ರಾಷ್ಟ್ರಮಟ್ಟದ ಭರತನಾಟ್ಯ ನೃತ್ಯ ಪ್ರದರ್ಶದಲ್ಲಿ ಅದ್ದೂರಿ ಪ್ರದರ್ಶನ ನೀಡಿದ ಶ್ವೇತಾಂಜಲಿ ಭರತನಾಟ್ಯ ಶಾಲೆ

ರಾಷ್ಟ್ರಮಟ್ಟದ ಭರತನಾಟ್ಯ ನೃತ್ಯ ಪ್ರದರ್ಶದಲ್ಲಿ ಅದ್ದೂರಿ ಪ್ರದರ್ಶನ ನೀಡಿದ ಶ್ವೇತಾಂಜಲಿ ಭರತನಾಟ್ಯ ಶಾಲೆ
ಚಿಕ್ಕಬಳ್ಳಾಪುರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಓಂ ಶ್ರೀ ಸಾಯಿ ಸೆಂಟರ್ ಫಾರ್ ಪಾರ್ಫಾಮಿಂಗ್ ಆರ್ಟ್ಸ ರವರು ಆಯೋಜಿಸಿದ್ದ ರಾಷ್ಟ್ರೀಯ ಅಖಿಲ ಭಾರತೀಯ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ವಿಶ್ವ ಪ್ರಸಿದ್ದಿ ಪಡೆದಿರುವ ಅನಿಕೇತನ, ಕನ್ನಡ ವೈಭವ, ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಶ್ವೇತನಾಗರಾಜ್ ಸಾರಥ್ಯದಲ್ಲಿನ "ಶ್ವೇತಾಂಜಲಿ ಭರತನಾಟ್ಯ ಶಾಲೆ" ಭಾಗವಹಿಸಿ ಅದ್ಬುತ ಪ್ರದರ್ಶನ ನೀಡುವ ಮೂಲಕ ಎಲ್ಲಾರ ಗಮನ ಸೆಳೆದು, ಅದ್ದೂರಿ ಪ್ರದರ್ಶನದ ಮೂಲಕ ಸೈ ಅನಿಸಿಕೊಂಡಿತು.
ಕಾರ್ಯಕ್ರಮದ ಬಗ್ಗೆ ಮಾತನಾಡಿದ ಶ್ವೇತಾಂಜಲಿ ಭರತನಾಟ್ಯ ಶಾಲೆ ಹಾಗೂ ವಿ.ಕೆ.ಎಫ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ರವರು ಮಾತನಾಡುತ್ತಾ "ರಾಷ್ಟ್ರೀಯ ಭರತನಾಟ್ಯ ನೃತ್ಯ ಪ್ರದರ್ಶನವನ್ನು ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಲಾಗಿತ್ತು. ಶ್ವೇತಾಂಜಲಿ ಭರತನಾಟ್ಯ ಶಾಲೆಯ ವಿಶ್ವ ಮಟ್ಟದ ಸಾಧನೆಯನ್ನು ಗುರ್ತಿಸಿ ಉತ್ತಮ ವೇದಿಕೆ ಕಲ್ಪಿಸಿಕೋಡುವ ಮೂಲಕ ನಮ್ಮ ಮಕ್ಕಳ ನೈಜ ಭರತನಾಟ್ಯ ಕಲೆಯನ್ನು ಅನಾವರಣ ಮಾಡುವ ಕೆಲಸವನ್ನು ಮಾಡಿದ ಅಯೋಜಕರಿಗೆ ಅಭಿನಂದನೆ ಅರ್ಪಿಸುತ್ತೇವೆ" ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ವೇತಾಂಜಲಿ ಭರತನಾಟ್ಯ ಶಾಲೆಯ ಪ್ರದಾನ ಕಾರ್ಯದರ್ಶಿ ಲಕ್ಕೂರು ಎಂ.ನಾಗರಾಜ್ ರವರು ಮಾತನಾಡುತ್ತಾ "ಭಾರತೀಯ ಭವ್ಯ ಪರಂಪರೆಯ ನಮ್ಮ ಸಂಸ್ಕ್ರತಿಯ ಮೂಲ ಭರತನಾಟ್ಯ ನೃತ್ಯ ಪ್ರದರ್ಶನವನ್ನು ರಾಷ್ಟ್ರೀಯ ಮಟ್ಟದಲ್ಲಿ ನೀಡುವ ಮೂಲಕ ಪೋಷಕರಿಗೆ, ಮಕ್ಕಳಿಗೆ ಹೆಚ್ಚು ಸಂತಸ ನೀಡಿದೆ. ಈ ರೀತಿಯ ಅದ್ಬುತ ಕಾರ್ಯಕ್ರಮಗಳನ್ನು ನಮ್ಮ ಶಾಲೆ ನಿತ್ಯ ನಿರಂತರವಾಗಿ ಮಾಡುತ್ತೇವೆ" ಎಂದರು.
ಕಾರ್ಯಕ್ರಮದಲ್ಲಿ ಸೋಲೋ ನೃತ್ಯವನ್ನು ತಾನೀಶ್.ಎನ್, ಪ್ರಕೃತಿ, ಸಾನ್ವಿ, ಜಾನವಿ ಪಿ ರೆಡ್ಡಿ, ರಚನಾ, ರಿಷ, ಹರಿಸ್ಮಿತ ಮಾಡಿದರು. ಗುಂಪು ನೃತ್ಯವನ್ನು ತಾನೀಶ್.ಎನ್, ಜಾನವಿ ಪಿ ರೆಡ್ಡಿ, ದನೀಕ್ಷಾ, ನಿಸರ್ಗ ಗೌಡ, ಮಿಲನ, ಧೃವಂತ್ ಮಾಡಿದರು.
ಕಾರ್ಯಕ್ರಮದಲ್ಲಿ ಶ್ವೇತಾಂಜಲಿ ಭರತನಾಟ್ಯ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್, ಗುರುಪ್ರಸಾದ್ ಕುಮಾರ್, ಆಶಾಲತಾ, ಇತರರು ಹಾಜರಿದ್ದರು.