ಕಲಾಸೇವಾ, ಅನಿಕೇತನ, ಕನ್ನಡ ವೈಭವ, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರು, ಶ್ವೇತಾಂಜಲಿ ಭರತನಾಟ್ಯ ಶಾಲೆ ಹಾಗೂ ವಿಶ್ವಮಾನವ ಕುವೆಂಪು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ರವರಿಗೆ ರಾಷ್ಟ್ರೀಯ ನಾಟ್ಯ ಕೌಸ್ತುಭ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಚಿಕ್ಕಬಳ್ಳಾಪುರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಓಂ ಶ್ರೀ ಸಾಯಿ ಸೆಂಟರ್ ಫಾರ್ ಪಾರ್ಫಾಮಿಂಗ್ ಆರ್ಟ್ಸ್ ರವರು ಆಯೋಜಿಸಿದ್ದ ರಾಷ್ಟ್ರೀಯ ಅಖಿಲ ಭಾರತೀಯ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪ್ರಶಸ್ತಿ ಸ್ವೀಕರಿಸಿದ ಶ್ರೀಮತಿ ಶ್ವೇತನಾಗರಾಜ್ ರವರು ಮಾತನಾಡುತ್ತಾ "ಭಾರತೀಯ ಭವ್ಯ ಸಂಸ್ಕ್ರತಿಯನ್ನು ಗ್ರಾಮೀಣ ಪ್ರದೇಶದ ನೈಜ ಪ್ರತಿಭೆಗಳಿಗೆ ಸಲ್ಲಿಸಿರುವ ಸೇವೆ, ವಿಶ್ವಮಟ್ಟದಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರಚುರ ಮಾಡಿರುವ ಗಣನೀಯ ಸೇವೆ ಪರಿಗಣಿಸಿ ನಮ್ಮನ್ನು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿ ಅಭಿನಂದನೆ ಸಲ್ಲಿಸಿರುವುದು ಮುಂದಿನ ಎಲ್ಲಾ ಸೇವೆ, ಕೆಲಸಕ್ಕೆ ಹೆಚ್ಚಿನ ಜವಾಬ್ದಾರಿ ಆಗಿದೆ" ಎಂದರು.