಇದುವರೆಗೂ ಯಾವೊಬ್ಬ ಅಧಿಕಾರಿಯುತ್ತ ಗಮನ ಹರಿಸುತ್ತಿಲ್ಲ ಎಂದರು, ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಈಗಾಗಲೇ ಸಾಕಷ್ಟು ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ ಯು ಜೋಡಿ ಚರಂಡಿ ವ್ಯವಸ್ಥೆ ಸರಿಯಾಗಿ  ನಿರ್ಮಾಣ ಮಾಡಿಲ್ಲ, ಈ ಬಗ್ಗೆ  ಪುರಸಭಾ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಲಾಗಿದೆ,ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಈಗಿನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರ ಗಮನಕ್ಕೆ ವಿಚಾರ ತರಲಾಗಿದ್ದು, ಇದರನ್ವಯ ತಹಸೀಲ್ದಾರ್‌ಗೆ ಒತ್ತುವರಿ ತೆರವಿಗೆ ಮುಂದಾಗುವಂತೆ ಆದೇಶ ನೀಡಿದ್ದಾರೆ. ಆದರೆ ಸರ್ವೇ ಇಲಾಖೆ ಸಿಬ್ಬಂದಿ ಸರ್ವೇ ಕಾರ್ಯಾಚರಣೆ ನಡೆಸುತ್ತಿಲ್ಲ ಎಂದು ಆರೋಪಿಸಿದರು.